ಕಾಸರಗೋಡು: ಸೊಳ್ಳೆ ನಿವಾರಕ ದ್ರಾವಣ ಸೇವಿಸಿದ ಪರಿಣಾಮ ಒಂದೂವರೆ ವರ್ಷದ ಹೆಣ್ಣು ಮಗು ಮೃತಪಟ್ಟ. ದಾರುಣ ಘಟನೆ ಕಾಸರಗೋಡಿನ ಕಲ್ಲೂರಾವಿ ಎಂಬಲ್ಲಿ ನಡೆದಿದೆ.
ಕಾಞಂಗಾಡ್ ಕಲ್ಲೂರಾವಿಯ ಬಾವನಗರದ ರಂಶೀದ್–ಅನ್ಶಿಫಾ ದಂಪತಿಗಳ ಪುತ್ರಿ ಜೆಸಾ ಮೃತ ಪಟ್ಟ ಮಗು. ಎರಡು ದಿನಗಳ ಹಿಂದೆ ಮನೆಯಲ್ಲಿ ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಸೊಳ್ಳೆ ನಿವಾರಕ ದ್ರಾವಣವನ್ನು ಸೇವಿಸಿದ್ದಳು. ಇದನ್ನು ಗಮನಿಸಿದ್ದ ಮನೆಯವರು ಮಗುವಿಗೆ ಕಾಞಂಗಾಡ್ ನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಬೆಳಿಗ್ಗೆ ಮಗು ಮೃತಪಟ್ಟಿದೆ.