News Karnataka Kannada
Sunday, April 28 2024
ಕ್ರೀಡೆ

ವಿಶ್ವಕಪ್‌ನಲ್ಲಿ ನ್ಯೂಝಿಲ್ಯಾಂಡ್ ಎದುರು ಭಾರತದ ಅಜೇಯ ಓಟ

India's unbeaten run against New Zealand in the World Cup
Photo Credit : News Kannada

ಮುಂಬೈ: ಇಲ್ಲಿನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಭಾರತ ತಂಡ ನ್ಯೂಝಿಲ್ಯಾಂಡ್ ವಿರುದ್ಧ 70 ರನ್ ಗಳ ಗೆಲುವು ಸಾಧಿಸಿದೆ.

ಮುಹಮ್ಮದ್ ಶಮಿ ಶಿಸ್ತುಬದ್ಧ ಬೌಲಿಂಗ್ ದಾಳಿ ವಿರಾಟ್ ಮತ್ತು ಶ್ರೇಯಸ್ ಅಮೋಘ ಶತಕದ ನೆರವಿನಿಂದ ಭಾರತ ಸೆಮಿಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ಮಣಿಸಿ ಕಳೆದ ಬಾರಿಯ ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಂಡಿದೆ.

ವಿರಾಟ್ ಸಾರ್ವಕಾಲಿಕ ದಾಖಲೆಯ 50 ನೇ ಏಕದಿನ ಶತಕ ಹಾಗೂ ಮುಹಮ್ಮದ್ ಶಮಿ ಜೀವನ ಶ್ರೇಷ್ಟ ವಿಶ್ವಕಪ್‌ನ 4 ಐದು ವಿಕೆಟ್ ಗೊಂಚಲು ನೆರವಿಂದ ಭಾರತ ಫೈನಲ್ ಪ್ರವೇಶಿಸಿದೆ.

ಭಾರತ ನೀಡಿದ 398 ರನ್ ಗುರಿ ಬೆನ್ನತ್ತಿದ ಕಿವೀಸ್ ತೀವ್ರ ಹೋರಾಟ ನೀಡಿ ಸೋಲೊಪ್ಪಿಕೊಂಡಿದೆ. ಭಾರತದ ಕಠಿಣ ಗುರಿ ಬೆನ್ನತ್ತಲು ಸ್ಫೋಟಕ ಆರಂಭದ ನಿರೀಕ್ಷೆಯಲ್ಲಿ ಬ್ಯಾಟಿಂಗ್ ಗೆ ಬಂದಿದ್ದ ಕಿವೀಸ್ ಗೆ ಮುಹಮ್ಮದ್ ಶಮಿ ಆರಂಭಿಕ ಆಘಾತ ನೀಡಿದರು.

ನ್ಯೂಝಿಲ್ಯಾಂಡ್ ಓಪನರ್ ಗಳಾದ ಡೆವೋನ್‌ ಕಾಯ್ದೆ ಹಾಗೂ ರಚನ್ ರವೀಂದ್ರ ಕ್ರಮವಾಗಿ 13 ರನ್ ಗೆ ಮುಹಮ್ಮದ್ ಶಮಿ ಎಸೆತದಲ್ಲಿ ವಿಕೆಟ್ ಕೀಪರ್ ಕೆ ಎಲ್ ರಾಹುಲ್ ಗೆ ಕ್ಯಾಚಿತ್ತು ಔಟ್ ಆದರು. ಬಳಿಕ ಬ್ಯಾಟಿಂಗ್ ಬಂದ ನಾಯಕ ಕೇನ್ ವಿಲಿಯಮನ್ ಹಾಗೂ ಡೆರಲ್ ಮಿಚೆಲ್ ಜೋಡಿ, ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಚೇತರಿಕೆ ನೀಡುವಲ್ಲಿ ಯಶಸ್ವಿಯಾದರು.

ಭಾರತೀಯ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ವಿಲಿಯಮ್ರನ್ 69 ರನ್ ಗಳಿಸಿ ಶಮಿ ಎಸೆತದಲ್ಲಿ ವಿಕೆಟ್ ಒಪ್ಪಿಸಿದರೆ, ಡರೆಲ್ ಮಿಚೆಲ್ 119 ಎಸೆತಗಳಲ್ಲಿ 9 ಬೌಂಡರಿ 7 ಸಿಕ್ಸರ್ ನೆರವಿನಿಂದ ಸ್ಪೋಟಕ ಬ್ಯಾಟಿಂಗ್ ಮುಂದುವರಿಸಿ ಕಿವೀಸ್ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದ್ದರು. ಆದರೆ ಶಮಿ ಬೌಲಿಂಗ್ ನಲ್ಲಿ ಜಡೇಜಾಗೆ ವಿಕೆಟ್ ನೀಡಿ ಪೆವಿಲಿಯನ್ ಸೇರಿಕೊಂಡರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು