Ad

ಕಾಲಿವುಡ್​ನಲ್ಲೂ ಡಿವೋರ್ಸ್ ಸದ್ದು: ಸ್ಟಾರ್ ನಟ ಜಯಂ ರವಿ ಸಂಸಾರದಲ್ಲಿ ಬಿರುಕು

ತಮಿಳು ಸಿನಿಮಾ ಕ್ಷೇತ್ರದಲ್ಲೂ ಈಗ ಡಿವೋರ್ಸ್ ಸದ್ದು ಮಾಡುತ್ತಿದ್ದು ಸ್ಟಾರ್ ನಟ ಜಯಂ ರವಿ ತನ್ನ ಹೆಂಡತಿ ಆರತಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ತಮಿಳು ಸಿನಿಮಾ ಕ್ಷೇತ್ರದಲ್ಲೂ ಈಗ ಡಿವೋರ್ಸ್ ಸದ್ದು ಮಾಡುತ್ತಿದ್ದು ಸ್ಟಾರ್ ನಟ ಜಯಂ ರವಿ ತನ್ನ ಹೆಂಡತಿ ಆರತಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

Ad
300x250 2

ನಟ ಜಯಂ ರವಿ ತಮಿಳು ಇಂಡಸ್ಟ್ರಿಯಲ್ಲಿ ತಮ್ಮದೇ ನಟನೆಯಿಂದ ಅಭಿಮಾನಿಗಳ ಮನ ಗೆದ್ದಂತವರು. ಇವರು ಪತ್ನಿ ಆರತಿಗೆ ಡಿವೋರ್ಸ್ ನೀಡುವ ಸಿದ್ಧತೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಸಂಬಂಧ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಆದರೆ ಈ ಇಬ್ಬರ ಮಧ್ಯೆ ಬಿರುಕು ಇರುವುದಂತೂ ನಿಜ, ಒಂದೇ ಮನೆಯಲ್ಲಿ ಇಬ್ಬರು ಒಟ್ಟಿಗೆ ಇಲ್ಲವೆಂದು ಕಾಲಿವುಡ್​​ ಕ್ಷೇತ್ರದಲ್ಲಿ ಪಿಸು ಮಾತುಗಳು ಕೇಳಿ ಬರುತ್ತಿವೆ.

ಕಾಲಿವುಡ್​ನಲ್ಲಿ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಜಯಂ ರವಿ ಹಾಗೂ ಪತ್ನಿ ಆರತಿ ನಡುವೆ ಕೆಲ ವರ್ಷಗಳಿಂದ ಭಿನ್ನಾಭಿಪ್ರಾಯವಿದೆ. ಹೀಗಾಗಿ ಒಬ್ಬರನ್ನೊಬ್ಬರು ಇಷ್ಟಪಡುತ್ತಿಲ್ಲ. ಇದಕ್ಕೆ ಪುಷ್ಟಿ ನೀಡುವಂತೆ ಆರತಿ ತನ್ನ ಇನ್​ಸ್ಟಾದಲ್ಲಿ ಗಂಡನ ಎಲ್ಲ ಫೋಟೋಗಳನ್ನು ತೆಗೆದು ಹಾಕಿದ್ದಾರೆ. ಆದರೆ ಈ ಬಗ್ಗೆ ಜಯಂ ರವಿ ಎಲ್ಲಿಯು ಅಧಿಕೃತವಾಗಿ ಮಾಹಿತಿ ನೀಡಿಲ್ಲ ಎಂದು ಹೇಳಲಾಗಿದೆ.

Ad
Ad
Nk Channel Final 21 09 2023
Ad