Showing 20 of 2255 posts • Page 103 of 113
ಫೆಂಗಲ್ ಚಂಡ ಮಾರುತದ ಎಫೆಕ್ಟ್ ನಿಂದ ಮೈಸೂರು ಜಿಲ್ಲಾದ್ಯಂತ ಬಿಟ್ಟು ಬಿಡದೆ ಮಳೆಯಾಗುತ್ತಿದ್ದು, ಕಟಾವು ಮಾಡಿದ್ದ ಭತ್ತ ಜಲಾವೃತ್ತವಾಗಿದ್ದು,
ಯಾವುದೇ ಯೋಜನೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಶೀಘ್ರವಾಗಿ ಅವರಿಗೆ ಸೌಲಭ್ಯಗಳು ದೊರೆಯುವಂತೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಜಿ.ಲಕ್ಷೀಕಾಂತ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.
ಮತಾಂದರಿಗೆ ಕಾಯ್ದೆ ಮೂಲಕ ಬಲ ಕೊಡುವ ಕೆಲಸ ಮಾಡಿದ್ದು ಕಾಂಗ್ರೆಸ್. ಓಟ್ ಬ್ಯಾಂಕ್ ರಾಜಕಾರಣಕ್ಕೋಸ್ಕರ ಇದನ್ನ ಮಾಡಿದ್ದು, ವಖ್ಫ್ ಬೋರ್ಡ್ ಗೆ ದಾನ ಕೊಟ್ಟಿರೋ ಜಾಗ ಮಾತ್ರ ವಖ್ಫ್ ಗೆ ಸೇರಿದ್ದು
ಮೈಸೂರಿನ ಬಿಜೆಪಿ ಕಚೇರಿಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಸುದ್ದಿಗೋಷ್ಠಿ ನಡೆಸಿದ್ದು, ವಖ್ಫ್ ಹೋರಾಟವಾಗಿ ಮೈಸೂರಿಗೆ ಆರ್ ಅಶೋಕ್ ನೇತೃತ್ವದ ತಂಡ ಭೇಟಿ ನೀಡಿದೆ.
ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಕಾಡಾನೆಗಳ ಹಿಂಡು ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿವೆ. ಮೈಸೂರು ಜಿಲ್ಲೆಯ ತಿ. ನರಸೀಪುರ ತಾಲ್ಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ಕಾಡಾನೆಗಳು ಲಗ್ಗೆ ಇಟ್ಟು ದಾಂಧಲೆ ನಡೆಸಿವೆ.
ಇಂದಿರಾ ಕ್ಯಾಂಟೀನ್ ನೌಕರರನ್ನು ಕಾಯಂಗೊಳಿಸಬೇಕು, ಸಂಬಳ ನೀಡದೇ ಇರುವ ಕಂಪನಿಯನ್ನು ವಜಾ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಮಹಾನಗರ ಪಾಲಿಕೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ನಗರದ ವಾರ್ಡ್ ನಂಬರ್ 56ರ ಕೃಷ್ಣಮೂರ್ತಿಪುರಂ ಹಾಗೂ ಲಕ್ಷ್ಮಿಪುರಂ ವ್ಯಾಪ್ತಿಯಲ್ಲಿ ಮದ್ಯವ್ಯಸನಿಗಳು, ಗಾಂಜಾ ಸೇವನೆ ಮಾಡೋರ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು,
ಚಳಿಗಾಲ ಆರಂಭವಾಗಿರುವ ಹಿನ್ನಲೆಯಲ್ಲಿ ನಗರದ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ನಿರಾಶ್ರಿತರಿಗೆ ಹಾಗೂ ಅಸಹಾಯಕರಿಗೆ ಗ್ರಾಮೀಣ ಪ್ರದೇಶದ ಹಾಡಿ ಜನಾಂಗಕ್ಕೆ ಹೊದಿಕೆ ವಿತರಣಾ ಅಭಿಯಾನವನ್ನು ಡಿಸೆಂಬರ್ 1ರಿಂದ ಹಮ್ಮಿಕೊಂಡಿದೆ.
ಹೊಸ ಪಕ್ಷವೋ, ತೃತೀಯ ರಂಗವೋ ಅಥವಾ ಜೆಡಿಎಸ್ ಬಲವರ್ಧನೆಯೋ ಎಲ್ಲವನ್ನೂ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಆಧರಿಸಿ ತೀರ್ಮಾನ ಮಾಡುತ್ತೇವೆ ಎಂದು ಕೇಂದ್ರ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ತಿಳಿಸಿದರು.
ಕಡೇ ಕಾರ್ತಿಕದ ಅಂಗವಾಗಿ ಹುಣಸೂರು ತಾಲೂಕಿನ ಧರ್ಮಾಪುರದಲ್ಲಿ ಎಲ್ಲಾ ಜನಾಂಗದವರು ಒಟ್ಟಾಗಿ ಸೇರಿ ಆಚರಿಸುವ ಈಶ್ವರ, ಮಹದೇಶ್ವರ, ಚನ್ನಕೇಶವ ಸ್ವಾಮಿಯ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು.
ಮೊಬೈಲ್ ಪ್ರಸ್ತುತ ಸಮಾಜದ ಸಾಮಾಜಿಕ ವ್ಯವಸ್ಥೆಯನ್ನೇ ಬದಲಿಸಿದ್ದು, ಇದರಿಂದ ಪರಸ್ಪರ ಒಬ್ಬರಿಗೊಬ್ಬರು ಮಾತನಾಡಿ ಕೊಳ್ಳುವ ಪ್ರಕ್ರಿಯೆಯನ್ನೇ ಮರೆಸಿದೆ ಎಂದು ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಬೇಸರ ವ್ಯಕ್ತಪಡಿಸಿದರು.
ಲೋಕಾಯುಕ್ತ ಸಂಸ್ಥೆಯವರೇ ಮುಡಾ ಹಗರಣದ ಆರೋಪಿಗಳೊಂದಿಗೆ ಶಾಮೀಲಾಗಿ ಆರೋಪಿಗಳನ್ನು ರಕ್ಷಣೆ ಮಾಡುವ ಕೆಲಸ ಮಾಡಿದ್ದಾರೆ. ಹೀಗಾಗಿ ಎಲ್ಲ ಮಾಹಿತಿ, ದಾಖಲಾತಿಗಳನ್ನು ನ್ಯಾಯಾಲಯದ ಗಮನಕ್ಕೆ ತಂದು ದಾಖಲೆ ಸಲ್ಲಿಸಿ,
ಎಚ್.ಡಿ.ಕುಮಾರಸ್ವಾಮಿ ಬಳಿ ನನ್ನ ಮಾತು ಯಾವುದೂ ನಡೆದಿಲ್ಲ. ನನ್ನಿಂದ ರಾಜಕೀಯವಾಗಿ ತೊಂದರೆಯಾಗಿದ್ದರೆ ಚಾಮುಂಡಿಬೆಟ್ಟಕ್ಕೆ ಬರಲಿ.
ನಮ್ಮ ದೇಶದ ಪಾರಂಪರಿಕ ಕಲೆಗಳನ್ನು ಮುಂದಿನ ಪೀಳಿಗೆಗೆ ದಾಟಿಸಬೇಕಾದರೇ ಅವುಗಳನ್ನು ಉಳಿಸಿ ಬೆಳೆಸಲು ಎಲ್ಲರ ಪ್ರೋತ್ಸಾಹ ಮತ್ತು ಸಹಕಾರ ಅವಶ್ಯ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯ ಪಟ್ಟರು.
ಕನ್ನಡ ಉಳಿಸಿ-ಕನ್ನಡ ಬೆಳೆಸಿ ಎನ್ನುವುದನ್ನು ನಿಲ್ಲಿಸಿ ಕನ್ನಡವನ್ನು ಬಳಸಿ ಬೆಳೆಸುವ ಕೆಲಸವಾಗಬೇಕಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಹೇಳಿದರು.
ಭಾರಿ ಅಗ್ನಿ ಅನಾಹುತ ಸಂಭವಿಸಿದ ಘಟನೆ ಮೈಸೂರು ಜಿಲ್ಲೆಯಲ್ಲಿ ಹೆಚ್. ಡಿ. ಕೋಟೆಯ ಪಡುವನಕೋಟೆ ಗ್ರಾಮದಲ್ಲಿನ ಗ್ಯಾರೇಜ್ ನಲ್ಲಿ ನಡೆದಿದೆ. ಗ್ಯಾರೇಜ್ ನಲ್ಲಿದ್ದ 18 ದ್ವಿಚಕ್ರ ವಾಹನ ಹಾಗೂ 2 ಕಾರುಗಳು ಸುಟ್ಟು ಕರಕಲಾಗಿದೆ.
ತಾಲೂಕಿನ ತಗಡೂರು ಗ್ರಾಮದಲ್ಲಿ ವಾತ್ಸಲ್ಯ ಫಲಾನುಭವಿ ಗೌರಮ್ಮ ಅವರಿಗೆ ವಾತ್ಸಲ್ಯ ಮನೆಯನ್ನು ಮೈಸೂರು ಪ್ರಾದೇಶಿಕ ನಿರ್ದೇಶಕ ಜಯರಾಮ್ ನೆಲ್ಲಿತಾಯ ಹಸ್ತಾಂತರ ಮಾಡಿದರು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಅರಣ್ಯ ವ್ಯಾಪ್ತಿಯ ಬೇಲದಕುಪ್ಪೆ ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಡೆ ಕಾರ್ತಿಕ ಮಾಸದ ಹಿನ್ನಲೆಯಲ್ಲಿ ನ.23 ರಿಂದ 26ರವರೆಗೆ ನಾಲ್ಕು ದಿನಗಳ ಕಾಲ ಜಾತ್ರೆ ನಡೆಯಲಿದೆ.
ಸಹಜ ಸಮೃದ್ಧ ಮತ್ತು ಅಕ್ಷಯಕಲ್ಪ ಆರ್ಗಾನಿಕ್ಸ್ ಆಶ್ರಯದಲ್ಲಿ ನಂಜರಾಜ ಬಹದ್ದೂರ್ ಛತ್ರದಲ್ಲಿ ಮೂರು ದಿನಗಳ ಬಾಳೆ ಮೇಳ ಆರಂಭವಾಗಿದ್ದು, ಈ ಮೇಳದಲ್ಲಿ ಬಗೆ ಬಗೆಯ ಬಾಳೆಹಣ್ಣುಗಳು ಗಮನಸೆಳೆಯುತ್ತಿದ್ದು ಬಾಳೆಹಣ್ಣು ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ.
ಹೆಚ್.ಡಿ.ಕೋಟೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಣಿಸಿಕೊಂಡು ತೊಂದರೆ ಕೊಡುತ್ತಿರುವ ಹುಲಿ ಸೆರೆ ಹಿಡಿಯುವಂತೆ ಒತ್ತಾಯಿಸಿ ಪಟ್ಟಣದಲ್ಲಿರುವ ವಲಯ ಅರಣ್ಯ ಅಧಿಕಾರಿಗಳ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.