Bengaluru 24°C
Ad

ಯಾದಗಿರಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ‌ ಮರಳು ಗಣಿಗಾರಿಕೆ..!

ಜಿಲ್ಲೆಯ ವಡಗೇರಾ ತಾಲೂಕಿನ ಗೊಂದೇನೂರ, ಕೊಂಕಲ್, ಚೆನ್ನೂರ ಗ್ರಾಮದಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಮರಳು ಗಣಿಗಾರಿಕೆಯಿಂದ ನಿತ್ಯವೂ ಗ್ರಾಮಸ್ಥರು ನರಕಯಾತನೇ ಅನುಭವಿಸುತ್ತಿದ್ದಾರೆ.

ಯಾದಗಿರಿ : ಜಿಲ್ಲೆಯ ವಡಗೇರಾ ತಾಲೂಕಿನ ಗೊಂದೇನೂರ, ಕೊಂಕಲ್, ಚೆನ್ನೂರ ಗ್ರಾಮದಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಮರಳು ಗಣಿಗಾರಿಕೆಯಿಂದ ನಿತ್ಯವೂ ಗ್ರಾಮಸ್ಥರು ನರಕಯಾತನೇ ಅನುಭವಿಸುತ್ತಿದ್ದಾರೆ.

ಕೃಷ್ಣಾ ನದಿಯಲ್ಲಿ ಹಗಲು ದರೋಡೆಗೆ ಮರಳು ದಂಧೆಕೋರರು ನಿಂತಿದ್ದು, ನೈಸರ್ಗಿಕ ಸಂಪತ್ತು ಕೊಳ್ಳೆ ಹೊಡೆಯುತ್ತಿದ್ದರು ಅಧಿಕಾರಿಗಳು ಗಪ್ ಚುಪ್ ಆಗಿ ಕುತಿದ್ದಾರೆ. ವಡಗೇರಾ ಪೊಲೀಸ್ ಠಾಣೆ ಎದುರೇ ನಿತ್ಯ ನೂರಾರು ಮರಳು ತುಂಬಿದ ಲಾರಿ ಓಡಾಡುತ್ತಿದ್ದರು, ಕ್ಯಾರೆ ಅನ್ನದೇ ಸುಮ್ಮನೆ ಪೊಲೀಸರು ಕೂತಿದ್ದಾರೆ.

ಅಕ್ರಮ ಮರಳು ಗಣಿಗಾರಿಕೆ ತಡೆಗೆ ಎಷ್ಟೇ ಮನವಿ ನೀಡಿದರು ಅಧಿಕಾರಿಗಳು ಕ್ರಮಕ್ಕೆ‌ ಮುಂದಾಗಲಿಲ್ಲ. ರಾತ್ರಿ ವೇಳೆ ಬರ್ ಬರ್ ಎಂದು ಓಡಾಡುವ ಟಿಪ್ಪರ್ ಗಳ ಶಬ್ದದಿಂದ ಗ್ರಾಮಸ್ಥರಿಗೆ ನಿತ್ಯವೂ ಕಿರಿಕಿರಿ ಉಂಟಾಗಿದೆ.

ಟಿಪ್ಪರ್ ನಿಧಾನವಾಗಿ ಓಡಿಸಿ ಅಂತ ಹೇಳಿದರೆ ಗ್ರಾಮಸ್ಥರಿಗೆ ದಂಧೇಕೋರರು ಬೆದರಿಕೆ ಹಾಕುತ್ತಿದ್ದಾರೆ. ನಾವು ಪೊಲೀಸ್ ರಿಗೆ ಎಲ್ಲ ಮುಟ್ಟಿಸೀವಿ ಏನ್ ಮಾಡ್ತೀರಿ ಮಾಡ್ಕೋಳ್ರಿ ಅಂತಾ ಗ್ರಾಮಸ್ಥರಿಗೆ ಬೆದರಿಕೆ ಹಾಕಿದ್ದಾರೆ.

​ಹಗಲೆಲ್ಲಾ ದುಡಿದು ಸುಸ್ತಾಗಿ ಬಂದು ಮಲಗಿದಾಗ ಶ್ರಮಿಕ ಹಾಗೂ ರೈತರಿಗೆ ಮರಳು‌ ಗಣಿಗಾರಿಕೆಯಿಂದ ನೆಮ್ಮದಿನೇ ಇಲ್ಲದಂತಾಗಿದೆ. ಯಾದಗಿರಿ ಡಿಸಿ, ಎಸ್ಪಿ ಅವ್ರು ಗ್ರಾಮಕ್ಕೆ ಭೇಟಿ ನೀಡಿ, ಅಕ್ರಮ ಮರಳು ಗಣಿಗಾರಿಕೆಗೆ ಬ್ರೇಕ್ ಹಾಕಬೇಕು. ಇಂತಹ ಅಕ್ರಮ ಮರಳು ಗಣಿಗಾರಿಕೆಗೆ ಕುಮ್ಮಕ್ಕು ನೀಡ್ತಿರೋ ವಡಗೇರಾ ಪಿಎಸ್ಐ ಜಯಶ್ರೀ ಮೇಲೆ ಕ್ರಮ ಕೈಗೊಳ್ಳಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Ad
Ad
Nk Channel Final 21 09 2023
Ad