ಬಾಗ್ದಾದ್: ಇರಾಕ್ನ ಟಿಕ್ ಟಾಕ್ ಸ್ಟಾರ್ ಓಂ ಫಹಾದ್ ರನ್ನು ಬಾಗ್ದಾದ್ನ ಜೊಯೌನಾ ಜಿಲ್ಲೆಯಲ್ಲಿ ತಡ ರಾತ್ರಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ.
ಎಸ್ಯುವಿ ಕಾರಿನಲ್ಲಿ ಕುಳಿತಿದ್ದ ಫಹಾದ್ ಮೇಲೆ ಕಪ್ಪು ಬಟ್ಟೆ ಧರಿಸಿ ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಏಕಾಏಕಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಘಟನೆ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಂತರಿಕ ವ್ಯವಹಾರಗಳ ಸಚಿವಾಲಯ ಈ ಭೀಕರ ಕೃತ್ಯದ ಬಗ್ಗೆ ಪ್ರತಿಕ್ರಿಯಿಸಿದ್ದು, ಸೂಕ್ತ ತನಿಖೆ ಕೈಗೊಳ್ಳುವುದಾಗಿ ತಿಳಿಸಿದೆ.
ಫಹಾದ್ ಅವರ ಮೂಲ ಹೆಸರು ಘುಫ್ರಾನ್ ಸವಧಿಯಾಗಿದ್ದು, ಅವರು ಟಿಕ್ಟಾಕ್ನಲ್ಲಿ ಪಾಪ್ ಸಂಗೀತಗಳಿಗೆ ಡಾನ್ಸ್ ಮಾಡಿರುವ ವಿಡೀಯೋಗಳನ್ನು ಶೇರ್ ಮಾಡುತ್ತಿದ್ದರು.
ಅವರು ಸೋಶಿಯಲ್ ಮೀಡಿಯಾದಲ್ಲಿ 5 ಲಕ್ಷ ಫಾಲೋವರ್ಸ್ ಅನ್ನು ಹೊಂದಿದ್ದರು. ಇದೀಗ ಅವರ ಬರ್ಬರ ಹತ್ಯೆಗೆ ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ. ಪೊಲೀಸರ ತನಿಖೆ ಮುಂದುವರೆದಿದೆ.
ಇವರು 2023ರಲ್ಲಿ ಮಾಡಿದ್ದ ಅಶ್ಲೀಲ ವಿಡಿಯೋಗಳು ಭಾರೀ ಸದ್ದು ಮಾಡಿದ್ದು, ಆ ವಿಡಿಯೋಗಳು 1 ಮಿಲಿಯನ್ಗೂ ಅಧಿಕ ವ್ಯೂಸ್ ಪಡೆದಿದ್ದವು. ಇದಾದ ಬಳಿಕ ಆಕೆಯ ಬಂಧನವಾಗಿದ್ದು, ಕೋರ್ಟ್ ಆರು ತಿಂಗಳ ಜೈಲು ಶಿಕ್ಷೆಯನ್ನೂ ವಿಧಿಸಿತ್ತು ಎಂಬ ಮಾಹಿತಿ ತಿಳಿದು ಬಂದಿದೆ.