Ad

ಶಶಾಂಕ್ ನಿರ್ದೇಶನದ ‘ಈ ಪಾದ ಪುಣ್ಯ ಪಾದ’ ಸಿನಿಮಾದ ಟೈಟಲ್ ಬಿಡುಗಡೆ

ಪೂರ್ಣಚಂದ್ರ ಫಿಲಂಸ್ ಲಾಂಛನದಲ್ಲಿ ಮೂಡಿ ಬರುತ್ತಿರುವ ‘ಈ ಪಾದ ಪುಣ್ಯ ಪಾದ’ ಸಿನಿಮಾ. ಮೊಗ್ಗಿನ ಮನಸ್ಸು, ಕೃಷ್ಣ ಲೀಲಾ, ಬಚ್ಚನ್ ಸಿನಿಮಾ ನಿರ್ದೇಶಕ ಶಶಾಂಕ್ ಈ ಚಿತ್ರದ ಟೈಟಲ್ ಬಿಡುಗಡೆ ಮಾಡಿ ಶುಭಕೋರಿದರು.

ಪೂರ್ಣಚಂದ್ರ ಫಿಲಂಸ್ ಲಾಂಛನದಲ್ಲಿ ಮೂಡಿ ಬರುತ್ತಿರುವ ‘ಈ ಪಾದ ಪುಣ್ಯ ಪಾದ’ ಸಿನಿಮಾ. ಮೊಗ್ಗಿನ ಮನಸ್ಸು, ಕೃಷ್ಣ ಲೀಲಾ, ಬಚ್ಚನ್ ಸಿನಿಮಾ ನಿರ್ದೇಶಕ ಶಶಾಂಕ್ ಈ ಚಿತ್ರದ ಟೈಟಲ್ ಬಿಡುಗಡೆ ಮಾಡಿ ಶುಭಕೋರಿದರು.

Ad
300x250 2

ದಾರಿ ಯಾವುದಯ್ಯಾ ವೈಕುಂಠಕೆ, ಬ್ರಹ್ಮ ಕಮಲ, ತಾರಿಣಿ ಮುಂತಾದ ಸದಭಿರುಚಿ ಚಿತ್ರಗಳನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿರುವ ನಿರ್ದೇಶಕ ಸಿದ್ದು ಪೂರ್ಣಚಂದ್ರ ಈ ಚಿತ್ರಕ್ಕೆ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಈ ಕಥೆಯ ವಿಶೇಷವೇನೆಂದರೆ, ಕಾಲುಗಳ ಮೇಲೆ ಕಥೆ ಬರೆಯಲಾಗಿದೆ. ಎಲ್ಲಾ ಪಾತ್ರಗಳ ಕಾಲುಗಳು ಕಥೆ ಹೇಳುತ್ತವೆ. ಮಗುವಿನ ಪಾದ, ದೊಡ್ಡವರ ಪಾದ, ವಯಸ್ಸಾದ ಪಾದ, ಧಣಿದ ಪಾದ, ಖುಷಿಯ ಪಾದ, ಪಾಪದ ಪಾದ, ಆನೆಕಾಲು ರೋಗಿಯ ಪಾದ ಹೀಗೆ ನಾನಾ ಪಾದಗಳಿಂದ ಕೂಡಿದ ವಿನೂತನ ಕಥಾ ಹಂದರ ಹೊಂದಿರುವ ಚಿತ್ರವಾಗಿದೆ.

ಮುಖ್ಯ ಪಾತ್ರದಲ್ಲಿ ಆಟೋ ನಾಗರಾಜ್, ಮಮತಾ ರಾಹುತ್, ಪ್ರಭಾಕರ್ ಬೋರೇಗೌಡ, ಪ್ರಮಿಳಾ ಸುಬ್ರಹ್ಮಣ್ಯಂ, ಹರೀಶ್ ಕುಂದೂರ್, ಸನ್ನಿ, ಇನ್ನೂ ಮುಂತಾದವರ ತಾರಾಗಣವಿದೆ. ಛಾಯಾಗ್ರಹಣ ರಾಜು ಹೆಮ್ಮಿಗೆಪುರ, ಸಂಗೀತ ಅನಂತ್ ಆರ್ಯನ್, ಸಂಕಲನ ದೀಪಕ್, ವಸ್ತ್ರ ವಿನ್ಯಾಸ ನಾಗರತ್ನ ಕೆ ಹೆಚ್, ಪ್ರೊಡಕ್ಷನ್ ಡಿಸೈನ್ ದಿಲೀಪ್ ಹೆಚ್ ಆರ್, ಕಾರ್ಯಕಾರಿ ನಿರ್ಮಾಪಕರು ಪುಟ್ಟರಾಜು ಎ.ಕೆ ಆಲಗೌಡನ ಹಳ್ಳಿ, ಕಲಾ ನಿರ್ದೇಶನ ಬಸವರಾಜ್ ಆಚಾರ್ ನಿರ್ವಹಿಸುತ್ತಿದ್ದಾರೆ. ಆಗಸ್ಟ್ ಮೊದಲ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗುತ್ತದೆ. ಬೆಂಗಳೂರು ರಾಮನಗರ, ಚನ್ನಪಟ್ಟಣ ಮತ್ತು ಸುತ್ತಮುತ್ತ ಹಳ್ಳಿಗಳಲ್ಲಿ ಚಿತ್ರೀಕರಣವಾಗುತ್ತದೆ.

Ad
Ad
Nk Channel Final 21 09 2023
Ad