Ad

ಆಹಾರದಲ್ಲಿ ಸತ್ತ ಹಾವು, 11 ಕಾಲೇಜು ವಿದ್ಯಾರ್ಥಿಗಳು ಅಸ್ವಸ್ಥ!

ಬಿಹಾರದ ಎಂಜಿನೀಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ನೀಡಿದ ಆಹಾರದಲ್ಲಿ ಹಾವೊಂದು ಪತ್ತೆಯಾಗಿದೆ. ಇದರ ಅರಿವಿಲ್ಲದೆ ಆಹಾರ ಸೇವಿಸಿದ 11 ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆ ದಾಖಲಾದ ಘಟನೆ ನಡೆದಿದೆ.

ಪಾಟ್ನ: ಬಿಹಾರದ ಎಂಜಿನೀಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ನೀಡಿದ ಆಹಾರದಲ್ಲಿ ಹಾವೊಂದು ಪತ್ತೆಯಾಗಿದೆ. ಇದರ ಅರಿವಿಲ್ಲದೆ ಆಹಾರ ಸೇವಿಸಿದ 11 ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆ ದಾಖಲಾದ ಘಟನೆ ನಡೆದಿದೆ.

Ad
300x250 2

ಬಿಹಾರ ಬಂಕಾದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮೆಸ್ ವಿರುದ್ಧ ಹಲವು ಬಾರಿ ಆಹಾರದ ಕುರಿತು ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಪ್ರಮುಖವಾಗಿ ಶುಚಿತ್ವ ಇಲ್ಲದ ಕಾರಣ ವಿದ್ಯಾರ್ಥಿಗಳು ಪದೇ ಪದೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಎಂದಿನಂತೆ ಆಹಾರ ಯಾರಿಸಿ ವಿದ್ಯಾರ್ಥಿಗಳಿಗೆ ಬಡಿಸಲಾಗಿದೆ. ಓರ್ವ ವಿದ್ಯಾರ್ಥಿಗೆ ತಟ್ಟೆಯಲ್ಲಿ ಆಹಾರದ ಜೊತೆ ಸತ್ತ ಹಾವು ಪತ್ತೆಯಾಗಿದೆ. ತಕ್ಷಣವೇ ವಿದ್ಯಾರ್ಥಿ ಮಾಹಿತಿ ನೀಡಿದ್ದಾನೆ.

ಆಹಾರ ಸೇವಿಸಿದ ವಿದ್ಯಾರ್ಥಿಗಳಲ್ಲಿ ವಾಂತಿ ಕಾಣಿಸಿಕೊಂಡಿತ್ತು. ಹಾವನ್ನು ಬೇಯಿಸಿ ನೀಡಿದ್ದ ಕಾರಣ ಆಹಾರದಲ್ಲಿ ವಿಷ ಸೇರಿಕೊಂಡಿದೆ. ಇದರ ಪರಿಣಾಮ 11 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದರೆ. ವಿದ್ಯಾರ್ಥಿಗಳನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ವಿದ್ಯಾರ್ಥಿಗಳು ಪ್ರಣಾಪಾಯದಿಂದ ಪಾರಾಗಿದ್ದಾರೆ ಎಂದು ಕಾಲೇಜು ಆಡಳಿತ ಮಂಡಳಿ ಹೇಳಿದೆ.

Ad
Ad
Nk Channel Final 21 09 2023
Ad