Ad

ಮೇಕೆ ಮೇಲೆ ರಾಮ ಎಂದು ಬರೆದ ಮಟನ್ ಶಾಪ್ ಓನರ್ : ಆಕ್ರೋಶ ವ್ಯಕ್ತ

ಮೇಕೆ (ಓತು)ಯೊಂದರ ಮೇಲೆ ರಾಮ ಎಂದು ಬರೆದು ವಿಡಿಯೋ ಮಾಡಿ ಮಾರಾಟ ಮಾಡಲು ಯತ್ನಿಸಿದ್ದ ಮಾಂಸದ ಅಂಗಡಿಯ ಮಾಲೀಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನವಿ ಮುಂಬೈ ನಗರದ ಸೆಕ್ಟರ್​ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಮುಂಬೈ: ಮೇಕೆ (ಓತು)ಯೊಂದರ ಮೇಲೆ ರಾಮ ಎಂದು ಬರೆದು ವಿಡಿಯೋ ಮಾಡಿ ಮಾರಾಟ ಮಾಡಲು ಯತ್ನಿಸಿದ್ದ ಮಾಂಸದ ಅಂಗಡಿಯ ಮಾಲೀಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನವಿ ಮುಂಬೈ ನಗರದ ಸೆಕ್ಟರ್​ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

Ad
300x250 2

ದೂರನ್ನು ಉಲ್ಲೇಖಿಸಿದ ಅಧಿಕಾರಿ, 22 ಮೇಕೆಗಳನ್ನು ವಧೆ ಮಾಡಲು ಅಂಗಡಿಗೆ ತರಲಾಗಿತ್ತು ಆದರೆ ಅದರಲ್ಲಿ ಒಂದು ಪ್ರಾಣಿಯ ಮೇಲೆ ಧಾರ್ಮಿಕ ಹೆಸರನ್ನು ಚಿತ್ರಿಸಲಾಗಿತ್ತು’ ಎಂದು ಹೇಳಿದ್ದಾರೆ.

ಮೂವರನ್ನು ಮೊಹಮ್ಮದ್ ಶಫಿ ಶೇಖ್, ಸಾಜಿದ್ ಶಫಿ ಶೇಖ್ ಮತ್ತು ಕುಯ್ಯಮ್ ಎಂದು ಗುರುತಿಸಲಾಗಿದ್ದು, ಅವರ ವಿರುದ್ಧ ಐಪಿಸಿ ಸೆಕ್ಷನ್ 295 (ಎ) ಅಡಿಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ 34 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೂವರೂ ಮೇಕೆಯನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

Ad
Ad
Nk Channel Final 21 09 2023
Ad