Bengaluru 24°C
Ad

ಕ್ಯಾನ್ಸರ್‌ನಿಂದ ಸಾವು ಗೆದ್ದ ಪಲ್ಲವಿಗೆ ಮಿಸ್ ಇಂಡಿಯಾ ಕ್ಯಾನ್ಸರ್ ವಾರಿಯರ್ ಪ್ರಶಸ್ತಿ

ಕ್ಯಾನ್ಸರ್ ರೋಗದ ಸಾವನ ಗೆದ್ದು ಮಿಸ್ ಇಂಡಿಯಾ ಕ್ಯಾನ್ಸರ್ ವಾರಿಯರ್ ಪ್ರಶಸ್ತಿಯನ್ನು ಮುಡಿಲಿಗೇರಿಸಿಕೊಂಡ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮೂಳೆನಹಳ್ಳಿ ಮಹಿಳೆ.

ಹಾಸನ: ಕ್ಯಾನ್ಸರ್ ರೋಗದ ಸಾವನ ಗೆದ್ದು ಮಿಸ್ ಇಂಡಿಯಾ ಕ್ಯಾನ್ಸರ್ ವಾರಿಯರ್ ಪ್ರಶಸ್ತಿಯನ್ನು ಮುಡಿಲಿಗೇರಿಸಿಕೊಂಡ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮೂಳೆನಹಳ್ಳಿ ಮಹಿಳೆ.  ಮನುಷ್ಯನಿಗೆ ಬಹಳ ದೊಡ್ಡ ಕಾಯಿಲೆಗಳಲ್ಲಿ ಒಂದಾದ ಕ್ಯಾನ್ಸರ್ ರೋಗವು. ಆತ್ಮವಿಶ್ವಾಸ ಇದ್ದರೆ ಯಾವ ರೋಗವನ್ನು ಗೆಲ್ಲಬಹುದು ಎಂಬುದಕ್ಕೆ ಪಲ್ಲವಿ ಭೂಷಣ್ ಸಾಕ್ಷಿ.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ೨೬ ರಾಜ್ಯಗಳ ಕ್ಯಾನ್ಸರ್ ಪೆಡಿತರ ಫ್ಯಾಷನ್ ಶೋನಲ್ಲಿ ಗೆದ್ದ ಬೇಲೂರಿನ ಬಾಲೆ. ಕ್ಯಾನ್ಸರನ್ನು ಗೆದ್ದ ಬಳಿಕ ಮಿಸ್ ಇಂಡಿಯಾ ಕ್ಯಾನ್ಸರ್ ವಾರಿಯರ್ಸ್ ನ ಎರಡನೇ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದ ಕರ್ನಾಟಕದ ಪಲ್ಲವಿ ಭೂಷಣ್ ಬೇಲೂರು ತಾಲೂಕು ಮೂಳೆನಹಳ್ಳಿ ಗ್ರಾಮದ ಗಂಗಾ ಕಾಂತರಾಜ್ ಎಪಿಎಂಸಿ ಮಾಜಿ ಅಧ್ಯಕ್ಷರು ಆದಂತಹ ಇವರಿಗೆ ಎರಡು ಗಂಡು ಹಾಗೂ ಒಂದು ಹೆಣ್ಣು ಹಿರಿಯ ಮಗಳಾದ ಪಲ್ಲವಿ ಸದಾ ಮುಂದು ಅಷ್ಟೇ ಅಲ್ಲದೆ ಉತ್ತಮ ಫ್ಯಾಶನ್ ಡಿಸೈನಿಂಗ್ ಕೆಲಸದಲ್ಲಿ ಅವರ ಕೈಚಳಕ್ಕೆ ಮಾರುಹೋದವರೇ ಇಲ್ಲ. ಡೈಮಂಡ್ ಡಿಸೈನರ್ ಅದ ಇವರು ಬೆಂಗಳೂರಿನಲ್ಲಿ ಉತ್ತಮ ಡೈಮಂಡ್ ಜ್ಯುವೆಲ್ಲರಿಗಳನ್ನು ವಿಶೇಷ ಸಾಧನೆ ಮಾಡಿದ ಮಹಿಳೆ.

ಸಾಮಾನ್ಯವಾಗಿ ಇತ್ತೀಚಿನ ಯುವ ಪೀಳಿಗೆಗೆ ನೆಚ್ಚಿನ ಕಾರ್ಯಕ್ರಮವೆಂದರೆ ಸೌಂದರ್ಯ ಸ್ಪರ್ಧೆ. ಆದರೆ ಮೊನ್ನೆಯಷ್ಟೇ ದೆಹಲಿಯಲ್ಲಿ ಒಂದು ವಿಶೇಷವಾದ “ಮಿಸ್ ಇಂಡಿಯಾ ಕ್ಯಾನ್ಸರ್ ವಾರಿಯರ್ಸ್ – ೨” ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಹೆಸರು ಹೇಳಿದಂತೆ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲಾ ಮಹಿಳೆಯರು ಕ್ಯಾನ್ಸರ್ ರೋಗವನ್ನು ಗೆದ್ದು ಬಂದವರಾಗಿದ್ದರು.

ಅವರಲ್ಲಿ ಒಬ್ಬರಾದ ಪಲ್ಲವಿ ಭೂಷಣ್ ನಮ್ಮ ಕರ್ನಾಟಕದಿಂದ ಸ್ಪರ್ಧಿಸಿ ಮಿಸ್ ಇಂಡಿಯಾ ಕ್ಯಾನ್ಸರ್ ವಾರಿಯರ್ – ಸ್ಟೈಲ್ ಕ್ವೀನ್ ಎಂಬ ಕಿರೀಟವನ್ನು ಧರಿಸಿದರು. ವೃತ್ತಿಯಲ್ಲಿ ಇವರು ಹಿರಿಯ ಜ್ಯುವೆಲ್ಲರಿ ಡಿಸೈನರ್ ಆಗಿದ್ದು, ಹೆಸರಾಂತ ಕಂಪನಿಗಳಲ್ಲಿ ಮಾಡಿದ ಇವರ ವಿನ್ಯಾಸಗಳು ಆಕರ್ಷಕ ಆಭರಣಗಳಾಗಿ ಗ್ರಾಹಕರಿಗೆ ತಲುಪಿವೆ. ತನ್ನ ಮೂವತ್ನಾಲ್ಕನೆ ವಯಸ್ಸಿನಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎಂದುಕೊಳ್ಳುತ್ತಿರುವಾಗ ಇವರಿಗೆ ಮೆದುಳಿನ ಕ್ಯಾನ್ಸರ್ ಇದೆಯೆನ್ನುವ ಆಘಾತಕಾರಿ ವಿಷಯ ತಿಳಿಯುತ್ತದೆ. ಈ ವಿಷಯವನ್ನು ಸ್ವೀಕರಿಸಲು ಅಸಾಧ್ಯವಾದರೂ ಸಹ ದೃಢಮನಸ್ಸಿನಿಂದ ಹೋರಾಡಲು ಸಿದ್ದರಾದರು.

ತನ್ನ ಮೂರು ವರ್ಷದ ಮಗುವಿನ ಭವಿಷ್ಯವನ್ನು ಕಟ್ಟುವ ಬಯಕೆ, ದೇವರಲ್ಲಿ ಇದ್ದ ಅಪಾರವಾದ ನಂಬಿಕೆ ಹಾಗು ಮನೆಯ ಪರಿವಾರದವರೆಲ್ಲರ ಸಹಕಾರ ಇವರನ್ನು ಭಲಶೀಲರನ್ನಾಗಿ ಮಾಡಿದವು. ಸತತ ಐದು ಗಂಟೆಗಳ ಕಾಲ ನಡೆದ ಎಚ್ಚರಿಕೆಯ ಶಸ್ತ್ರಚಿಕಿತ್ಸೆ, ೪೫ ದಿನಗಳ ರೇಡಿಯೇಶನ್ ಥೆರಪಿ ಹಾಗು ಎರಡೂವರೆ ವರ್ಷಗಳವರೆಗೆ ಕಿಮೋಥೆರಪಿ ಚಿಕಿತ್ಸೆಗಳನ್ನು ತೆಗೆದುಕೊಳ್ಳಬೇಕಾಯಿತು. ಇವರ ೨೦೧೮ ರಿಂದ ೨೦೨೧ ವರೆಗಿನ ದಿನಗಳು ಬಹಳ ಕಷ್ಟಕರವಾಗಿದ್ದವು. ಆದರೆ ಯಾವುದಕ್ಕೂ ಎದೆಗುಂದದೆ, ಸಣ್ಣ ಸಣ್ಣ ಸವಾಲುಗನ್ನು ಗೆಲ್ಲುತ್ತಾ ಈ ರೋಗವನ್ನು ಎದುರಿಸಿ ಮೆಟ್ಟಿ ನಿಂತರು.

ತನ್ನ ದೃಢ ಹೋರಾಟದ ಮುಂದೆ ಕ್ಯಾನ್ಸರ್ ಎನ್ನುವ ರೋಗವು ಸೋಲನ್ನನುಭವಿಸಬೇಕಾಯಿತು. ಇಂದು ನನ್ನಲ್ಲಿರುವ ಶಕ್ತಿಯನ್ನು ನಾನು ಅರಿತಿದ್ದೇನೆ ಹಾಗು ಯಾವುದೇ ಕಷ್ಟ ಬಂದರೂ ಸಹ ಅದನ್ನು ಹಿಮ್ಮೆಟ್ಟಿಸುವ ಮನಸ್ಥಿತಿ ನನ್ನಲ್ಲಿದೆಯೆಂದು ಹೇಳುತ್ತಾರೆ ಪಲ್ಲವಿ.

ಸ್ಪರ್ಧೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಇವರು, ಸಮಾಜಕ್ಕೆ ಹಾಗೂ ಈ ರೋಗದೊಂಗಿಗೆ ಹೋರಾಡುತ್ತಿರುವವರಿಗೆ ಹೇಳುವ ಕಿವಿಮಾತೆಂದರೆ “ಮನುಷ್ಯನಲ್ಲಿ ಎಲ್ಲವನ್ನೂ ಎದಿರುಸುವ ಶಕ್ತಿಯಿರುತ್ತದೆ, ಯಾವುದಕ್ಕೂ ಎದೆಗುಂದದೆ ದೃಡಮನಸ್ಸಿನಿಂದ ಗೆಲುವು ನಮ್ಮದೇ ಎಂದು ಎದುರಿಸಿದರೆ ಎಂತಹ ರೋಗವನ್ನು ಸಹ ಸಂಪೂರ್ಣವಾಗಿ ಗೆಲ್ಲಬಹುದು”.

ಕೊನೆಗೊಮ್ಮೆ, ತಮಗೆ ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಕೊಟ್ಟ ಎಲ್ಲಾ ವೈಧ್ಯರಿಗೂ ಮತ್ತು ಸಮಾಜಕ್ಕೆ ಅರಿವು ಮೂಡಿಸುವ ಇಂತಹ ಸೌಂದರ್ಯ ಸ್ಪರ್ಧೆಗೆ ಆಹ್ವಾನವಿತ್ತ ಶೈನಿಂಗ್ ರೇಸ್ ಆಫ್ ಹೋಪ್ ಫೌಂಡೇಷನ್ನಿನ ಅಭಿಲಾಷ ಪಟ್ನಾಯಕ್ ರವರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಮನುಷ್ಯನಿಗೆ ಕಾಯಿಲೆಗಳು ಬರುವುದು ಸಹಜ ಆದರೆ ಇಂದಿಗೂ ಸಹ ಎದೆಗುಂದ ಬರದು ನನ್ನ ಪತ್ನಿಗೆ ಇಂತಹ ಒಂದು ಮಾರಕ ಕಾಯಿದೆ ಇದೆ ಎಂದು ನನಗೆ ತಿಳಿದ ತಕ್ಷಣ ದೊಡ್ಡ ಅಗತವಾಯಿತು ಆದರೆ ನನ್ನ ಕುಟುಂಬಸ್ಥರ ಸಹಕಾರ ಪ್ರೀತಿ ವಿಶ್ವಾಸದಿಂದ ಅವಳಿಗೆ ಆತ್ಮಸ್ಥೈರ್ಯದ ಮೂಲಕ ಇಂತಹ ಒಂದು ಬಹುದೊಡ್ಡ ಕಾಯಿಲೆಯನ್ನು ಗೆದ್ದು ದೇಶವೇ ಮೆಚ್ಚುವಂತಹ ಸಾಧನೆ ಮಾಡಿದ್ದಾಳೆ ಎಂದು ವೃತ್ತಿಯಲ್ಲಿ ಐ ಟಿ ಸಿಯಲ್ಲಿ ವಿಜ್ಞಾನಿಯಾಗಿರುವ ಆಗಿರುವ ಪಲ್ಲವಿ ಅವರ ಪತಿ ನಾಗಭೂಷಣ್ ಹರ್ಷ ವ್ಯಕ್ತಪಡಿಸಿದರು.

ನನ್ನ ಮಗಳಿಗೆ ಇಂತಹ ಒಂದು ಮಾರಕ ಕಾಯಿಲೆ ಬಂದಂತ ಸಂದರ್ಭದಲ್ಲಿ ನಮಗೆ ದಿಕ್ಕು ತೋಚದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ಆದರೆ ನನ್ನ ಮಗನಂತೆ ನಿಂತು ಅಳಿಯ ನಮಗೆ ಧೈರ್ಯ ತುಂಬುವ ಮೂಲಕ ಹಾಗೂ ಪಲ್ಲವಿ ಅವರ ಸಹೋದರರು ನಮಗೆ ಮಾನಸಿಕವಾಗಿ ಧೈರ್ಯ ತುಂಬುವ ಮೂಲಕ ಇಂತಹ ದೊಡ್ಡ ಸಾಧನೆ ಮಾಡಿರುವುದು ಮುಂದಿನ ಪೀಳಿಗೆಗೆ ಒಂದು ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಪಲ್ಲವಿವರ ಪೋಷಕರಾದ ಗಂಗಾ ಕಾಂತರಾಜ್ ಸಂತಸ ವ್ಯಕ್ತಪಡಿಸಿದರು.

Ad
Ad
Nk Channel Final 21 09 2023
Ad