Ad

ವಿಶ್ವ ಹಿಂದೂ ಪರಿಷದ್‌ ಮುಖಂಡನ ಹತ್ಯೆ : ಇಬ್ಬರು ಹಂತಕರ ಫೋಟೋ ಬಿಡುಗಡೆ

ವಿಶ್ವ ಹಿಂದೂ ಪರಿಷದ್‌ ಮುಖಂಡನ ಹತ್ಯೆ : ಇಬ್ಬರು ಹಂತಕರ ಫೋಟೋ ಬಿಡುಗಡೆ

ಪಂಜಾಬ್‌: ವಿಶ್ವ ಹಿಂದೂ ಪರಿಷದ್‌ ಮುಖಂಡನ ಹಂತಕರ ಪತ್ತೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ತಲಾ ಹತ್ತು ಲಕ್ಷ ರೂ. ಬಹುಮಾನ ಘೋಷಿಸಿದೆ.

Ad
300x250 2

ಎನ್‌ಐಎ ಈ ಇಬ್ಬರು ಹಂತಕರ ಫೋಟೋವನ್ನೂ ಸಹ ಬಿಡುಗಡೆ ಮಾಡಿದೆ. ಕಳೆದ ತಿಂಗಳು ವಿಶ್ವ ಹಿಂದೂ ಪರಿಷದ್‌ ನಾಯಕ ವಿಕಾಸ್‌ ಪ್ರಭಾಕರ್‌ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇದೀಗ ಹಂತಕರ ಪತ್ತೆಗಾಗಿ ಎನ್‌ಐಎ ಪ್ರಕಟಣೆ ಹೊರಡಿಸಿದೆ.

ಎನ್‌ಐಎ ಪ್ರಕಟಣೆ ಪ್ರಕಾರ ಹಂತಕರಾದ ಗರ್‌ಪಧನಾ ಗ್ರಾಮದ ನಿವಾಸಿಯಾಗಿರುವ ಕುಲದೀಪ್‌ ಸಿಂಗ್‌ ಪುತ್ರ ಹರ್ಜಿತ್‌ ಸಿಂಗ್‌ ಅಲಿಯಾಸ್‌ ಲಡ್ಡಿ ಮತ್ತು ಯಮುನಾ ನಗರ ನಿವಾಸಿ ಕುಲ್ಬೀರ್‌ ಸಿಂಗ್‌ ಪುತ್ರ ಸುಖ್ವಿಂದರ್‌ ಸಿಂಗ್‌ ವಿರುದ್ಧ ಹರಿಯಾಣದ ಜಗಧಾರಿ ಪೊಲೀಸ್‌ ಠಾಣೆಯಲ್ಲಿ ಮೇ 9ರಂದು ವಿಕಾಸ್‌ ಪ್ರಭಾಕರ್‌ ಹತ್ಯೆ ಪ್ರಕರಣ ದಾಖಲಾಗಿದೆ.

ಪ್ರಭಾಕರ್ ಅವರು ವಿಎಚ್‌ಪಿಯ ನಂಗಲ್ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪ್ರಭಾಕರ್ ಹತ್ಯೆಯ ಹಿಂದಿನ ದೊಡ್ಡ ಪಿತೂರಿಯನ್ನು ಬಯಲಿಗೆಳೆಯಲು ಕೇಂದ್ರ ಗೃಹ ಸಚಿವಾಲಯವು ಪ್ರಕರಣದ ಕುರಿತು ಎನ್‌ಐಎ ತನಿಖೆಗೆ ಶಿಫಾರಸು ಮಾಡಿತ್ತು. ಆರೋಪಿಗಳ ವಿರುದ್ಧ ಐಪಿಸಿ, ಯುಎ(ಪಿ) ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿಗಳ ಬಗ್ಗೆ ಯಾವುದೇ ಮಾಹಿತಿಯನ್ನು ಸಿಕ್ಕಿದರೆ ಎನ್‌ಐಎ ಪ್ರಧಾನ ಕಚೇರಿಯ ದೂರವಾಣಿ ಸಂಖ್ಯೆ: 011-24368800, WhatsApp/ಟೆಲಿಗ್ರಾಂ: +91-8585931100 ಮತ್ತು ಇಮೇಲ್ ಐಡಿ: [email protected] ನಲ್ಲಿ ಹಂಚಿಕೊಳ್ಳಬಹುದು ಎಂದು NIA ತಿಳಿಸಿದೆ.

ದೂರವಾಣಿ ಸಂಖ್ಯೆ: 0172-2682900, 2682901 ಮೂಲಕ ಇಬ್ಬರ ವಿರುದ್ಧ ಮಾಹಿತಿಯನ್ನು ಹಂಚಿಕೊಳ್ಳಲು ಅದರ ಚಂಡೀಗಢ ಕಚೇರಿಯನ್ನು ಸಂಪರ್ಕಿಸಬಹುದು; WhatsApp/ಟೆಲಿಗ್ರಾಮ್ ಸಂಖ್ಯೆ: 7743002947ಮತ್ತು [email protected] ಕ್ಕೂ ಸಂಪರ್ಕಿಸಬಹುದು ಎಂದು ಎನ್‌ಐಎ ಹೇಳಿದೆ.

Ad
Ad
Nk Channel Final 21 09 2023
Ad