News Karnataka Kannada
Sunday, April 28 2024
ಮಂಗಳೂರು

ಬೆಳ್ತಂಗಡಿ: ಆ.12 ರಂದು ನವಜೀವನ ಸದಸ್ಯರ ಶತದಿನೋತ್ಸವ ಕಾರ್ಯಕ್ರಮ

Belthangady: Ban on drinking of liquor at weddings and Ganga puja ceremonies of Kodava community
Photo Credit : Pexels

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ಪ್ರಾದೇಶಿಕ ವಿಭಾಗ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಧರ್ಮಸ್ಥಳ ಆಶ್ರಯದಲ್ಲಿ ರಾಜ್ಯಾದ್ಯಂತ ನಡೆಸಲಾದ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿದ ನವಜೀವನ ಸದಸ್ಯರ ಶತದಿನೋತ್ಸವ ಕಾರ್ಯಕ್ರಮವು ಆ.12 ರಂದು ಶ್ರೀ‌ಕ್ಷೇತ್ರಧರ್ಮಸ್ಥಳದ ಸಭಾಭವನದಲ್ಲಿ ಬೆಳಿಗ್ಗೆ 10.30 ಕ್ಕೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಸಂಸದ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಹಾಗೂ ಶಾಸಕ ಹರೀಶ್ ಪೂಂಜ ಮೂಲಕ ಭಾರತ ದೇಶದ ಸ್ವಾತಂತ್ರದ ಅಮೃತ ಮಹೋತ್ಸವದ ಪ್ರಯುಕ್ತ ಆಗಸ್ಟ್ 13ರಿಂದ 15ರವರೆಗೆ ‘ಹರ್ ಘರ್ ತಿರಂಗ ಅಭಿಯಾನ’ಕ್ಕೆ ಚಾಲನೆ ದೊರೆಯಲಿದೆ.

ಜನಜಾಗೃತಿ ಪ್ರಾದೇಶಿಕ ವಿಭಾಗದ 2021-22ನೇ ಸಾಲಿನ ವಾರ್ಷಿಕ ವರದಿಯನ್ನು ಡಾl ಹೇಮಾವತಿ ವೀ. ಹೆಗ್ಗಡೆ ಬಿಡುಗಡೆ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಕೊಪ್ಪಳ, ಧಾರವಾಡ ಮತ್ತು ಚಿತ್ರದುರ್ಗ ಪ್ರಾದೇಶಿಕ ವಿಭಾಗದಲ್ಲಿ 2021-22 ಮತ್ತು 2022-23ನೇ ಸಾಲಿನಲ್ಲಿ ನಡೆದ ಮದ್ಯವರ್ಜನ ಶಿಬಿರಗಳಲ್ಲಿ ಭಾಗವಹಿಸಿದ ಕೊಪ್ಪಳ, ಧಾರವಾಡ, ಚಿತ್ರದುರ್ಗ, ಉಡುಪಿ, ಬೆಂಗಳೂರು ಮತ್ತು ಮೈಸೂರು ಪ್ರಾದೇಶಿಕ ವಿಭಾಗದ ಒಟ್ಟು 34 ಶಿಬಿರಗಳ ಮೂಲಕ ಪಾನಮುಕ್ತರಾದ 1270 ಮಂದಿ ನವಜೀವನ ಸದಸ್ಯರ ತಾಲೂಕಿನ ಉಮಾಪತಿ ಕೆ, ತೀರ್ಥಹಳ್ಳಿ ತಾಲೂಕಿನ ಗಣೇಶ್ ನಾಯಕ್, ಚಾಮರಾಜನಗರ ತಾಲೂಕಿನ ವೆಂಕಟೇಶ್ ಮತ್ತು ರಾಮದುರ್ಗ ತಾಲೂಕಿನ ಸುಭಾಷ್ ಮಲ್ಲಪ್ಪ ಜಲಗೇರಿ ಈ 4 ಮಂದಿಗೆ ಜಾಗೃತಿ ಅಣ್ಣ ಪ್ರಶಸ್ತಿ ಹಾಗೂ ಗದಗ ತಾಲೂಕಿನ ಶರಣಪ್ಪ ನೀಲಪ್ಪ ಹದ್ಲಿ, ಕೊಪ್ಪಳ ತಾಲೂಕಿನ ಹನುಮೇಶ ಬಂಡ್ರಾಳ, ಮೂಡಲಗಿ ತಾಲೂಕಿನ ವಿಠ್ಠಲ್ ಮಾಯಪ್ಪ ಮಾರಾಯಿ ಮತ್ತು ಸಂಗಪ್ಪ ಡಿ. ಜನವಾಡ ಈ 4 ಮಂದಿಗೆ ಜಾಗೃತಿ ಮಿತ್ರ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಮಲ್ಲಿಕಾರ್ಜುನ ಬಸವಣ್ಣೆಪ್ಪ ತುಬಾಕಿ, ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಹೆಚ್. ಮಂಜುನಾಥ್, ಟ್ರಸ್ಟಿಗಳಾದ ಡಾ| ಪಿ.ವಿ. ಭಂಡಾರಿ, ಡಾ| ಶ್ರೀನಿವಾಸ್ ಭಟ್, ಗೌರವ ಸಲಹೆಗಾರರಾದ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಎಂದು ಕಾರ್ಯದರ್ಶಿ ವಿವೇಕ್ ವಿ. ಪಾೈಸ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು