ಬೈರುತ್: ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮುಂದುವರೆದಿದೆ. ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಹೆಜ್ಬೊಲ್ಲಾ ನಡುವೆ ಕದನ ವಿರಾಮ ಜಾರಿಗೆ ಬಂದ ಕೆಲವೇ ಗಂಟೆಗಳಲ್ಲಿ ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ಡ್ರೋನ್ ದಾಳಿ ನಡೆಸಿದ್ದು, 5 ಜನ ಮೃತಪಟ್ಟಿದ್ದಾರೆ.
ಇಸ್ರೇಲಿ ಯುದ್ಧ ವಿಮಾನಗಳು ಮತ್ತು ಡ್ರೋನ್‌ಗಳು ಶನಿವಾರ ಬೆಳಗಿನ ಜಾವದವರೆಗೆ ನಬತಿಯೇಹ್ ಪ್ರದೇಶದ ವಸತಿ ಕಟ್ಟಡಗಳು ಮತ್ತು ಮನೆಗಳ ಮೇಲೆ ಸರಣಿ ದಾಳಿ ನಡೆಸಿವೆ ಎಂದು ಲೆಬನಾನ್ ತಿಳಿಸಿದೆ.
ದಕ್ಷಿಣ ಲೆಬನಾನ್‌ನಲ್ಲಿ ಭೀಕರ ಸಮರ ನಡೆಸಿದ್ದ ಇಸ್ರೇಲ್ ಹಾಗೂ ಇರಾನ್ ಬೆಂಬಲಿತ ಲೆಬನಾನ್‌ನ ಹೆಜ್ಬೊಲ್ಲಾ ಉಗ್ರರು ಕದನ ವಿರಾಮ ಒಪ್ಪಂದಕ್ಕೆ ಬಂದಿದ್ದರು. ಅಮೆರಿಕ ಹಾಗೂ ಕತಾರ್‌ನ ಮಧ್ಯಸ್ಥಿಕೆಯಲ್ಲಿ ಇರಾನ್‌ನ ಸಹಕಾರದೊಂದಿಗೆ ಇದು ಜಾರಿಗೆ ಬಂದಿದೆ ಎಂದು ಅಮೆರಿಕ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದರು.

