News Karnataka Kannada
Saturday, April 27 2024
ವಿದೇಶ

14 ಗಂಟೆಯಲ್ಲಿ 800 ಭೂಕಂಪನ: ಐಸ್ ಲ್ಯಾಂಡ್ ನಲ್ಲಿ ತುರ್ತುಪರಿಸ್ಥಿತಿ

Earthquake in Iceland
Photo Credit : News Kannada

ರೇಕ್ಜಾವಿಕ್: ಮೊನ್ನೆ ಮೊನ್ನೆಯಷ್ಟೇ ನೇಪಾಳದಲ್ಲಿ ಭಾರಿ ಪ್ರಮಾಣದ ಭೂಕಂಪನ ಸಂಭವಿಸಿ ನೂರಾರು ಮಂದಿ ಸಾವಿಗೀಡಾಗಿದ್ದರು. ಇದೀಗ ಹಲವಾರು ಬಾರಿ ಭಾರಿ ಪ್ರಮಾಣದ ಭೂಕಂಪನಗಳಿಗೆ ತುತ್ತಾದ ಐಸ್ ಲ್ಯಾಂಡ್ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ರಾಷ್ಟ್ರೀಯ ಪೊಲೀಸ್ ಮುಖ್ಯಸ್ಥರು ಗ್ರಿಂಡವಿಕ್‌ನ ಉತ್ತರದ ಸುಂಧ್‌ ಜುಕಗಿಗರ್‌ನಲ್ಲಿ ತೀವ್ರವಾದ ಭೂಕಂಪದ ಕಾರಣ ನಾಗರಿಕ ರಕ್ಷಣೆಗಾಗಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ” ಎಂದು ನಾಗರಿಕ ರಕ್ಷಣೆ ಮತ್ತು ತುರ್ತು ನಿರ್ವಹಣಾ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

ಭೂಕಂಪಗಳು ಸಂಭವಿಸಿದಕ್ಕಿಂತ ದೊಡ್ಡದಾಗಬಹುದು, ಈ ಘಟನೆಗಳ ಸರಣಿಯು ಜ್ವಾಲಾಮುಖಿ ಸ್ಫೋಟಕ್ಕೆ ಕಾರಣವಾಗಬಹುದು” ಎಂದು ಆಡಳಿತವು ಎಚ್ಚರಿಸಿದೆ. ಐಸ್ಲ್ಯಾಂಡಿಕ್ ಮೆಟ್ ಆಫೀಸ್ (IMO) ಕೆಲವೇ ದಿನಗಳಲ್ಲಿ ಜ್ವಾಲಾಮುಖಿ ಸ್ಫೋಟವು ಸಂಭವಿಸಬಹುದು ಎಂದು ಹೇಳಿದೆ
ರಾಜಧಾನಿ ರೇಕ್ಜಾವಿಕ್‌ಗೆ ಸುಮಾರು 40 ಕಿಲೋಮೀಟರ್‌ ಗಳಷ್ಟು ದೂರದಲ್ಲಿ ಎರಡು ಪ್ರಬಲ ಭೂಕಂಪಗಳು ನಡೆದವು. ದೇಶದ ದಕ್ಷಿಣ ಕರಾವಳಿಯ ಹೆಚ್ಚಿನ ಭಾಗಗಳಲ್ಲಿ, ಕಿಟಕಿಗಳು ಮತ್ತು ಗೃಹೋಪಯೋಗಿ ವಸ್ತುಗಳು ಕಂಪಿಸಿದವು. 14 ಗಂಟೆಯ ಅಂತರದಲ್ಲಿ ಐಸ್ ಲ್ಯಾಂಡ್ ದೇಶದಲ್ಲಿ ಸುಮಾರು 800 ಭೂಕಂಪನಗಳು ಸಂಭವಿಸಿದೆ. ಅಕ್ಟೋಬರ್ ಅಂತ್ಯದಿಂದ ದ್ವೀಪದಲ್ಲಿ ಸುಮಾರು 24,000 ನಡುಕಗಳು ದಾಖಲಾಗಿವೆ ಎಂದು ಐಎಂಒ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು