ಮಂಡ್ಯ: ಗೂಡ್ಸ್ ವಾಹನ ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ಕೆ ಆರ್ ಪೇಟೆಯ ಟಿಬಿ ವೃತ್ತದ ಬಳಿ ನಡೆದಿದೆ.

ಕಾಪನಹಳ್ಳಿ ನಿವಾಸಿ ನಂದನ್ (19) ಸ್ಥಳದಲ್ಲೇ ಸಾವಿಗೀಡಾದ ಬೈಕ್ ಸವಾರ. ಪಟ್ಟಣದಿಂದ ಬರುತ್ತಿದ್ದ ಬೈಕ್ ಗೆ ಮೈಸೂರು ಕಡೆಯಿಂದ ವೇಗವಾಗಿ ಬಂದ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ಬೈಕ್ ಸವಾರ ನಂದನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.