ಬೆಂಗಳೂರು : ಚಿನ್ನದ ಬೆಲೆಯಲ್ಲಿ ಇಂದು ಗಮನಾರ್ಹ ಇಳಿಕೆ ಕಂಡುಬಂದಿದೆ. ಆಭರಣ ತಯಾರಿಕೆಗೆ ಹೆಚ್ಚಾಗಿ ಬಳಸಲಾಗುವ 22 ಕ್ಯಾರೆಟ್ ಚಿನ್ನದ ದರದಲ್ಲಿ ಇಂದು ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆ 40 ರೂಪಾಯಿ ಇಳಿಕೆಯಾಗಿ 14,620 ರೂಪಾಯಿ ತಲುಪಿದೆ. ಅದೇ ರೀತಿ 10 ಗ್ರಾಂ (1 ತೊಲ) ಆಭರಣ ಚಿನ್ನದ ಬೆಲೆಯು ಬರೋಬ್ಬರಿ 400 ರೂಪಾಯಿ ಕಡಿತಗೊಂಡು 1,46,200 ರೂಪಾಯಿಗೆ ಇದೆ.
24 ಕ್ಯಾರೆಟ್ ಅಪರಂಜಿ ಚಿನ್ನದ ದರದಲ್ಲೂ ಭಾರಿ ಕುಸಿತ ದಾಖಲಾಗಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 24 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಮೇಲೆ 44 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಮೇಲೆ 440 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು 1 ಗ್ರಾಂ ಶುದ್ಧ ಚಿನ್ನದ ಬೆಲೆ 15,949 ರೂಪಾಯಿ ಆಗಿದ್ದರೆ, 10 ಗ್ರಾಂ ಚಿನ್ನದ ಬೆಲೆ 1,59,490 ರೂಪಾಯಿ ಆಗಿದೆ.
ಇನ್ನುಳಿದಂತೆ ಬಜೆಟ್ ಸ್ನೇಹಿ ಆಭರಣಗಳಿಗೆ ಬಳಕೆಯಾಗುವ 18 ಕ್ಯಾರೆಟ್ ಚಿನ್ನದ ದರವೂ ಸಹ ಇಳಿಮುಖವಾಗಿದೆ. ಗುರುವಾರದ ದರಕ್ಕೆ ಹೋಲಿಕೆ ಮಾಡಿದರೆ ಇಂದು 18 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 33 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಬೆಲೆಯಲ್ಲಿ 330 ರೂಪಾಯಿ ಕಡಿಮೆಯಾಗಿದೆ. ಈ ಕುಸಿತದ ನಂತರ ಇಂದು ಮಾರುಕಟ್ಟೆಯಲ್ಲಿ 1 ಗ್ರಾಂಗೆ 11,962 ರೂಪಾಯಿ ಮತ್ತು 10 ಗ್ರಾಂಗೆ 1,19,620 ರೂಪಾಯಿ ದರ ನಿಗದಿಯಾಗಿದೆ.
ಇಂದಿನ ಮಾರುಕಟ್ಟೆಯ ದರ ಪಟ್ಟಿ
22 ಕ್ಯಾರೆಟ್ ಆಭರಣ ಚಿನ್ನ (10 ಗ್ರಾಂ): ₹1,46,200 (₹400 ಇಳಿಕೆ)
24 ಕ್ಯಾರೆಟ್ ಶುದ್ಧ ಚಿನ್ನ (10 ಗ್ರಾಂ): ₹1,59,490 (₹440 ಇಳಿಕೆ)
18 ಕ್ಯಾರೆಟ್ ಚಿನ್ನ (10 ಗ್ರಾಂ): ₹1,19,620 (₹330 ಇಳಿಕೆ)
ಬೆಳ್ಳಿ ದರ (ಪ್ರತಿ 1 ಕೆ.ಜಿ ಗೆ): ₹2,85,000 (ಸ್ಥಿರ)

