ನವದೆಹಲಿ: ಒಂದೇ ದಿನಕ್ಕೆ ಬೆಳ್ಳಿ ಬೆಲೆ 18,200 ರೂ.ಗೆ ಏರಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ದರ 1750 ರೂ. ಹೆಚ್ಚಳವಾಗಿದ್ದು 1,46,400 ರೂ. ತಲುಪಿದೆ.
ಬೆಂಗಳೂರಲ್ಲಿ ಬೆಳ್ಳಿಯ ಬೆಲೆ ಕೆಜಿಗೆ 2,79,100 ರೂ.ಗೆ ತಲುಪಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,600 ರೂ. ಏರಿಕೆಯಾಗಿ 1,34,200 ರೂ.ಗೆ ಮಾರಾಟವಾಗಿದೆ.
ದೆಹಲಿ ಮಾರುಕಟ್ಟೆಯಲ್ಲಿ ಬೆಳ್ಳಿ ದರ 15,000 ರೂ. ಏರಿಕೆಯಾಗಿದ್ದು 2.65 ಲಕ್ಷ ರೂ.ಗೆ ತಲುಪಿದೆ. ಶೇ. 99.9 ಶುದ್ಧತೆಯ ಚಿನ್ನ 10ಗ್ರಾಂಗೆ 2,900 ರೂ. ಹೆಚ್ಚಳವಾಗಿದ್ದು 1,44,600 ರೂ. ತಲುಪಿ ಸಾರ್ವಕಾಲಿಕ ದಾಖಲೆ ಪಟ್ಟಿಗೆ ಸೇರಿದೆ.
24 ಕ್ಯಾರಟ್ ಬಂಗಾರದ ಬೆಲೆ 14,253 ರೂ. ಆಗಿದೆ. ಅದೇ ಎಂಟು ಗ್ರಾಂ (8GM) 18 ಕ್ಯಾರೆಟ್ ಆಭರಣ ಚಿನ್ನದ ಬೆಲೆ 85,520 ರೂ. ಆಗಿದೆ. 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 1,04,520 ರೂ. ಆಗಿದೆ. 24 ಕ್ಯಾರೆಟ್ ಬಂಗಾರದ ಬೆಲೆ 1,14,024 ರೂ. ಆಗಿದೆ.
ಇನ್ನು ಹತ್ತು ಗ್ರಾಂ (10GM)18 ಕ್ಯಾರಟ್ ಆಭರಣ ಚಿನ್ನದ ಬೆಲೆ 1,06,900 ರೂ. ಆಗಿದ್ದು, 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 1,30,650 ರೂ. ಆಗಿದೆ. 24 ಕ್ಯಾರೆಟ್ ಬಂಗಾರದ ಬೆಲೆ 1,42,530 ರೂ. ಆಗಿದೆ.
ನೂರು ಗ್ರಾಂ (100GM) 18 ಕ್ಯಾರೆಟ್ ಆಭರಣ ಚಿನ್ನದ ಬೆಲೆ 10,69,000 ರೂ. ಆಗಿದ್ದು, 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 13,06,500 ರೂ. ಆಗಿದೆ. 24 ಕ್ಯಾರೆಟ್ ಬಂಗಾರದ ಬೆಲೆ 14,25,300 ರೂ. ಆಗಿದೆ.
ಇಂದು ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳಿ ದರ 2,75,000 ರೂ. ಆಗಿದೆ. ಬೆಂಗಳೂರು ನಗರದಲ್ಲಿ ಇಂದು ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ 2750 ರೂ., 27,500 ರೂ. ಹಾಗೂ 2,75,000 ರೂ. ಗಳಾಗಿವೆ.
ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ 2,92,000 ರೂ. ಆಗಿದ್ದರೆ, ದೆಹಲಿಯಲ್ಲಿ 2,75,000 ರೂ., ಮುಂಬೈನಲ್ಲಿ 2,75,000 ರೂ. ಹಾಗೂ ಕೊಲ್ಕತ್ತದಲ್ಲೂ 2,75,000 ರೂ. ಗಳಾಗಿದೆ.

