News Karnataka Kannada
Thursday, May 02 2024
ಕ್ರೀಡೆ

ಏಕದಿನ ವಿಶ್ವಕಪ್‌: ನ್ಯೂಜಿಲೆಂಡ್‌ ವಿರುದ್ಧ ಪಾಕ್‌ ಗೆ 21 ರನ್‌ ಗಳ ಗೆಲುವು

Icc Cricket World Cup 2019: Pakistan beat New Zealand by 21 runs
Photo Credit : Twitter

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ 35ನೇ ಪಂದ್ಯದಲ್ಲಿ ಪಾಕಿಸ್ತಾನ ಡಕ್‌ವರ್ತ್‌ ಲೂಯಿಸ್‌ ನಿಯಮ ಬಳಸಿ ನ್ಯೂಜಿಲೆಂಡ್ ತಂಡವನ್ನು 21 ರನ್ ಗಳಿಂದ ಸೋಲಿಸಿದೆ. ಈ ಮೂಲಕ ಸೆಮಿಫೈನಲ್ ಆಸೆಯನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 6 ವಿಕೆಟ್‌ ನಷ್ಟಕ್ಕೆ 401 ರನ್ ಗಳಿಸಿತ್ತು. ಕಿವೀಸ್ ಪರ ರಚಿನ್ ರವೀಂದ್ರ 108 ರನ್‌ಗಳ ಅದ್ಬುತ ಆಟ ಪ್ರದರ್ಶಿಸಿದರು. ಕಿವೀಸ್ ನೀಡಿದ 402 ರನ್ ಗಳ ಗೆಲುವಿನ ಬೆನ್ನಟ್ಟಿದ್ದ ಪಾಕಿಸ್ತಾನ ಆಡುವಾಗ ಎರಡು ಬಾರಿ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತ್ತು.

ಆಟ ನಿಲ್ಲಿಸುವ ಹೊತ್ತಿಗೆ ಪಾಕಿಸ್ತಾನ 25.3 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 200 ರನ್ ಗಳಿಸಿತ್ತು. ನಾಯಕ ಬಾಬರ್ ಅಜಮ್ ಅಜೇಯ 66 ಹಾಗೂ ಪಾಕರ್ ಜಮಾನ್ ಅಜೇಯ 126 ರನ್ ಗಳಿಸಿದರು. ಕೊನೆಗೆ ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ 21 ರನ್ ಗಳಿಂದ ಮುಂದಿದ್ದ ಪಾಕಿಸ್ತಾನವನ್ನು ವಿಜೇತರೆಂದು ಘೋಷಿಸಲಾಯಿತು. ಜಮಾನ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು