News Karnataka Kannada
Friday, May 03 2024
ವಿದೇಶ

ಕುಟುಂಬದತ್ತ ಹೆಚ್ಚಿನ ಗಮನ ನೀಡಿ ಎಂದ ಚೀನಾ ಅಧ್ಯಕ್ಷ

The Chinese president said to pay more attention to the family
Photo Credit : News Kannada

ಹಾಂಗ್‌ಕಾಂಗ್‌: ದೇಶದಲ್ಲಿ ವಯಸ್ಸಾದವರ ಸಂಖ್ಯೆ ಹೆಚ್ಚುತ್ತಿದೆ. ಜನನ ಪ್ರಮಾಣ ಕುಸಿಯುತ್ತಿದೆ. ಈ ಹಂತದಲ್ಲಿ ಮಹಿಳೆಯರ ಪಾತ್ರ ಅತ್ಯಂತ ಕಠಿಣವಾಗಿದ್ದು, ಕುಟುಂಬದ ಹೊಸ ಪರಿಕಲ್ಪನೆಯನ್ನು ಹುಟ್ಟುಹಾಕಬೇಕಿದೆ ಎಂದು ಚೀನಾ ಅಧ್ಯಕ್ಷ ಷಿ ಜಿನ್‌ ಪಿಂಗ್‌ ಹೇಳಿದ್ದಾರೆ.

ಮಕ್ಕಳ ಪಾಲನೆಗೆ ತಗಲುವ ಖರ್ಚು, ಅವರ ಭವಿಷ್ಯ ಕಟ್ಟುಕೊಡುವಲ್ಲಿನ ಸಮಸ್ಯೆ, ಲಿಂಗ ತಾರತಮ್ಯ ಹಾಗೂ ಮದುವೆ ಆಗಲು ಇಷ್ಟ ಇಲ್ಲದಿರುವ ಸಮಸ್ಯೆಯಿಂದಾಗಿ ಬಹಳಷ್ಟು ಮಹಿಳೆಯರು ಮಕ್ಕಳನ್ನು ಹೊಂದಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಯುವ ಸಮುದಾಯಕ್ಕೆ  ಮದುವೆ, ಮಕ್ಕಳು ಕುಟುಂಬ ಕುರಿತು ಮಾರ್ಗದರ್ಶನ ಮಾಡಬೇಕಿದೆ ಎಂದು ಷಿ ಹೇಳಿದ್ದಾರೆ. ಚೀನಾದ ಸಾಂಖ್ಯಿಕ ಇಲಾಖೆಯು ಜನವರಿಯಲ್ಲಿ ಬಿಡುಗಡೆ ಮಾಡಿದ ವರದಿ ಅನ್ವಯ ಕಳೆದ ಆರು ದಶಕಗಳ ಅಂಕಿಅಂಶಗಳಿಗೆ ಹೋಲಿಸಿದಲ್ಲಿ ಇದೇ ಮೊದಲ ಬಾರಿಗೆ ಚೀನಾದ ಜನಸಂಖ್ಯೆ ವೃದ್ಧಿ ಕುಸಿದಿದೆ. ಈ ನಿಟ್ಟಿನಲ್ಲಿ ಷಿ ಹೇಳಿಕೆ ಮಹತ್ವ ಪಡೆದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು