ಮುಂಬೈ: ವಂಚನೆ ಆರೋಪದಡಿಯಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಪತಿ ರಾಜ್ ಕುಂದ್ರಾ ವಿರುದ್ಧ ನಿತಿನ್ ಬರೈ ಎಂಬುವರು ದೂರು ದಾಖಲಿಸಿದ್ದು, ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಶನಿವಾರ ಎಫ್ಐಆರ್ ದಾಖಲಾಗಿದೆ.
ದೂರಿನ ಪ್ರಕಾರ 2014ರ ಜುಲೈನಲ್ಲಿ ಎಸ್ಎಫ್ಎಲ್ ಫಿಟ್ನೆಸ್ ಕಂಪನಿಯ ನಿರ್ದೇಶಕ ಕಾಶಿಫ್ ಖಾನ್, ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಮತ್ತು ಇತರರು ಸೇರಿ ಲಾಭ ಸಿಗುತ್ತದೆ ಎಂದು ಆಮಿಷವೊಡ್ಡಿ ಕಂಪನಿಯಲ್ಲಿ ಬಂಡವಾಳ ಹೂಡವಂತೆ ನಿತಿನ್ತನ್ನು ಕೇಳಿದ್ದರು.
ಅದರಂತೆ 1.5 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿದ್ದೇನೆಂದು ನಿತಿನ್ ಹೇಳಿದ್ದಾರೆ.
ಇಷ್ಟೇ ಅಲ್ಲದೆ, ಪುಣೆ ಸಮೀಪದ ಹದಪ್ಸರ್ ಮತ್ತು ಕೊರೆಂಗಾವ್ನಲ್ಲಿ ಸ್ಪಾ ಮತ್ತು ಜಿಮ್ ತೆರೆಯಲು ಫ್ರಾಂಚೈಸಿಯನ್ನು ಒದಗಿಸುವುದಾಗಿಯೂ ಎಸ್ಎಫ್ಎಲ್ ಕಂಪನಿ ಭರವಸೆ ನೀಡಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ. ಇದಾದ ಬಳಿಕ ಹಣ ಹಿಂತಿರುಗಿಸುವಂತೆ ಕೇಳಿದೆ. ಆದರೆ, ಹಣ ಕೊಡದೆ ಬೆದರಿಕೆ ಹಾಕುತ್ತಿದ್ದಾರೆಂದು ದೂರಿನಲ್ಲಿ ನಿತಿನ್ ಬರೈ ಉಲ್ಲೇಖಿಸಿದ್ದಾರೆ.
ದೂರಿನ ಆಧಾರದ ಮೇಲೆ ಬಾಂದ್ರಾ ಪೊಲೀಸ್ ಎಫ್ಐಆರ್ ದಾಖಲಿಸಿದ್ದು, ಪ್ರಕರಣ ಸಂಬಂಧ ತನಿಖೆಯನ್ನು ಕೈಗೊಂಡಿದ್ದಾರೆ. ಈಗಾಗಲೇ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜೈಲುಪಾಲಾಗಿ ಜಾಮೀನಿನ ಮೇಲೆ ಹೊರಗಿರುವ ರಾಜ್ ಕುಂದ್ರಾಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.