ಮಂಡ್ಯ: ಶ್ರೀರಂಗಪಟ್ಟಣ ಬಲಮುರಿ ಫಾಲ್ಸ್ ಕಾವೇರಿ ನದಿಯಲ್ಲಿ ಮುಳುಗಿ ಮಿಜೋರಾಂ ರಾಜ್ಯದ ಯುವಕ ಮೃತಪಟ್ಟ ಘಟನೆ ನಡೆದಿದೆ. ಜಾಮ್ ಲೈನ್ ಥಾಂಗ್ (28) ಮೃತ ವಿದ್ಯಾರ್ಥಿ. ಮಿಜೋರಾಂ ರಾಜ್ಯ ದ ಚಂಪೈ ಜಿಲ್ಲೆಯ ಯುವಕ.

ಕಾಲ್ವಿನ್ ಟೆಕ್ನಾಲಜಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿ ಅಧ್ಯಯನ ಮಾಡುತ್ತಿದ್ದನು. ಬೆಂಗಳೂರಿನ ಕೊತ್ತನೂರಿನಲ್ಲಿರುವ ಕಾಲೇಜಿನಲ್ಲಿ ಓದುತ್ತಿದ್ದು, ತನ್ನ ಕಾಲೇಜಿನ ಉಪನ್ಯಾಸಕರು ಹಾಗೂ ಸಹಪಾಠಿಗಳ ಜೊತೆ ಪ್ರವಾಸ ಬಂದಿದ್ದಾಗ ಘಟನೆ ನಡೆದಿದೆ. ಕೆ.ಆರ್.ಎಸ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.