News Karnataka Kannada
Sunday, May 12 2024
ಗುಜರಾತ್

ತಂದೆ ಕಿರುಕುಳಕ್ಕೆ ಬೇಸತ್ತು ತಾಯಿ ಆತ್ಮಹತ್ಯೆಗೆ ಯತ್ನ: ಪ್ರಾಣ ಉಳಿಸಿದ 7 ವರ್ಷದ ಬಾಲಕಿ

: ಅಪ್ಪನ ದೌರ್ಜನ್ಯಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ತಾಯಿಯನ್ನು ಏಳು ವರ್ಷದ ಬಾಲಕಿಯೊಬ್ಬಳು ಕಾಪಾಡಿದ ಘಟನೆ ಗುಜರಾತ್ನ ಅಹಮದಾಬಾದ್ನಲ್ಲಿ ನಡೆದಿದೆ.
Photo Credit : NewsKarnataka

ಅಹಮದಾಬಾದ್​​: ಅಪ್ಪನ ದೌರ್ಜನ್ಯಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ತಾಯಿಯನ್ನು ಏಳು ವರ್ಷದ ಬಾಲಕಿಯೊಬ್ಬಳು ಕಾಪಾಡಿದ ಘಟನೆ ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದಿದೆ.

ತುರ್ತು ಪರಿಸ್ಥಿತಿಯಲ್ಲಿ ಸಹಾಯವಾಣಿಗೆ ಕರೆ ಮಾಡಬೇಕು ಎಂದು ಶಿಕ್ಷಕರು ಹೇಳಿಕೊಟ್ಟ ಪಾಠ ತಾಯಿಯ ಪ್ರಾಣವನ್ನು ಉಳಿಸಿದೆ. ಕೈಯ ರಕ್ತನಾಳ ಕತ್ತರಿಸಿಕೊಂಡು ಅಸ್ವಸ್ಥಗೊಂಡು ಬಿದ್ದಿದ್ದ ತಾಯಿಯನ್ನು ನೋಡಿಯೂ ಗಾಬರಿಯಾಗದೆ ಬಾಲಕಿ ಸಹಾಯವಾಣಿಗೆ ಕರೆ ಮಾಡಿ ಆಂಬ್ಯುಲೆನ್ಸ್ ಕರೆಸಿ ಪ್ರಾಣ ಉಳಿಸಿದ್ದಾಳೆ.

ಕಳೆದ ಗುರುವಾರ ರಾತ್ರಿ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ ಎಂದು ಗುಜರಾತ್​ನ ಅಭಯಂ 181 ಸಹಾಯವಾಣಿ ಅಧಿಕಾರಿಗಳು ಹೇಳಿದ್ದಾರೆ. ಮಣಿಕಟ್ಟು ಸೀಳಿ ಬಿದ್ದಿರುವ ತಾಯಿಗೆ ತೀವ್ರ ರಕ್ತಸ್ರಾವವಾಗುತ್ತಿದೆ ಎಂದು ಬಾಲಕಿಯೊಬ್ಬಳು ಅವರಿಗೆ ಕರೆ ಮಾಡಿದ್ದರು ತಕ್ಷಣ ಅವರ ಅಲ್ಲಿಗೆ ಹೋಗಿದ್ದಾಗ ಮಹಿಳೆ ಚಿಂತಾಜನಕ ಸ್ಥಿತಿಯಲ್ಲಿ ಬಿದ್ದಿದ್ದರು. ಬಳಿಕ ಅವರು ಮಹಿಳೆಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು