ಬೆಂಗಳೂರು : ಫೇಸ್ ಬುಕ್ನ ಒಂದು ಜಾಹಿರಾತಿಗೆ ಮರುಳಾದ ಮಹಿಳೆ ಬರೊಬ್ಬರಿ 2 ಲಕ್ಷದ 21 ಸಾವಿರ ರೂ ಹಣ ಕಳೆದುಕೊಂಡಿದ್ದಾರೆ. ಫೇಸ್ ಬುಕ್ನಲ್ಲಿ ಹಳೇ ಕಾಯಿನ್ ಕೊಟ್ಟರೆ, ಕೋಟ್ಯಾಂತರ ರೂ. ಹಣ ನೀಡುವುದಾಗಿ ಜಾಹೀರಾತು ನೀಡಲಾಗಿತ್ತು ಇದರ ಜಾಲಕ್ಕೆ ಬಿದ್ದ ಮಹಿಳೆ ತಮ್ಮ ಹಣ ಕಳೆದುಗೊಂಡಿದ್ದಾರೆ.
ತಮ್ಮಲ್ಲಿದ್ದ 5ಪೈಸೆ, 10ಪೈಸೆ ನಾಣ್ಯಗಳ ಪೋಟೋ ಹಾಕಿದ್ದ ಮಹಿಳೆ, ಬಳಿಕ ಕಂಪನಿಯ ಅಕೌಂಟಿಂಗ್ ಪ್ರೋಸೆಸ್ ಎಂದು ಹಣ ಹಾಕಿಸಿಕೊಂಡು ವಂಚಿಸಿದ್ದಾರೆ. ಈ ಹಿನ್ನಲೆ ಸೆಕ್ಷನ್ 66(C), 66(D)IT ACT 419, 420, ರೀತ್ಯಾ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.