ಬೆಂಗಳೂರು: ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಬೈಕ್ ಸವಾರ ಸಾವನ್ನಪ್ಪಿದ ಘಟನೆ ರಾಜಾಜಿನಗರ 6th ಬ್ಲಾಕ್ ನಲ್ಲಿ ನಡೆದಿದೆ.
25 ವರ್ಷದ ಮೋಹನ್ ಮೃತಪಟ್ಟ ಸವಾರ, ಬೈಕ್ ಸವಾರ ಅಡ್ಡ ರಸ್ತೆಯಿಂದ ಪಾಸ್ ಆಗುವ ವೇಳೆ ವೇಗವಾಗಿ ಬಂದ ಕಾರು ಗುದ್ದಿದೆ. ಇನ್ನು, ಮೋಹನ್ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ರೂ ಬ್ರೈನ್ ಡೆಡ್ ಆಗಿ ಸಾವನ್ನಪ್ಪಿದ್ದಾನೆ.
ಏಪ್ರಿಲ್ 22 ರಂದು ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕಾರು ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.