ಮಂಡ್ಯ: ಕಾವೇರಿ ನದಿಗೆ ಬಿದ್ದು ವೃದ್ದೆ ಆತ್ಮಹತ್ಯೆಗೆ ಯತ್ನಿಸಿದ ಘಟನರ ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿ ನಡೆದಿದೆ.
ಚಾಮರಾಜನಗರದ ಬೆಂಡರವಾಡಿಯ ಗುಂಡಮ್ಮ(70) ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆ. ಕುಟುಂಬ ಕಲಹದಿಂದ ಬೇಸತ್ತು ಪಟ್ಟಣಕ್ಕೆ ಬಂದು ನದಿಗೆ ಬಿದ್ದು ಆತ್ಮಹತ್ಯೆ ಯತ್ನಿಸಿದ್ದಾರೆ.
ನದಿಗೆ ಬಿದ್ದು ಒದ್ದಾಡುತ್ತಿರುವುದನ್ನು ಗಮನಿಸಿ ಸ್ಥಳೀಯರಿಂದ ಹಗ್ಗ ಕೊಟ್ಟು ರಕ್ಷಣೆ ಮಾಡಿದ್ದಾರೆ. ವೃದ್ದ ಮಹಿಳೆಗೆ ಉಪಚರಿಸಿ ಸ್ಥಳೀಯರು ಪೊಲೀಸರ ವಶಕ್ಕೆ ನೀಡಿದ್ದಾರೆ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

