Bengaluru 22°C
Ad

ದಕ್ಷಿಣ ಕನ್ನಡದಲ್ಲಿ ಮಳೆರಾಯನ ಆರ್ಭಟ,ಸಮುದ್ರ ತೀರ ಪ್ರಕ್ಷುಬ್ಧ !

ಮಂಗಳೂರು:   ಸಮುದ್ರ ಪ್ರಕ್ಷುಬ್ಧಗೊಂಡ ಹಿನ್ನಲೆ,ಸಮುದ್ರ ತೀರದಲ್ಲಿ ಹೆಚ್ಚಿದ ಕಡಲಕೊರೆತದ ಭೀತಿ ಉಂಟಾಗಿದೆ.ಕಡಲ್ಕೋರೆತ ತಡೆಗಟ್ಟಲು ಸ್ಪೀಕರ್‌ ಯುಟಿ ಖಾದರ್‌ ನೇತೃತ್ವದಲ್ಲಿ ವಿಶೇಷ ಸಭೆ ನಡೆಸಲಾಗಿದೆ.
, ಸೋಮೇಶ್ವರ ,ಬೆಟ್ಟಂಪಾಡಿ,ಸಸಿಹಿತ್ಲು ಕಡಲಕೊರೆತ ಹೆಚ್ಚಾಗಿದ್ದು ಪ್ರತಿ ಮಳೆಗಾಲದಲ್ಲೂ ಸಮುದ್ರ ತೀರದ ನಿವಾಸಿಗಳಿಗೆ ಆತಂಕ ಸೃಷ್ಟಿಸಿದೆ.ಪ್ರತಿ ವರ್ಷವೂ ಉಲ್ಬಣಿಸುತ್ತಿರುವ ಸಮಸ್ಯೆ ರಸ್ತೆ,ಮನೆ ,ಕಟ್ಟಡ ಸಮುದ್ರ ಪಾಲಗುತ್ತಿದೆ.

Ad
300x250 2

ಹಾಗಾಗಿ ಕಡಲ್ಕೊರೆತ ತಡೆಯಲು ಶಾಶ್ವತ ಪರಿಹಾರಕ್ಕೆ ಇದೀಗ ಸರಕಾರ ಮುಂದಾಗಿದೆ. ಮಂಗಳೂರಿನಲ್ಲಿ ವಿಧಾನಸಭಾ ಸ್ಪೀಕರ್‌ ಯುಟಿ ಖಾದರ್‌ ಹೇಳಿಕೆ ನೀಡಿದ್ದಾರೆ,ಎನ್‌ ಐ ಟಿಕೆ ಯಿಂದ ಕಡಲಕೊರೆತ ತಡೆಗಾಗಿ ವಿಶೇಷ ಯೋಜನೆಯ ಪ್ರಸ್ತಾವನೆ ಮೇರೆಗೆ ತಡೆಗೋಡೆ ನಿಮಾಣಕ್ಕಾಗಿ ರೂ 280 ಕೋಟಿ ಯ ಪ್ರಸ್ತಾವನೆ ಸಲ್ಲಿಸಿದ್ದಾರೆ.

ನಾನು ಹಾಗು ಜಿಲ್ಲಾ ಉಸ್ತುವಾರಿ ಸಚಿವರು ಸಮಾಲೋಚನೆ ನಡೆಸಿದ್ದೇವೆ. ಆದಷ್ಟು ಬೇಗೆ ಸರಕಾರಕ್ಕೆ ವರದಿ ಸಲ್ಲಿಸಿ,ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯ ಮಾಡುತ್ತೇವೆ. ಜಿಲ್ಲಾಧಿಕಾರಿ ತುರ್ತು ಕ್ರಮಕೈಗೊಳ್ಳಲು ಅಧಿಕಾರ ಹಾಗು ಅನುದಾನ ನೀಡುವಂತೆ ಸೂಚಿಸಲಾಗಿದೆ

Ad
Ad
Nk Channel Final 21 09 2023
Ad