Ad

“ಕಲ್ಕಿ”ಯ ಬುಜ್ಜಿ ಕಾರ್ ಡ್ರೈವ್ ಮಾಡಿದ ರಿಷಬ್ ಶೆಟ್ಟಿ

Kalki

ಪ್ರಭಾಸ್ ಅಭಿನಯದ ಪ್ಯಾನ್ ಇಂಡಿಯಾ ಮೂವಿ ಕಲ್ಕಿ 2898 AD ಬಹುನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ ಮೇಕಿಂಗ್‌ನಿಂದ ಸಖತ್ ಹೈಪ್‌ ಕ್ರಿಯೇಟ್‌ ಮಾಡಿದೆ.

Ad
300x250 2

ಇದೀಗ ಇದೇ ಸಿನಿಮಾಕ್ಕೆ ರಿಷಬ್‌ ಶೆಟ್ಟಿ ಸಾಥ್‌ ನೀಡಿದ್ದಾರೆ. ಅಂದರೆ ಕಲ್ಕಿ ಸಿನಿಮಾದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿರುವ ಬುಜ್ಜಿ ಕಾರನ್ನು ಕುಂದಾಪುರದಲ್ಲಿ ರೈಡ್‌ ಮಾಡುವ ಮೂಲಕ ಪ್ರಭಾಸ್​ಗೆ ಸಾಥ್ ನೀಡಿದಂತೆ ಆಗಿದೆ.

ಭೈರವನ ಆಪ್ತ ಬುಜ್ಜಿ ವಾಹನವನ್ನು ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಓಡಿಸಿದ್ದಾರೆ. ಇದನ್ನು ತಯಾರಿಸಿದ ಮಹೀಂದ್ರಾ ಕಂಪನಿಯ ಆನಂದ್‌ ಮಹೀಂದ್ರ ಸಹ ಇತ್ತೀಚೆಗಷ್ಟೇ ಈ ವಾಹನ ಏರಿ ಖುಷಿ ಪಟ್ಟಿದ್ದರು. ಇದೀಗ ಇದೇ ವಾಹನ ಕುಂದಾಪುರಕ್ಕೆ ಬಂದಿದೆ. ಸ್ಟೈಲಿಶ್‌ ಲುಕ್‌ನಲ್ಲಿ ಬುಜ್ಜಿಯನ್ನು ರೈಡ್‌ ಮಾಡಿದ್ದಾರೆ. ಈ ರೈಡ್‌ನ ಕಿರು ವಿಡಿಯೋವನ್ನು ವೈಜಯಂತಿ ಮೂವೀಸ್‌ ಟ್ವಿಟರ್‌ ಪುಟದಲ್ಲಿ ಶೇರ್‌ ಮಾಡಿದ್ದು, ಕಲ್ಕಿ X ಕಾಂತಾರ ಎಂಬ ಕ್ಯಾಪ್ಷನ್‌ ನೀಡಿದೆ.

Ad
Ad
Nk Channel Final 21 09 2023
Ad