Bengaluru 22°C
Ad

ದೇವರಮನೆ,ಚಾರ್ಮಾಡಿಯಲ್ಲಿ ಮೋಜು-ಮಸ್ತಿ : ವಾಹನ ನಿಲ್ಲಿಸಿ ಪ್ರವಾಸಿಗರ ಹುಚ್ಚಾಟ

ಮಲೆನಾಡ ತಪ್ಪಲಿನಲ್ಲಿರುವ ದೇವರಮನೆ ಕ್ಷೇತ್ರಕ್ಕೆ ಈ ಸಮಯದಲ್ಲಿ ಅಂದರೆ ಮಾನ್ಸೂನ್‌ ಸಮಯದಲ್ಲಿ ಪ್ರವಾಸಿಗರು ಹೆಚ್ಚಾಗಿ ಬರುತ್ತಾರೆ. ಹೊಯ್ಸಳರ ಕಾಲದ ಇತಿಹಾಸ ಪ್ರಸಿದ್ಧ ಕಾಲಭೈರವೇಶ್ವರ 9 ಗುಡ್ಡಗಳ ನಡುವೆ ನೆಲೆಸಿದ್ದಾನೆ.

ಚಿಕ್ಕಮಗಳೂರು: ಮಲೆನಾಡ ತಪ್ಪಲಿನಲ್ಲಿರುವ ದೇವರಮನೆ ಕ್ಷೇತ್ರಕ್ಕೆ ಈ ಸಮಯದಲ್ಲಿ ಅಂದರೆ ಮಾನ್ಸೂನ್‌ ಸಮಯದಲ್ಲಿ ಪ್ರವಾಸಿಗರು ಹೆಚ್ಚಾಗಿ ಬರುತ್ತಾರೆ. ಹೊಯ್ಸಳರ ಕಾಲದ ಇತಿಹಾಸ ಪ್ರಸಿದ್ಧ ಕಾಲಭೈರವೇಶ್ವರ 9 ಗುಡ್ಡಗಳ ನಡುವೆ ನೆಲೆಸಿದ್ದಾನೆ. ಆದರೆ ಇಂತಹ ಪ್ರವಾಸಿ ತಾಣಗಳು ಕೆಲ ಪ್ರಾವಾಸಿಗರ ಹುಚ್ಚಾಟ್ಕಕ್ಕೆ ತುತ್ತಾಗುತ್ತಿದೆ.

Ad
300x250 2

ಇದೀಗ ಶ್ರೀ ಕ್ಷೇತ್ರ ದೇವರಮನೆ ಪ್ರದೇಶದಲ್ಲಿರುವ ಕಾಲಭೈರವೇಶ್ವರನ ಕ್ಷೇತ್ರದಲ್ಲಿ ಪ್ರವಾಸಿಗರು ರಸ್ತೆ ಮಧ್ಯ ವಾಹನಗಳನ್ನು ನಿಲ್ಲಿಸಿ ಹುಚ್ಚಾಟ ಮೆರೆಯುತ್ತಿದ್ದಾರೆ ಇದರಿಂದ ಕಾಲಭೈರವೇಶ್ವರನ ಕ್ಷೇತ್ರಕ್ಕೆ ಬರುವ ಭಕ್ತರಿಗೂ ಇರುಸು ಮುರಿಸು ಆಗುತ್ತಿದೆ.

ಒಂದು ಕಡೆ ಎಣ್ಣೆ ಹಾಕ್ಕೊಂಡ್, ಧಮ್ ಹೊಡ್ಕೊಂಡ್ ರಸ್ತೆ ಮಧ್ಯೆ ಮೋಜು ಮಸ್ತಿ ಮಾಡುತ್ತಿರುವ ಪ್ರವಾಸಿಗರು, ಇನ್ನೊಂದೆಡೆ ವಾಹನಗಳು ಓಡಾಡಲು ಜಾಗವಿಲ್ಲದಂತೆ ರಸ್ತೆ ಮಧ್ಯೆ ಕಾರು ನಿಲ್ಲಿಸಿ ಹುಚ್ಚಾಟ ಮೆರೆಯುತ್ತಿದ್ದಾರೆ.

ಕೂಡಲೇ ಸಂಬಂಧಪಟ್ಟ ಪೊಲೀಸರು ಈ ಕುರಿತು ಕ್ರಮ ಕೈಗೊಳ್ಳದಿದ್ದರೆ ಪ್ರವಾಸಿ ತಾಣಕ್ಕೆ ಕೆಟ್ಟ ಹೆಸರು ಬರುವುದರಲ್ಲಿ ಅನುಮಾನವಿಲ್ಲ.

Ad
Ad
Nk Channel Final 21 09 2023
Ad