Bengaluru 25°C
Ad

ಶ್ರೀ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯ ಹುಟ್ಟು ಹಬ್ಬದ ದಿನದಂದು ರಕ್ತದಾನ ಶಿಬಿರ

ತಾಲೂಕಿನ ಹೆಡಗಿಮದ್ರಾ ಗ್ರಾಮದ ಶ್ರೀ ಶಾಂತಶಿವಯೋಗಿ ಮಠದ ಪೀಠಾಧಿಪತಿ ಶ್ರೀ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಹುಟ್ಟು ಹಬ್ಬದ ದಿನದಂದು ಮಠದ ಆವರಣದಲ್ಲಿ ರಕ್ತದಾನ ಶಿಬಿರ ನಡೆಯಿತು.

ಯಾದಗಿರಿ: ತಾಲೂಕಿನ ಹೆಡಗಿಮದ್ರಾ ಗ್ರಾಮದ ಶ್ರೀ ಶಾಂತಶಿವಯೋಗಿ ಮಠದ ಪೀಠಾಧಿಪತಿ ಶ್ರೀ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಹುಟ್ಟು ಹಬ್ಬದ ದಿನದಂದು ಮಠದ ಆವರಣದಲ್ಲಿ ರಕ್ತದಾನ ಶಿಬಿರ ನಡೆಯಿತು.

ಈ ಕಾರ್ಯಕ್ರಮವನ್ನು ಮಾತನಾಡಿದ ಅವರು, ರಕ್ತದಾನ ಮಹಾ ದಾನಗಳಲ್ಲಿ ಒಂದು ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವ ಅಗತ್ಯವಿದೆ ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಯೋದು, ಮಾತ್ರವಲ್ಲದೆ ನಮ್ಮ ಜೀವಕ್ಕೂ ರಕ್ಷಣೆ ಸಿಗುತ್ತದೆ ಹಾಗೂ ರಕ್ತದಾನ ಮಾಡುವುದಿಂದ ದಾನಿಗಳಿಗೂ ಅನೇಕ ಲಾಭವಿದೆ ಅನೇಕರು ರಕ್ತ ದಾನ ಮಾಡಿದ್ರೆ ದೇಹ ದುರ್ಬಲವಾಗುತ್ತದೆ ಎಂದು ಭಾವಿಸ್ತಾರೆ ಇದು ತಪ್ಪುಆಗಾಗಾ ರಕ್ತದಾನ ಮಾಡುವುದ್ರಿಂದ ರಕ್ತದಾನಿಯ ಹೃದಯದ ಆರೋಗ್ಯ ಸುಧಾರಿಸುತ್ತದೆ.

ತೂಕವನ್ನು ನಿಯಂತ್ರಣದಲ್ಲಿಡಬಹುದು ಕ್ಯಾನ್ಸರ್‌ನಂತಹ ರೋಗಗಳ ಅಪಾಯವನ್ನು ಕಡಿಮೆ ಮಾಡಬಹುದು. ರಕ್ತದಾನವು ನಿಮ್ಮ ದೇಹದ ಮೇಲೆ ಮಾತ್ರವಲ್ಲದೆ ನಿಮ್ಮ ಮನಸ್ಸಿನ ಮೇಲೂ ಧನಾತ್ಮಕ ಪರಿಣಾಮ ಬೀರುತ್ತದೆ. ರಕ್ತದಾನಿ ಒಂದು ರಕ್ತದಾನದ ನಂತ್ರ ಮೂರು ತಿಂಗಳು ರಕ್ತದಾನ ಮಾಡಬಾರದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಠಾಣಗುಂದಿ ಗ್ರಾಮ್ ಪಂಚಾಯತ್ ಅಭಿವೃದ್ದಿ ಅಧಿಕಾರಿ ನೀಲಕಂಠ ಶಾಪುರಕರ್,ಗ್ರಾ.ಪ ಸದಸ್ಯ ಸಾಬಯ ಬೈರಿ, ಮನೋಹರ್ ಪವರ್,ಸಿದ್ದರಾಮರಡ್ಡಿ ಸಾಹು ಅಣಬಿ,ಸಿದ್ದುಗೌಡ ತಂಗಡಗಿ, ಶರಣುಗೌಡ ಗಡ್ಡೆಸೂಗುರ,ಅನಂತ ಹುಲಕಲ್,ಶಿವು ನಾಟೇಕರ, ಸುನೀಲ್‌ ಸಣ್ಣೆಪ್ಪನೊರ ಸೇರಿದಂತೆ ಅನೇಕ ಭಕ್ತಾದಿಗಳು ಇದ್ದರು.

Ad
Ad
Nk Channel Final 21 09 2023
Ad