Bengaluru 26°C
Ad

ಅರ್ಜುನನ ಹೆಸರಿನಲ್ಲಿ ಲಕ್ಷಾಂತರ ಹಣ ಸಂಗ್ರಹಿಸಿದ ಖದೀಮ

: ದಸರಾ ಆನೆ ಅರ್ಜುನ ಸ್ಮಾರಕ ನಿರ್ಮಾಣ ವಿಚಾರ ಸದ್ಯ ಸಾಕಷ್ಟು ಚರ್ಚೆಯಲ್ಲಿದೆ. ಅರ್ಜುನ ಆನೆ ಮೃತಪಟ್ಟು ಐದು ತಿಂಗಳು ಕಳೆದರೂ ಸರ್ಕಾರ ಮಾತ್ರ ಸ್ಮಾರಕ ನಿರ್ಮಾಣಕ್ಕೆ ಮುಂದಾ ಗಿಲ್ಲ

ಹಾಸನ: ದಸರಾ ಆನೆ ಅರ್ಜುನ ಸ್ಮಾರಕ ನಿರ್ಮಾಣ ವಿಚಾರ ಸದ್ಯ ಸಾಕಷ್ಟು ಚರ್ಚೆಯಲ್ಲಿದೆ. ಅರ್ಜುನ ಆನೆ ಮೃತಪಟ್ಟು ಐದು ತಿಂಗಳು ಕಳೆದರೂ ಸರ್ಕಾರ ಮಾತ್ರ ಸ್ಮಾರಕ ನಿರ್ಮಾಣಕ್ಕೆ ಮುಂದಾ ಗಿಲ್ಲ. ಆದರೆ ಅರ್ಜುನ ಆನೆ ಸ್ಮಾರಕ ನಿರ್ಮಾಣ ಮಾಡುವ ವಿಚಾರವನ್ನು ಬಂಡವಾಳ ಮಾಡಿಕೊಂಡಿರುವ ಓರ್ವ ವ್ಯಕ್ತಿ ಅಕ್ರಮವಾಗಿ ಹಣ ಸಂಗ್ರಹಿ ಸುತ್ತಿರುವ ಆರೋಪ ಕೇಳಿಬಂದಿದೆ.

ಮೈಸೂರು ಜಿಲ್ಲೆಯ ನವೀನ್ ಹೆಚ್.ಎನ್ ಎಂಬು ವನು ಅರ್ಜುನ ಪಡೆ ಎಂಬ ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿ, ಅರ್ಜುನ ಸ್ಮಾರಕ ಹೋರಾಟಕ್ಕೆ ನಿಮ್ಮ ಬೆಂಬಲ ಬೇಕು ಅಂತ ಹಣಕ್ಕಾಗಿ ಸಹಾಯ ಕೇಳು ತ್ತಿದ್ದಾನೆ. ಇದನ್ನು ನಂಬಿದ ಹಲವರು ಹಣ ಸಹಾಯ ಮಾಡಿದ್ದಾರೆ. ಇದರಿಂದ ನವೀನ್ ಹೆಚ್. ಎನ್. ಖಾತೆಗೆ ಲಕ್ಷಾಂತರ ಹಣ ಜಮೆ ಆಗಿದೆ ಎಂದು ಮಲೆನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಆರೋಪ ಮಾಡಿದ್ದಾರೆ. ಈತ ಹಣ ಸಂಗ್ರಹಿಸಿದ ಬಗ್ಗೆ ದೂರು ದಾಖಲಾಗಿದೆ.

ನಟ ದರ್ಶನಗೂ ಮೋಸ
ಅರ್ಜುನ ಆನೆ ಸ್ಮಾರಕ ನಿರ್ಮಾಣಕ್ಕೆ ಸಹಾಯ ಮಾಡುವಂತೆ ನವೀನ್? ನಟ ದರ್ಶನ್ ಅವರ ಪಿಎಯನ್ನೂ ಸಂಪರ್ಕ ಮಾಡಿದ್ದಾನೆ. ಅವ ರಿಂದ ಕಲ್ಲನ್ನು ತೆರೆಸಿಕೊಂಡಿದ್ದಾನೆ. ಈ ಕಲ್ಲನ್ನು ಅರಣ್ಯ ಇಲಾಖೆಯವರಿಗೆ ೩೦ ಸಾವಿರ ರೂ.ಗೆ ಮಾರಿದ್ದಾನೆ ಅಂತ ಆರೋಪ ಕೇಳಿಬಂದಿದೆ.
ಅರ್ಜುನನ ಹೆಸರಿನಲ್ಲಿ ಹಣ ಸಂಗ್ರಹಕ್ಕೆ ಜನರ ಆಕ್ರೋಶ

ಸಾರ್ವಜನಿಕರಿಂದ ಹಣ ಪಡೆರಯುವುದಕ್ಕೆ ಈತನಿಗೆ ಅನುಮತಿ ಕೊಟ್ಟವರು ಯಾರು? ಈತನ ವೈಯಕ್ತಿಕ ಖಾತೆಗೆ ಯಾರೂ ಹಣ ಹಾಕಬೇಡಿ. ಅಲ್ಲದೆ ಈತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ. ಈತನ ಖಾತೆಗೆ ನೂರಾರು ಜನರು ಹಣ ಸಂದಾಯ ಮಾಡಿರುವ ಫೊಟೋಗಳು ವೈರಲ್ ಆಗಿವೆ.

Ad
Ad
Nk Channel Final 21 09 2023
Ad