Showing 20 of 268 posts • Page 2 of 14
ಜಾಗತಿಕ ಮಾರುಕಟ್ಟೆಯಲ್ಲಿ ವಿಮಾನ ಇಂಧನ ದರಗಳು ಗಣನೀಯವಾಗಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ, ಅಂತರರಾಷ್ಟ್ರೀಯ ವಿಮಾನ ಟಿಕೆಟ್ಗಳ ಮೇಲಿನ ಇಂಧನ ಸಚಾರ್ಜ್ ಅನ್ನು ಸಂಸ್ಥೆಯು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿದೆ.
ಕಳೆದೆರಡು ದಿನಗಳಿಂದ ಭಾರೀ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಅಲ್ಪ ಮಟ್ಟಿಗೆ ಇಳಿಕೆಯಾಗಿದೆ.
ಚಿನ್ನದ ಬೆಲೆಯಲ್ಲಿ ಕುಸಿತ ಕಂಡಿದೆ. 24 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಇಂದು ಸುಮಾರು 1260 ರುಪಾಯಿ ಇಳಿಕೆಯಾಗಿದೆ.
ಎಲ್ಪಿಜಿ ಪೂರೈಕೆ ಮೇಲಿನ ನಿರ್ಬಂಧ ತೆರವುಗೊಳಿಸಿದ ಬೆನ್ನಲ್ಲೇ ಕೇಂದ್ರ ವಾಣಿಜ್ಯ ಬಳಕೆಯ ಎಲ್ಪಿಜಿ ದರ 183.50 ರೂ. ಇಳಿಕೆ ಮಾಡಿದೆ.
114 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರುವ ಎಂಸಿಸಿ ಬ್ಯಾಂಕ್ ಲಿಮಿಟೆಡ್, 31 ಮಾರ್ಚ್ 2026ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ಎಲ್ಲಾ ಪ್ರಮುಖ ವ್ಯವಹಾರ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ.
ಜೂನ್ ಆರಂಭದಿಂದಲೂ ಏರಿಳಿತ ಕಾಣುತ್ತಿದ್ದ ಚಿನ್ನದ ದರದಲ್ಲಿ ಇಂದು ಭಾರೀ ಕುಸಿತ ಕಂಡುಬಂದಿದೆ.
ಪೆಟ್ರೋಲ್, ಡೀಸೆಲ್ ಬಳಿಕ ಇದೀಗ ಸಂಕುಚಿತ ನೈಸರ್ಗಿಕ ಅನಿಲ ದರ ಮತ್ತೆ ಪ್ರತಿ ಕೆಜಿಗೆ 2 ರೂ.ಗಳಷ್ಟು ಹೆಚ್ಚಳ ಮಾಡಲಾಗಿದೆ. ಸರ್ಕಾರಿ ಅನಿಲ ವಿತರಕ ಮಹಾನಗರ ಗ್ಯಾಸ್ ಲಿಮಿಟೆಡ್ ಸಂಸ್ಥೆಯು ಮುಂಬೈನಲ್ಲಿ ಇಂದಿನ ಅನ್ವಯವಾಗುವಂತೆ ಹೊಸ ದರ ಘೋಷಿಸಿದೆ.
ಚಿನ್ನದ ಬೆಲೆಯಲ್ಲಿ ಇಂದು ಗಮನಾರ್ಹ ಇಳಿಕೆ ಕಂಡುಬಂದಿದೆ. ಆಭರಣ ತಯಾರಿಕೆಗೆ ಹೆಚ್ಚಾಗಿ ಬಳಸಲಾಗುವ 22 ಕ್ಯಾರೆಟ್ ಚಿನ್ನದ ದರದಲ್ಲಿ ಇಂದು ಇಳಿಕೆಯಾಗಿದೆ.
ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಹಾಲಿನ ದರ ಏರಿಕೆಯಾಗಿದೆ.
ಇಟಲಿ ಪ್ರಧಾನಿ ಮೆಲೋನಿಗೆ, ಪ್ರಧಾನಿ ಮೋದಿ ನೀಡಿದ ಉಡುಗೊರೆ, ತ್ವರಿತ ವಾಣಿಜ್ಯ ಬೇಡಿಕೆಗೆ ನಾಂದಿ ಹಾಡಿದೆ.
: ದೇಶಾದ್ಯಂತ ಗ್ರಾಹಕರಿಗೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಬೆಲೆ ಏರಿಕೆಯ ಶಾಕ್ ನೀಡಿವೆ.
ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್ಗೆ 3 ರೂಪಾಯಿ ಏರಿಕೆಯಾಗಿದೆ. ತೈಲ ಮಾರಾಟ ಕಂಪನಿಗಳು ಜಾಗತಿಕ ಮಾರುಕಟ್ಟೆಯ ಇಂಧನ ದರ ಏರಿಕೆಗೆ ಅನುಗುಣವಾಗಿ ದರವನ್ನು ಏರಿಕೆ ಮಾಡಿದೆ.
ಸ್ಥಿರ ಧಾರಣೆ ಇಲ್ಲದ ರಬ್ಬರ್ ಬೆಲೆ ದಶಕದ ಬಳಿಕ 250 ರೂ. ಗಡಿ ದಾಟಿದೆ.
ಎಂಸಿಸಿ ಬ್ಯಾಂಕ್ ವತಿಯಿಂದ 2026 ಏಪ್ರಿಲ್ 25 ಮತ್ತು 26ರಂದು ಗೋವಾದ Courtyard by Marriottನಲ್ಲಿ ಅಂತರರಾಜ್ಯ ಬ್ಯಾಂಕಿಂಗ್ ಸಂವಾದವನ್ನು ಆಯೋಜಿಸಲಾಗಿತ್ತು.
ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಳಿತಗಳನ್ನು ಕಾಣುತ್ತಿದೆ. ಇಂದು ಮಂಗಳವಾರ ಚಿನ್ನದ ಬೆಲೆಯಲ್ಲಿ ಗ್ರಾಮ್ಗೆ 135 ರೂಗಳಷ್ಟು ಹೆಚ್ಚಳ ಆಗಿದೆ. ಇದರ ಬೆಲೆ ಮತ್ತೊಮ್ಮೆ 14,000 ರೂ ಗಡಿ ದಾಟಿ ಹೋಗಿದೆ.
ಚಿನ್ನ ಮತ್ತು ಬೆಳ್ಳಿ ದರಗಳು ಈ ವಾರದ ಆರಂಭದಲ್ಲಿ ಮತ್ತೆ ಇಳಿಕೆಯಾಗಿವೆ. ಅಮೆರಿಕ ಮತ್ತು ಇರಾನ್ ನಡುವೆ ಇಸ್ಲಾಮಾಬಾದ್ನಲ್ಲಿ ನಡೆದ ಶಾಂತಿ ಮಾತುಕತೆಗಳು ವಿಫಲಗೊಂಡ ಪರಿಣಾಮ, ಜಾಗತಿಕ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚಾಗಿದ್ದು, ಬುಲಿಯನ್ ಮಾರುಕಟ್ಟೆಯಲ್ಲಿ ಚಂಚಲತೆ ಉಂಟಾಗಿದೆ. ಇದರಿಂದಾಗಿ ಇಂದು ಚಿನ್ನ ಮತ್ತು ಬೆಳ್ಳಿ ಎರಡರ ಬೆಲೆಗಳಲ್ಲೂ ಇಳಿಕೆ ಕಂಡುಬಂದಿದೆ.
ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳ (EV) ಬೆಲೆ ಶೀಘ್ರದಲ್ಲೇ ಏರಿಕೆಯಾಗಲಿದೆ. ಬ್ಯಾಟರಿ ಚಾಲಿತ ವಾಹನಗಳಾದ ಕಾರುಗಳು, ಜೀಪುಗಳು, ಓಮ್ನಿ ಬಸ್ಗಳು ಮತ್ತು ಖಾಸಗಿ ಸೇವಾ ವಾಹನಗಳಿಗೆ ಇದುವರೆಗೆ ನೀಡಲಾಗುತ್ತಿದ್ದ 100 ಪ್ರತಿಶತ ರಸ್ತೆ ತೆರಿಗೆ ವಿನಾಯಿತಿಯನ್ನು ಅಂತ್ಯಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಒಂದೇ ದಿನಕ್ಕೆ ಬೆಳ್ಳಿ ಬೆಲೆ 18,200 ರೂ.ಗೆ ಏರಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ದರ 1750 ರೂ. ಹೆಚ್ಚಳವಾಗಿದ್ದು 1,46,400 ರೂ. ತಲುಪಿದೆ.
ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಬ್ಲಾಕ್ಬಸ್ಟರ್ ಟಿಪ್ಪಣಿಯೊಂದಿಗೆ ವಾರವನ್ನು ಪ್ರಾರಂಭಿಸಿದೆ. ಎರಡೂ ಲೋಹಗಳು ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದವು,
ಜಿಯೋದಿಂದ “ಜಿಯೋ ಹ್ಯಾಪಿ ನ್ಯೂ ಇಯರ್ 2026 ಪ್ಲಾನ್ ಗಳು” ಘೋಷಣೆ ಮಾಡಲಾಗಿದೆ. ಇದರ ಮೂಲಕ ಜಿಯೋ ಸಿಮ್ ಬಳಸುವ ಗ್ರಾಹಕರಿಗೆ ಈ ಹಿಂದೆಂದೂ ದೊರೆಯದಂಥ ಬೆನಿಫಿಟ್ ಗಳು ಸಿಗುತ್ತವೆ.