News Karnataka Kannada
Sunday, May 05 2024
ಮಂಗಳೂರು

ಅರುಣ ಮಸಾಲಾ ಆ್ಯಪ್ ಬಿಡುಗಡೆಗೊಳಿಸಿದ ನಟ ಅರ್ಜುನ್ ಕಾಪಿಕಾಡ್

New Project 2021 11 14t131738.138
Photo Credit :

ಮಂಗಳೂರು: ನಗರದ ಪ್ರಸಿದ್ಧ ಮಸಾಲಾ ತಯಾರಿಕಾ ಕಂಪನಿ ಅರುಣ, ಹೊಸ ಯೋಜನೆಯನ್ನು ಕೈಗೊಂಡಿದೆ ಆ ಪ್ರಯುಕ್ತ ‘ಅರುಣ ಮಸಾಲ ಆ್ಯಪ್’ ತಯಾರಿಸಿದ್ದಾರೆ.
ಈ  ಆ್ಯಪ್ ನ್ನು ನಗರದ ಪಿಜ್ಜಾ ಮಾಲ್ ನಲ್ಲಿ ತುಳು ಚಿತ್ರ ನಟ ಅರ್ಜುನ್ ಕಾಪಿಕಾಡ್ ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ತುಳುಭಾಷೆಗೆ ತುಳು ಚಲನಚಿತ್ರಕ್ಕೆ ಸಹಾಯ ಮಾಡಿದ ಅರುಣ ಸಂಸ್ಥೆಗೆ ಆಭಾರಿಯಾಗಿದ್ದೇನೆ ಎಂದರು.

ಅಬತರ ಚಲನಚಿತ್ರದ ನಟಿ ಗಾನ ಭಟ್‌ರವರು ಅರುಣಾ ಮಸಾಲಾ ಸಂಸ್ಥೆಗೆ ಶುಭ ಹಾರೈಸಿದರು.
ಅರುಣಾ ಮಸಾಲಾ ಸಂಸ್ಥೆಯ ಪಾಲುದಾರರಾದ ಅನಂತೇಶ್ ಪ್ರಭುರವರು “ಅಬತರ” ಚಲನ ಚಿತ್ರ ತಂಡ ತಮ್ಮನ್ನು ಗುರುತಿಸಿದೆ ಅದಕ್ಕಾಗಿ ಅಭಿನಂದನೆಗಳು, ಮುಂದಕ್ಕೂ ಇದೇ ರೀತಿ ಸಹಕಾರವಿರಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ತುಳು ಚಿತ್ರ ನಟ ದೇವದಾಸ್ ಕಾಪಿಕಾಡ್, “ಅಬತರ ” ತುಳು ಚಿತ್ರದ ನಟಿ ಗಾನ ಭಟ್, ಅರುಣಾ ಮಸಾಲಾ ಸಂಸ್ಥೆಯ ಪಾಲುದಾರರಾದ ಅನಂತೇಶ್ ಪ್ರಭು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ “ಅಬತರ” ತುಳು ಚಲನಚಿತ್ರದ ಆಡಿಯೋ ಬಿಡುಗಡೆ ಮಾಡಲಾಯಿತು. ತುಳು ಚಲನಚಿತ್ರ “ಅಬತರ”ದ ತಂಡವು ಉಭಯ ಜಿಲ್ಲೆ ಮತ್ತು ಹಲವು ಕಡೆ ತನ್ನ ಚಲನಚಿತ್ರಕ್ಕೆ ಪ್ರಚಾರ ಅಭಿಯಾನ ನಡೆಸುತ್ತಿದ್ದು, ಅಲ್ಲೆಲ್ಲ ಅರುಣಾ ಮಸಾಲಾ ಸಂಸ್ಥೆಯ ಆ್ಯಪ್‌ನ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡುತ್ತದೆ. ಅರುಣಾ ಮಸಾಲಾ ಸಂಸ್ಥೆ “ಅಬತರ” ಚಲನ ಚಿತ್ರಕ್ಕೆ ಪ್ರಾಯೋಜಕತ್ವ ನೀಡುತ್ತಿದ್ದು, ಅಲ್ಲದೆ ತುಳು ಚಿತ್ರ ತಂಡವನ್ನು ಪ್ರೋತ್ಸಾಹಿಸುತ್ತಿದೆ ಎಂದು “ಅಬತರ” ತಂಡದ ಪ್ರವರ್ತಕರು ತಿಳಿಸಿದ್ದಾರೆ.

” ಅರುಣಾ ಮಸಾಲಾ ಆ್ಯಪ್”
ಅರುಣಾ ಮಸಾಲಾ ಸಂಸ್ಥೆಯ ಒಂದು ವಿನೂತನ ತಂತ್ರಜ್ಞಾನದ, ಮೊಬೈಲ್ ಸಾಧನಗಳಲ್ಲಿ ಮತ್ತು ಟ್ಯಾಬ್ಲೆಟ್, ಕಂಪ್ಯೂಟರ್ ಗಳಲ್ಲಿ ಸರಳವಾಗಿ ಕೆಲಸ ಮಾಡಲು ವಿನ್ಯಾಸಗೊಳಿಸಲಾಗಿದೆ. ಬಳಸಲು ಬಹಳ ಸುಲಭವಾಗಿದೆ ಮತ್ತು ಅನುಕೂಲಕರವಾಗಿದೆ.ಸಿಂಗಲ್ ಟಚ್ ಮೂಲಕ ಆ್ಯಪ್‌ಗೆ ಸುಲಭ ಪ್ರವೇಶ.
ಆ್ಯಪ್ ನಲ್ಲಿ ಅರುಣಾ ಮಸಾಲೆಯ ಸಂಪೂರ್ಣ ಮಾಹಿತಿ.ಇಚ್ಛಿಸಿದ ಮಸಾಲಾ ಪದಾರ್ಥಗಳನ್ನು ಒಂದೇ ಕ್ಲಿಕ್ನಲ್ಲಿ ಖರೀದಿಸುವ ಅವಕಾಶ. ತಕ್ಷಣ ಬಯಸಿದ ಸ್ಥಳಕ್ಕೆ ಮುಟ್ಟಿಸುವ ಕಾರ್ಯ. (ದೇಶದ ಯಾವುದೇ ಸ್ಥಳಕ್ಕೆ ನಿಗದಿತ ಸಮಯಕ್ಕೆ ತಲುಪಿಸಲಾಗುವುದು. ವಿತರಣಾ ಶುಲ್ಕ ಸಂಪೂರ್ಣ ಉಚಿತವಾಗಿರುತ್ತದೆ.). ಆ್ಯಪ್ ಸಂಪೂರ್ಣ ಉಚಿತವಾಗಿದ್ದು ಬಳಸಲು ಯಾವುದೇ ಶುಲ್ಕವಿಲ್ಲ. ಇದು ಎಂದೆಂದಿಗೂ ಉಚಿತವಾಗಿರುತ್ತೆ ಎಂದು ಕಂಪನಿಯು ಖುದ್ದು ಹೇಳಿಕೊಂಡಿದೆ.

ಅರುಣಾ ಮಸಾಲಾ ಸಂಸ್ಥೆಯ ಬಗ್ಗೆ: ಮಂಗಳೂರು ನಗರದ ಬೈಕಂಪಾಡಿ ಕೈಗಾರಿಕಾ ಪ್ರಾಂಗಣದಲ್ಲಿ ನೆಲೆಗೊಂಡಿರುವ ಅರುಣಾ ಮಸಾಲಾ ಕಂಪೆನಿ 1980ರಿಂದ ಜನತೆಗೆ ರುಚಿ ಮತ್ತು ನಂಬಿಕೆಗೆ ಹೆಸರುವಾಸಿಯಾಗಿ ಬೆಳೆದು ಬಂದಿದೆ. ಅರುಣಾ ಮಸಾಲಾ ಕಂಪೆನಿ ISO 22000:2005 ಪ್ರಮಾಣೀಕರಣ ಪತ್ರವನ್ನು ಪಡೆದ ಕರಾವಳಿ ಕರ್ನಾಟಕದ ಮೊದಲ ಮಸಾಲೆ ಸಂಸ್ಕರಣಾ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಹಾರ ಉತ್ಪನ್ನಗಳ ಅತ್ಯುನ್ನತ ಶ್ರೇಣಿಯ ಮಸಾಲೆ ಪುಡಿಗಳು, ಮಿಶ್ರಿತ ಮಸಾಲೆ ಪುಡಿಗಳು, ತ್ವರಿತ ತಯಾರಿಕೆಯ ಮಿಶ್ರಣಗಳು, ಉಪ್ಪಿನಕಾಯಿ ಮತ್ತು ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಗಳನ್ನು ಒಳಗೊಂಡಿದೆ.
ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ಕೇರಳ, ಹಾಗೆಯೇ ಮಧ್ಯಪ್ರಾಚ್ಯ ಮತ್ತು ಆಸ್ಟ್ರೇಲಿಯಾ ದೇಶದ ಗ್ರಾಹಕರಿಗೂ ರಫ್ತಾಗುತ್ತಿದೆ.ಅರುಣಾ ಮಸಾಲಾ ದಕ್ಷಿಣ ಭಾರತದ ಅಗ್ರ ಮಸಾಲೆ ತಯಾರಕರಲ್ಲಿ ಒಂದಾಗಿದೆ, ಅತ್ಯಾಧುನಿಕ ದರ್ಜೆಯ ಮಸಾಲೆ ಉತ್ಪಾದನಾ ಸೌಲಭ್ಯಗಳು, ಸಂಪೂರ್ಣ ಸ್ವಯಂಚಾಲಿತ ಯಂತ್ರಗಳು ಮತ್ತು ಆಂತರಿಕ ಅಲ್ಟ್ರಾ ಮೋಡರ್ನ್ ಪ್ರಯೋಗಾಲಯವನ್ನು ಹೊಂದಿದೆ. ಹಲವು ವರ್ಷಗಳ ಬದ್ಧತೆಯು ಇಂದು ಹಲವು ಕುಟುಂಬದ ನೆಚ್ಚಿನ ಮಸಾಲೆಯಾಗಿ ಗುರುತಿಸಿಕೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು