Ad

ನಂಜುಂಡೇಶ್ವರನ ದೇವಾಲಯದ ಹುಂಡಿಯಲ್ಲಿ 1.69 ಕೋಟಿ ರೂ.ಸಂಗ್ರಹ

ಪುರಾಣ ಪ್ರಸಿದ್ಧ ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ದೇವಾಲಯದ 35 ಹುಂಡಿಗಳನ್ನು ಎಣಿಕೆ ಮಾಡಲಾಯಿತು. ಸುಮಾರು 1.69 ಕೋಟಿ ರೂ ಹಾಗೂ ಚಿನ್ನಾಭರಣ ಸಂಗ್ರಹವಾಗಿದೆ.

ನಂಜನಗೂಡು: ಪುರಾಣ ಪ್ರಸಿದ್ಧ ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ದೇವಾಲಯದ 35 ಹುಂಡಿಗಳನ್ನು ಎಣಿಕೆ ಮಾಡಲಾಯಿತು. ಸುಮಾರು 1.69 ಕೋಟಿ ರೂ ಹಾಗೂ ಚಿನ್ನಾಭರಣ ಸಂಗ್ರಹವಾಗಿದೆ.

Ad
300x250 2

ದೇವಾಲಯಕ್ಕೆ 1.69 ಕೋಟಿ ರೂ. ಆದಾಯ ಲಭ್ಯವಾಗಿದ್ದು, 1,69,69,867 ರೂ. ನಗದು , 134 ಗ್ರಾಂ ಚಿನ್ನ, 2 ಕೆಜಿ 350ಗ್ರಾಪಂ ಬೆಳ್ಳಿ, 23 ವಿದೇಶಿ ಕರೆನ್ಸಿಗಳು ದೊರೆತಿವೆ. ದೇವಾಲಯದ ದಾಸೋಹ ಭವನದಲ್ಲಿ ಸ್ವಸಹಾಯ ಸಂಘದ ನೂರಕ್ಕೂ ಹೆಚ್ಚು ಮಹಿಳಾ ಸದಸ್ಯರು, ಬ್ಯಾಂಕ್ ಅಫ್ ಬರೋಡ ಸಿಬ್ಬಂದಿ ಹಾಗೂ ದೇವಾಲಯದ ಸಿಬ್ಬಂದಿಗಳು ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು.

H

ಈ ಸಂದರ್ಭದಲ್ಲಿ ದೇವಾಲಯದ ಇಒ ಜಗದೀಶ್ ಕುಮಾ‌ರ್, ತಹಶೀಲ್ದಾರ್ ವಿದ್ಯುಲತಾ, ಎಇಒ ಸತೀಶ್, ಲೆಕ್ಕಾಧಿಕಾರಿ ಗುರುಮಲ್ಲಯ್ಯ, ಬ್ಯಾಕ್ ಆಫ್ ಬರೋಡ ವ್ಯವಸ್ಥಾಪಕ ಟಿ.ಕೆ.ನಾಯಕ್ ಉಪಸ್ಥಿತರಿದ್ದರು.

Ad
Ad
Nk Channel Final 21 09 2023
Ad