Showing 20 of 2478 posts • Page 5 of 124
ಮನೆ ನೋಡಲು ಹೋಗಿದ್ದ ದಂಪತಿಗೆ ಪಿಟ್ಬುಲ್ ನಾಯಿ ದಾಳಿ ಮಾಡಿರುವ ಘಟನೆ ಪಂಜಾಬ್ನ ಪಟಿಯಾಲದ ಘುಮನ್ ನಗರದಲ್ಲಿ ನಡೆದಿದೆ.
ಟಾಟಾ ಸನ್ಸ್ ಕಾರ್ಯಾಧ್ಯಕ್ಷ ಎನ್. ಚಂದ್ರಶೇಖರನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಘಾಟ್ಕೋಪರ್ನ ಚಿರಾಗ್ ನಗರದ ಗೌಸಿಯಾ ಚಾಲ್ನಲ್ಲಿ ಬುಧವಾರ ಬೆಳಗಿನ ಜಾವ ಭೂಕುಸಿತ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಅವಶೇಷಗಳಡಿ ಇನ್ನೂ ನಾಲ್ಕರಿಂದ ಐದು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಕೇರಳದ ಯೂಟ್ಯೂಬರ್ ಅಖಿಲ್ ಎನ್ಆರ್ಡಿ ಅವರ ಪತ್ನಿ ಮೇಘಾ ನಾಯರ್, ಬಸ್ ಕಂಡಕ್ಟರ್ ಒಬ್ಬರೊಂದಿಗೆ ಓಡಿಹೋಗಿದ್ದಾರೆ ಎನ್ನಲಾಗುತ್ತಿದ್ದು, ವ್ಯಾಪಕ ಚರ್ಚೆಗಳು ನಡೆಯುತ್ತಿವೆ.
ಛತ್ತೀಸ್ಗಢ ಸರ್ಕಾರವು ಫಲಾನುಭವಿಗಳಿಗಾಗಿ 24 ಗಂಟೆಯೂ ಕಾರ್ಯನಿರ್ವಹಿಸುವ ವಿಶಿಷ್ಟ ‘ರೇಷನ್ ಎಟಿಎಂ’ ಅನ್ನು ಪ್ರಾರಂಭಿಸಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಅರಣ್ಯ ಮಾರ್ಗದಲ್ಲಿ ಸವಾರರನ್ನು ಕಾಡಾನೆಗಳು ಬೆನ್ನಟ್ಟುವಂತಹ ಘಟನೆಗಳು ವರದಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಅಂಗನವಾಡಿ ಕಾರ್ಯಕರ್ತೆಯೊಬ್ಬರು ತನ್ನ ಇಬ್ಬರು ಮಕ್ಕಳಿಗೆ ವಿಷ ನೀಡಿ, ನಂತರ ತಾನೂ ವಿಷ ಸೇವಿಸಿ, ನಂತರ ನೀರಿನ ಸಂಗ್ರಹ ಟ್ಯಾಂಕ್ಗೆ ಹಾರಿದ್ದಾಳೆ ಎಂದು ಹರಿಯಾಣದ ಫತೇಹಾಬಾದ್ನಲ್ಲಿ ಆರೋಪಿಸಲಾಗಿದೆ.
ತಮಿಳುನಾಡು: ತಮಿಳುನಾಡಿನ ಪ್ರಮುಖ ದೇವಸ್ಥಾನಗಳಲ್ಲಿ ಮೊಬೈಲ್ ಫೋನ್ ಬಳಕೆಗೆ ಸಂಪೂರ್ಣ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.
ನವದೆಹಲಿಯ ಜಂತರ್ ಮಂತರ್ನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಹಾಗೂ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಯ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೊದಲ ಸಾರ್ವಜನಿಕ ಭಾಷಣದಲ್ಲಿ, ನಮಗೆ ನಿಮ್ಮ ಮೇಲೆ ನಂಬಿಕೆಯಿದೆ. ‘ವಿಕಸಿತ ಭಾರತ’ ನಿರ್ಮಾಣದ ಪಯಣದಲ್ಲಿ ದೇಶಕ್ಕೆ ನಿಮ್ಮ ಅಗತ್ಯವಿದೆ ಎಂದು ಯುವ ಪೀಳಿಗೆಗೆ ಕರೆ ನೀಡಿದ್ದಾರೆ.
ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಖಾಸಗಿ ಬಸ್ವೊಂದು ಆಳವಾದ ಪ್ರಪಾತಕ್ಕೆ ಉರುಳಿಬಿದ್ದ ಪರಿಣಾಮ ಏಳು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಡಿಕೆ ಬೆಳೆಗಾರರು ಮತ್ತು ಸಹಕಾರ ಸಂಘಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ದೃಢ ಸಂಕಲ್ಪದೊಂದಿಗೆ, ಉನ್ನತ ಮಟ್ಟದ ಗಣ್ಯರ ನಿಯೋಗವೊಂದು ಇಂದು ನವದೆಹಲಿಯಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಜೀ ಮತ್ತು ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ, ಸುದೀರ್ಘ ಹಾಗೂ ಫಲಪ್ರದ ಚರ್ಚೆ ನಡೆಸಿತು.
ರೈಲ್ವೇಯಲ್ಲಿ ಡೆಲಿವರಿ ಬಾಯ್ನಿಂದ ಎಕ್ಷಫೈರ್ ಪೂಡ್ ಡೆಲಿವರಿ ಮಾಡಲಾಗುತ್ತಿತ್ತು.
ಮಾಫಿಯಾ ಡಾನ್, ಗುಂಡೇಟಿಗೆ ಬಲಿಯಾಗಿದ್ದ ರಾಜಕಾರಣಿ ಅತೀಕ್ ಅಹ್ಮದ್ನ ಕಿರಿಯ ಪುತ್ರ ಆಬಾನ್ ಅಹ್ಮದ್ ಸೇರಿದಂತೆ ಮೂವರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
2,000 ರೂ.ಗಿಂತ ಹೆಚ್ಚಿನ ಮೊತ್ತದ ಯುಪಿಐ ಪಾವತಿಗೆ ಶುಲ್ಕ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ರಾಜ್ಯಾದ್ಯಂತ ನಕಲಿ ಹಾಗೂ ಕಲಬೆರಕೆ ಹಾಲಿನ ಉತ್ಪನ್ನಗಳ ಮಾರಾಟಕ್ಕೆ ತಡೆ ಹಾಕಲು ಮಹಾರಾಷ್ಟ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.
ದೇಶದಲ್ಲಿ ವಿಮೆ ಇಲ್ಲದೆಯೇ ಹೆಚ್ಚಿನ ಸಂಖ್ಯೆಯ ವಾಹನಗಳು ಸಂಚರಿಸುತ್ತಿವೆ.
ಅಸ್ಸಾಂನ ನೀಲಾಚಲ ಬೆಟ್ಟದಲ್ಲಿರುವ ಪವಿತ್ರ ಕಾಮಾಖ್ಯ ದೇವಾಲಯವು ಅತ್ಯಂತ ಪ್ರಸಿದ್ಧ ಶಕ್ತಿಪೀಠವಾಗಿದ್ದು, ವಿಶ್ವದಾದ್ಯಂತ ಅಪಾರ ಭಕ್ತರನ್ನು ಆಕರ್ಷಿಸುವ ದಿವ್ಯ ಕ್ಷೇತ್ರವಾಗಿದೆ.
ಪ್ರತಿಭಟನೆಯ ವೇಳೆ ಪ್ರಧಾನಿ ಮೋದಿಯವರನ್ನು ನಿಂದಿಸಿದ್ದ ಸಿಜೆಪಿ (CJP) ಪ್ರತಿಭಟನೆಯ ರುಚಿಕಾ ಸಿಂಗ್, ಇದೀಗ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ.
ತಿರುವಣ್ಣಾಮಲೈನ ಅರುಣಾಚಲ ಗಿರಿಯ ದಕ್ಷಿಣ ಮಾರ್ಗದಲ್ಲಿರುವ ‘ಮೋಕ್ಷ ಮಾರ್ಗಂ’ ಎಂಬ ಕಿರಿದಾದ ಬಂಡೆಯ ದಾರಿಯಲ್ಲಿ ಸಿಲುಕಿ ಆಂಧ್ರಪ್ರದೇಶದ ರಾಜಮಹೇಂದ್ರವರಂನ 36 ವರ್ಷದ ವ್ಯಕ್ತಿಯೊಬ್ಬರು ಮೃ*ಪಟ್ಟ ಕೆಲವೇ ದಿನಗಳ ನಂತರ, ಅದೇ ಸ್ಥಳದಲ್ಲಿ ಮತ್ತೊಬ್ಬ ಭಕ್ತರು ಇದೇ ರೀತಿಯ ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ನೀಟ್ ಪರೀಕ್ಷೆಯ ಅಕ್ರಮ ಖಂಡಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಕುರಿತು ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ನೀಡಿದ್ದ ಹೇಳಿಕೆಗಳು ಈಗ ರಾಜಕೀಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಾಕ್ಸಮರಕ್ಕೆ ಕಾರಣವಾಗಿವೆ.