News Karnataka Kannada
Friday, May 03 2024
ಮನರಂಜನೆ

ಭಾರತ ವಿಶ್ವಕಪ್ ಗೆದ್ದರೆ ವಿಶಾಖಪಟ್ಟಣದ ಬೀಚ್​ನಲ್ಲಿ ಬೆತ್ತಲಾಗಿ ಓಡಾಡುತ್ತೇನೆ: ರೇಖಾ ಬೋಜ್

Will walk naked on visakhapatnam beach if India wins World Cup: Rekha Bhoj
Photo Credit : News Kannada

ವಿಶಾಖಪಟ್ಟಣ: ತೆಲುಗು ನಟಿ ರೇಖಾ ಬೋಜ್ ಅವರು, ಈ ಬಾರಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡ ಚಾಂಪಿಯನ್ ಆದರೆ ನಾನು ವಿಶಾಖಪಟ್ಟಣದ ಬೀಚ್​ನಲ್ಲಿ ಬೆತ್ತಲೆಯಾಗಿ ಓಡಾಡುತ್ತೇನೆ ಎಂದು ಫೇಸ್​ಬುಕ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ನಂತರ ಮತ್ತೊಂದು ಫೊಸ್ಟ್​ನಲ್ಲಿ ”ಧರ್ಮದ ಕಾರಣಕ್ಕೆ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಗೆಲ್ಲಲಿ ಎಂದು ಕೋರಿಕೊಳ್ಳುತ್ತಿದ್ದವರು ಸಹ ಈಗ ನನ್ನ ಘೋಷಣೆ ನಂತರ ಭಾರತ ಗೆಲ್ಲಲಿ ಎಂದು ಪ್ರಾರ್ಥಿಸುತ್ತಿದ್ದಾರೆ” ಎಂದಿದ್ದಾರೆ.

ನಟಿಯ ಪೋಸ್ಟ್​ಗೆ ಹಲವಾರು ಪ್ರತಿಕ್ರಿಯೆಗಳು ಬಂದಿದ್ದು, ಹಲವರು ಪೋಸ್ಟ್ ಅನ್ನು ಖಂಡಿಸಿದ್ದರೆ. ಇನ್ನು ಕೆಲವರು ಫೈನಲ್ ಪಂದ್ಯವನ್ನು ವಿಶಾಖಪಟ್ಟಣದ ಬೀಚ್​ನಲ್ಲಿಯೇ ನಿಂತು ವೀಕ್ಷಿಸುತ್ತೇವೆ ಎಂದು ಕೀಟಲೆ ಮಾಡಿದ್ದಾರೆ.

ವಿಶ್ವಕಪ್ ಗೆದ್ದರೆ ಬೆತ್ತಲಾಗುತ್ತೇನೆ ಎಂದು ನಟಿಯರು ಹೇಳುವುದು ಇದು ಹೊಸತೇನಲ್ಲ. ಇದಕ್ಕೂ ಮುಂಚೆ ನಟಿ ಪೂನಂ ಪಾಂಡೆ ಮೊದಲ ಬಾರಿ ಹೀಗೊಂದು ಹೇಳಿಕೆ ನೀಡಿದ್ದರು.

ರೇಖಾ ಬೋಜ್, ತೆಲುಗಿನ ನಟಿ. ಮಾಂಗಲ್ಯಂ’, ‘ಸ್ವಾತಿ ಚಿನುಕು’, ‘ರಂಗೀಲಾ’, ‘ಕಾಲಾಯ ತಸ್ಮಾಯ ನಾಮಃ’ ಸೇರಿದಂತೆ ತೆಲುಗಿನ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು