ಮಂಡ್ಯ: ಮಾಜಿ ಶಾಸಕರ ಕಾರು ಅಪಘಾತವಾಗಿದ್ದು, ಸುರೇಶ್ಗೌಡರ ಎಡಗೈ ಮುರಿತವಾಗಿದೆ. ಬಸರಾಳು-ಕೊಪ್ಪ ಮಾರ್ಗ ಮಧ್ಯೆ ಆಕ್ಸಿಡೆಂಟ್ ನಡೆದಿದೆ.
ನಿನ್ನೆ ತಡರಾತ್ರಿ 12.30ರ ಸುಮಾರಿಗೆ ಅಪಘಾತ ಸಂಭವಿಸಿರುತ್ತಾರೆ. ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಹಳ್ಳಕ್ಕೆ ಕಾರು ಉರುಳಿದಿದೆ. ಡಿಕ್ಕಿ ರಭಸಕ್ಕೆ 2-3 ಬಾರಿ ಕಾರು ಪಲ್ಟಿಯಾಗಿದೆ. ಏರ್ ಬ್ಯಾಗ್ ಓಪನ್ ಆಗಿದ್ರಿಂದ ಎಲ್ಲರು ಬದುಕುಳಿದಿದೆ. ಸುರೇಶ್ಗೌಡ, ನಾಗಮಂಗಲ ಕ್ಷೇತ್ರದ ಜೆಡಿಎಸ್ನ ಮಾಜಿ ಶಾಸಕ ಸುರೇಶ್ಗೌಡ ಸೇರಿ ಮೂವರಿಗೆ ಗಾಯವಾಗಿದೆ.
ಅದೃಷ್ಟವಶಾತ್ ಕಾರಿನಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳ್ಳೂರು ಕ್ರಾಸ್ ನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

