ಬೆಂಗಳೂರು : ಜೂನ್ ಆರಂಭದಿಂದಲೂ ಏರಿಳಿತ ಕಾಣುತ್ತಿದ್ದ ಚಿನ್ನದ ದರದಲ್ಲಿ ಇಂದು ಭಾರೀ ಕುಸಿತ ಕಂಡುಬಂದಿದೆ.
ಚಿನ್ನದ ಹಾದಿಯನ್ನೇ ಹಿಡಿದಿರುವ ಬೆಳ್ಳಿ ಬೆಲೆಯೂ ಇಂದು ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಪ್ರತಿ ಕೆಜಿ ಬೆಳ್ಳಿ ದರ ಸುಮಾರು 6,500 ರೂಪಾಯಿಗಳಷ್ಟು ಕಸಿದು, ಪ್ರಸ್ತುತ ಕೆಜಿಗೆ ₹ 2,60,000 ತಲುಪಿದೆ.
24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಪ್ರತಿ 10 ಗ್ರಾಂಗೆ ಬರೋಬ್ಬರಿ 1,040 ರೂಪಾಯಿ ಇಳಿಕೆಯಾಗಿದೆ. ಹಾಗೆಯೇ, ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನದ ದರದಲ್ಲೂ ಪ್ರತಿ 10 ಗ್ರಾಂಗೆ 950 ರೂಪಾಯಿ ಕುಸಿತ ಕಂಡುಬಂದಿದೆ.
ಕಳೆದ 10 ದಿನಗಳಿಂದ ನಿರಂತರವಾಗಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುತ್ತಿರುವುದು ಸಾಮಾನ್ಯ ಮಧ್ಯಮ ವರ್ಗದ ಆಭರಣ ಪ್ರಿಯರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಕಳೆದ 10 ದಿನಗಳಲ್ಲಿ 24 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ ಬರೋಬ್ಬರಿ 5350 ರುಪಾಯಿ ಇಳಿಕೆಯಾಗಿದೆ. ಇನ್ನು 22 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ ಕಳೆದ 10 ದಿನಗಳಲ್ಲಿ 4900 ರುಪಾಯಿ ಇಳಿಕೆಯಾಗಿದೆ.

