News Karnataka Kannada
Sunday, May 12 2024
ಮಂಗಳೂರು

ಬಂಟ್ವಾಳ: ಬೃಹತ್ ಗಾತ್ರದ ಮರ ಬಿದ್ದು ಮನೆಗೆ ಹಾನಿ

A huge tree that fell on the house
Photo Credit : By Author

ಬಂಟ್ವಾಳ: ಬೃಹತ್ ಮರವೊಂದು ಮನೆಯೊಂದರ ಮೇಲೆ ಬಿದ್ದ ಘಟನೆ ಶುಕ್ರವಾರ ಬೆಳಗ್ಗಿನ ಜಾವ ಮಾಣಿ-ಮೈಸೂರು‌ ರಾಜ್ಯ ಹೆದ್ದಾರಿಯ ಕೊಡಾಜೆ ಎಂಬಲ್ಲಿ ನಡೆದಿದ್ದು, ಮನೆಯೊಳಗಿನ ಮಲಗಿದ್ದ ಮೂವರೂ ಅದೃಷ್ಟವಶಾತ್ ಪಾರಾಗಿದ್ದಾರೆ.

ಕೊಡಾಜೆಯ ಅಪಾಯಕಾರಿ‌ ತಿರುವಿನಲ್ಲಿರುವ ಸಂಜೀವ ಶೆಟ್ಟಿ ಎಂಬವರಿಗೆ ಸೇರಿದ ಮನೆಗೆ ಘಟನೆಯಿಂದ ಭಾರೀ ಹಾನಿ ಸಂಭವಿಸಿದ್ದು, ಈ ಮನೆಯಲ್ಲಿ ಬಾಡಿಗೆಗೆ ಇದ್ದ ಮೂವರು ಕಾರ್ಮಿಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಮನೆಯ ಪಕ್ಕದಲ್ಲಿದ್ದ ಬೃಹತ್ ಮರ ಬೆಳಗಿನ‌ ಜಾವ 3.30 ರ ಸುಮಾರಿಗೆ ಬಿದ್ದಿದ್ದು, ಬಿದ್ದ ರಭಸದ ತೀವ್ರತೆಗೆ ತೆಂಗಿನ ಮರವೊಂದು ಮುರಿದುಬಿದ್ದಿದ್ದು, ಮರದ ಗೆಲ್ಲುಗಳು ಹೆದ್ದಾರಿಯನ್ನೂ ಆವರಿಸಿದ ಹಿನ್ನೆಲೆಯಲ್ಲಿ ಕೆಲಸಮಯಗಳ ಕಾಲ ಹೆದ್ದಾರಿಯಲ್ಲಿ ವಾಹಬ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಮಾಣಿ ಗ್ರಾ.ಪಂ.ಸದಸ್ಯ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿಯವರು ಸ್ಥಳಕ್ಕೆ ತೆರಳಿದ್ದು, ಸ್ಥಳೀಯರ ನೆರವಿನೊಂದಿಗೆ ಬಿದ್ದಿದ್ದ ಮರದ ತೆರವಿಗೆ ಸಹಕರಿಸಿದರು.

ಘಟನೆಯಿಂದಾಗಿ ಮನೆಯ, ಛಾವಣಿ ಗೋಡೆ ಹಾಗೂ ಸಿಟೌಟ್ ಗೆ ತೀವ್ರ ಹಾನಿಯಾಗಿದ್ದು, ಲಕ್ಷಾಂತರ ರೂ ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಕಂದಾಯ ಇಲಾಖಾ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು