Showing 20 of 159 posts • Page 2 of 8
ಮಂಡ್ಯ ಜಿಲ್ಲೆಯಲ್ಲಿ ಭ್ರೂಣ ಹತ್ಯೆ ಹಾಗೂ ಪತ್ತೆ ಪ್ರಕರಣ ವರದಿಯಾದ ಹಿನ್ನೆಲೆ ಪಾಂಡವಪುರ ತಾಲ್ಲೂಕು ಆಡಳಿತ ಎಚ್ಚೆತ್ತಿದೆ.ತಾಲ್ಲೂಕು ಖಾಸಗೀ ಆಸ್ಪತ್ರೆಗಳು ಹಾಗೂ ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರವಾಸಿ ತಾಣ ಮೇಲುಕೋಟೆಯಲ್ಲಿ ಭಾರೀ ಗಾತ್ರದ ಚಿರತೆ ಸೆರೆಯಾಗಿದೆ. ಜಾನುವಾರುಗಳನ್ನು ತಿಂದು ಉಪಟಳ ನೀಡ್ತಿದ್ದ ಚಿರತೆ ಕಡೆಗೂ ಸಿಕ್ಕಿದೆ. ಮೇಲುಕೋಟೆ ಚಲುವನಾರಾಯಸ್ವಾಮಿ ದೇಗುಲದ ಸಮೀಪವೇ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ.
ಭ್ರೂಣಲಿಂಗ ಪತ್ತೆ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವೈದ್ಯರು ಜೈಲು ಪಾಲಾದ ಘಟನೆ ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ಕೆರೆಯಲ್ಲಿ ಮೀನು ಹಿಡಿಯಲು ಹೋದ ಯುವಕ ನೀರುಪಾಲಾದ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಲಿಂಗಾಪುರ ಕೆರೆಯಲ್ಲಿ ನಡೆದಿದೆ.
ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಸುಮಾರು 2 ಎಕರೆಯಲ್ಲಿ ಬೆಳೆದಿದ್ದ ಬಾಳೆ ನಾಶವಾದ ಘಟನೆ ಮಂಡ್ಯದ ಮದ್ದೂರು ತಾಲೂಕಿನ ವಡ್ಡರದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಶಾಲಾ ಬಸ್ ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಅಡಿಗಾಸ್ ಹೋಟೆಲ್ ಬಳಿ ನಡೆದಿದೆ. ಭೀಕರ ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಭೂತನಹೊಸೂರು ಗ್ರಾಮದ ರೈತರ ಜಮೀನೊಂದರಲ್ಲಿ ಮೂರು ಚಿರತೆ ಮರಿಗಳು ಪತ್ತೆಯಾಗಿವೆ. ತಾಯಿ ಚಿರತೆ ನಾಪತ್ತೆಯಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.ಕಳೆದ ಒಂದು ವಾರದಿಂದ ಗ್ರಾಮದಲ್ಲಿ 2 ಕುರಿ ಚಿರತೆಗೆ ಬಲಿಯಾಗಿವೆ.
ಮಂಡ್ಯದಲ್ಲಿ ನಡೆದ ಅರ್ಚಕನ ನಿಗೂಢ ಕೊಲೆ ಪ್ರಕರಣವನ್ನ ಶ್ರೀರಂಗಪಟ್ಟಣ ಠಾಣಾ ಪೊಲೀಸರು ಭೇದಿಸಿದ್ದಾರೆ. ಪತ್ನಿಯ ಅನೈತಿಕ ಸಂಬಂಧವೇ ಅರ್ಚಕನ ಕೊಲೆಗೆ ಕಾರಣವಾಗಿದೆ. ಪ್ರಿಯಕರನ ಮೂಲಕ ಪತಿ ಅರ್ಚಕನನ್ನು ಪತ್ನಿ ಹತ್ಯೆ ಮಾಡಿಸಿದ್ದಾರೆ.
ದೂರು ಅರ್ಜಿಗೆ ಸ್ಪಂದಿಸದ ಲೋಕಾಯುಕ್ತ ಅಧಿಕಾರಿಗಳ ವಿರುದ್ದ RTI ಕಾರ್ಯಕರ್ತರೊಬ್ಬರು ಗಂಧದ ಕಟ್ಟಿ ಪ್ಯಾಕೆಟ್ ಗಳನ್ನ ರವಾನೆ ಮಾಡಿ ಪೂಜೆ ಸಲ್ಲಿಸುವಂತೆ ವ್ಯಂಗ್ಯ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಟ್ರಾನ್ಸ್ಫಾರ್ಮರ್ ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಆತಂಕ ಸೃಷ್ಡಿಯಾದ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕೆ.ಬೆಟ್ಟಹಳ್ಳಿ ಬಳಿಯ ವಿಜಯಕಾಳಿ ಮಠದ ಬಳಿ ನಡೆದಿದೆ.
ಮನೆಯಲ್ಲಿ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯದ ಕೆ.ಆರ್.ಪೇಟೆ ಪಟ್ಟಣದ ಲಕ್ಷ್ಮಿ ವೆಂಕಟೇಶ್ವರ ಬಡಾವಣೆಯಲ್ಲಿ ನಡೆದಿದೆ.
ಮರಳಗಾಲ ಗ್ರಾಮದ ಅರ್ಚಕ ಸಿದ್ದಲಿಂಗಪ್ಪ(46) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಮರಳಗಾಲ ಗ್ರಾಮದ ನಾಲೆಯಲ್ಲಿ ಸಿದ್ದಲಿಂಗಪ್ಪ ಶವ ಪತ್ತೆಯಾಗಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮರಳಗಾಲ ಗ್ರಾಮದ ಬಳಿ ಘಟನೆ ನಡೆದಿದೆ
ಇಂದು ವರ್ಷದ ಮೊದಲ ಚಂದ್ರಗ್ರಹಣ ಹಿನ್ನೆಲೆ ಜಿಲ್ಲೆಯ ಬಹುತೇಕ ದೇಗುಲಗಳ ದರ್ಶನ ಸಮಯ ಬದಲಾವಣೆ ಮಾಡಲಾಗಿದೆ.
ಬಲಮುರಿಯ ಕಾವೇರಿ ನದಿಯಲ್ಲಿ ವಿದ್ಯಾರ್ಥಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಡೆದಿದೆ.
ಮನೆಯವರ ವಿರೋಧ ಲೆಕ್ಕಿಸದೆ ಪ್ರೀತಿಸಿದ ಯುವಕನ ಮದುವೆ ಆದ ಹಿನ್ನಲೆ ಸಿಡಿದೆದ್ದ ಯುವತಿ ತಂದೆ ಅಳಿಯನ ಮನೆಗೆ ಬೆಂಕಿ ಹಚ್ಚಿ ಆಕ್ರೋಷ ವ್ಯಕ್ತಪಡಿಸಿದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚುಂಚಗಹಳ್ಳಿಯಲ್ಲಿ ನಡೆದಿದೆ.
ಮಾಜಿ ಶಾಸಕರ ಕಾರು ಅಪಘಾತವಾಗಿದ್ದು, ಸುರೇಶ್ಗೌಡರ ಎಡಗೈ ಮುರಿತವಾಗಿದೆ. ಬಸರಾಳು-ಕೊಪ್ಪ ಮಾರ್ಗ ಮಧ್ಯೆ ಆಕ್ಸಿಡೆಂಟ್ ನಡೆದಿದೆ.
ಮದ್ದೂರು ಪಟ್ಟಣದ ಶಿಂಷಾ ನದಿಯಲ್ಲಿ ಬೆಳೆದಿದ್ದ ಮರಗಳಿಗೆ ಕಿಡಿಗೇಡಿಗಳು ಕತ್ತರಿ ಹಾಕಿದ್ದಾರೆ. ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಮರಗಳನ್ನು ಕಡಿದಿರುವ ಆರೋಪ ಕೇಳಿಬಂದಿದ್ದು, ಅನುಮತಿ ಇಲ್ಲದೇ ಮರ ಕಡಿದ ಬಗ್ಗೆ ಸಾರ್ವಜನಿಕರ ದೂರು ನೀಡಿದ್ದಾರೆ.
ಕೆಮಿಕಲ್ ಸೋರಿಕೆಯಿಂದ ಸ್ಫೋಟ ಸಂಭವಿಸಿ, ದುರಂತ ಘಟನೆಯಲ್ಲಿ ಇಬ್ಬರ ಸಾವಾಗಿದೆ. ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಡ್ಯದ ಬಸರಾಳುವಿನ ಕಾರೆಕಟ್ಟೆ ಬಳಿ ನಡೆದಿದೆ.
ಕಾವೇರಿ ನದಿಯಲ್ಲಿ ಎರಡು ಅಪರಿಚಿತ ಶವ ಪತ್ತೆಯಾಗಿದೆ. ಹಳೇ ರೈಲ್ವೆ ನಿಲ್ದಾಣದ ಬಳಿಯ ಸೇತುವೆ ಕೆಳಗೆ ಹಾಗೂ ಬಸ್ ನಿಲ್ದಾಣದ ಬಳಿಯ ಉತ್ತರ ಕಾವೇರಿ ಸೇತುವೆ ಕೆಳಗೆ ಪತ್ತೆಯಾಗಿದೆ.ಸುಮಾರು 60 ವರ್ಷ ವಯಸ್ಸಿನ ವೃದ್ದೆ ಹಾಗೂ 30 ವರ್ಷ ವಯಸ್ಸಿನ ಯುವಕನ ಶವ ಪತ್ತೆಯಾಗಿದೆ.
ಪಕ್ಕದ ಮನೆಯವನ ಬೆದರಿಕೆ, ಕಿರುಕುಳಕ್ಕೆ ಬೇಸತ್ತ ತಾಯಿ ಮಗಳು ನೇಣಿಗೆ ಶರಣಾದ ಘಟನೆ ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿಯಲ್ಲಿ ನಡೆದಿದೆ.