Ad

ದರ್ಶನ್​ನ ಮತ್ತೊಂದು ಕರಾಳ ಮುಖ ಅನಾವರಣ ಮಾಡಿದ ನಿರ್ಮಾಪಕ

ಸ್ಯಾಂಡಲ್​ವುಡ್​​​ ನಟ ದರ್ಶನ್​ ಅರೆಸ್ಟ್​ ಆದ ಬೆನ್ನಲ್ಲೇ ಅವರ ಕರಾಳ ಮುಖ ಅನಾವರಣಗೊಳ್ಳುತ್ತಿದೆ.  ಹಲವು ಆರೋಪಗಳು ಕೇಳಿ ಬರುತ್ತಿವೆ. ನಿರ್ಮಾಪಕರೊಬ್ಬರಿಗೆ ದರ್ಶನ್​ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಸ್ಯಾಂಡಲ್​ವುಡ್​​​ ನಟ ದರ್ಶನ್​ ಅರೆಸ್ಟ್​ ಆದ ಬೆನ್ನಲ್ಲೇ ಅವರ ಕರಾಳ ಮುಖ ಅನಾವರಣಗೊಳ್ಳುತ್ತಿದೆ.  ಹಲವು ಆರೋಪಗಳು ಕೇಳಿ ಬರುತ್ತಿವೆ. ನಿರ್ಮಾಪಕರೊಬ್ಬರಿಗೆ ದರ್ಶನ್​ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

Ad
300x250 2

ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಸಿನಿಮಾದ ನಿರ್ಮಾಪಕನಿಗೆ ದರ್ಶನ್​ ಜೀವ ಬೆದರಿಕೆ ಹಾಕಿದ್ದರಂತೆ. ಈ ಸಿನಿಮಾದ ಮುಹೂರ್ತಕ್ಕೆ ದರ್ಶನ್​ ಆಗಮಿಸಿದ್ದರು. ಸಿನಿಮಾದ ಫಸ್ಟ್ ಶೆಡ್ಯೂಲ್ ಕಂಪ್ಲೀಟ್ ಆಗಿತ್ತು. ಆನಂತರದಲ್ಲಿ ಹಣ ವ್ಯತ್ಯಯ ಕಂಡು ಬಂದಿದ್ದರಿಂದ ಶೂಟಿಂಗ್ ತಡವಾಗಿತ್ತು. ಈ ವಿಚಾರವಾಗಿ ನಿರ್ಮಾಪಕ ಭರತ್ ಕರೆಸಿ, ದರ್ಶನ್ ಬೆದರಿಕೆ ಹಾಕಿದ್ದರಂತೆ.

ಈ ಸಿನಿಮಾ ಕಂಪ್ಲೀಟ್ ಮಾಡದಿದ್ದರೆ, ಭೂಮಿ ಮೇಲೆ ಇಲ್ಲದಂತೆ ಮಾಡುತ್ತೇನೆ ಎಂದು ಕೆಂಗೇರಿ ರಸ್ತೆಯ ಟೊರಿನೊ ಫ್ಯಾಕ್ಟರಿಗೆ ಕರೆಸಿ ಬೆದರಿಕೆ ಹಾಕಿದ್ದರಂತೆ. ಇದೀಗ ನಿರ್ಮಾಪಕ ಭರತ್ ಗೌಡ ಮಾತನಾಡಿದ್ದ ಹಳೆಯ ಆಡಿಯೋ ವೈರಲ್ ಆಗಿದೆ. ಅಭಿಮಾನಿಗಳಿಂದ ನಿರ್ಮಾಪಕನಿಗೆ ಜೀವ ಬೆದರಿಕೆ ಕೂಡ ಬರ್ತಿದೆ. ಹೀಗಾಗಿ ತಮಗೆ ರಕ್ಷಣೆ ನೀಡುವಂತೆ ಭರತ್ ಪೊಲೀಸರ ಮೊರೆ ಹೋಗಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಲಕ್ಷ್ಮಣ್, ನಾಗರಾಜ್ ಕೂಡ ಈ ಬೆದರಿಕೆ ಪ್ರಕರಣದಲ್ಲಿ ಇದ್ದರು. ಈಗಾಗಲೇ ಕಂಪ್ಲೆಂಟ್ ಕೊಡಲಾಗಿದೆ. ಇಂದು FIR ಆಗಲಿದೆ ಎಂದು ನಿರ್ಮಾಪಕ ಭರತ್​ ಹೇಳಿದ್ದಾರೆ.

Ad
Ad
Nk Channel Final 21 09 2023
Ad