Bengaluru 24°C
Ad

ವಿದೇಶಕ್ಕೆ ಅಂಗಾಂಗ ಕಳ್ಳಸಾಗಾಣಿಕೆ ಮಾಡುತಿದ್ದ ಗ್ಯಾಂಗ್ ಸೆರೆ

ಕಿಡ್ನಿ ಕಸಿ ಮಾಡಲು ಇರಾನ್‌ಗೆ ಕಳ್ಳಸಾಗಣೆ ಮಾಡುತ್ತಿದ್ದ ಗುಂಪೊಂದನ್ನು ಪೊಲೀಸರು ಬೇಧಿಸಿದ್ದಾರೆ. ಕಳೆದೆರಡು ದಿನಗಳಿಂದ ತ್ರಿಶ್ಶೂರ್ ಮೂಲದ ವ್ಯಕ್ತಿಯ ಬಂಧನ ಮತ್ತು ಮತ್ತೊಬ್ಬನನ್ನು ಕೊಚ್ಚಿಯಲ್ಲಿ ಬಂಧಿಸಿದ ನಂತರ ಆಘಾತಕಾರಿ ಸಂಗತಿಗಳು ಬಹಿರಂಗಗೊಂಡಿವೆ.

ಕೊಚ್ಚಿ: ಕಿಡ್ನಿ ಕಸಿ ಮಾಡಲು ಇರಾನ್‌ಗೆ ಕಳ್ಳಸಾಗಣೆ ಮಾಡುತ್ತಿದ್ದ ಗುಂಪೊಂದನ್ನು ಪೊಲೀಸರು ಬೇಧಿಸಿದ್ದಾರೆ. ಕಳೆದೆರಡು ದಿನಗಳಿಂದ ತ್ರಿಶ್ಶೂರ್ ಮೂಲದ ವ್ಯಕ್ತಿಯ ಬಂಧನ ಮತ್ತು ಮತ್ತೊಬ್ಬನನ್ನು ಕೊಚ್ಚಿಯಲ್ಲಿ ಬಂಧಿಸಿದ ನಂತರ ಆಘಾತಕಾರಿ ಸಂಗತಿಗಳು ಬಹಿರಂಗಗೊಂಡಿವೆ.

ಕಳ್ಳಸಾಗಣೆ ದಂಧೆಯ ಶಂಕಿತ ಸದಸ್ಯ ತ್ರಿಶ್ಶೂರ್ ವಲಪ್ಪಾಜಡ್ ನ ಸಬಿತ್ ನಾಸರ್ (30) ನ್ನು ಭಾನುವಾರ ಕೊಚ್ಚಿ ವಿಮಾನ ನಿಲ್ದಾಣದಿಂದ ಬಂಧಿಸಲಾಗಿದ್ದು, ಸಬಿತ್‌ಗೆ ಸಹಾಯ ಮಾಡಿದ ಕೊಚ್ಚಿ ಮೂಲದ ಮತ್ತೊಬ್ಬ ಯುವಕನನ್ನು ಸೋಮವಾರದಂದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಈ ದಂಧೆಯು ಆರ್ಥಿಕವಾಗಿ ದುರ್ಬಲ ವರ್ಗದ ಜನರಲ್ಲಿ ವಿದೇಶದಲ್ಲಿ ಅಂಗಾಂಗಗಳನ್ನು ದಾನ ಮಾಡಲು ಆಮಿಷವೊಡ್ಡಿ ಬಲೆಗೆ ಬೀಳಿಸಲಾಗಿದೆ ಎಂದು ನಂಬಲಾಗಿದೆ.

ಬಂಧಿತ ವ್ಯಕ್ತಿಯ ಹೇಳಿಕೆಗಳ ಪ್ರಕಾರ, ಅಂಗಾಂಗ ದಾನಕ್ಕಾಗಿ ಇರಾನ್‌ಗೆ ಕರೆದೊಯ್ದ ಕೆಲವು ಜನರು ಅಲ್ಲಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.

ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಸಬಿತ್, ಅಂಗಾಂಗ ದಂಧೆಗಾಗಿ ಭಾರತದಿಂದ 20 ಜನರನ್ನು ಇರಾನ್‌ಗೆ ಕರೆದೊಯ್ದಿದ್ದಾಗಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಕಿಡ್ನಿ ನೀಡುವವರಿಗೆ 6 ಲಕ್ಷ ರೂ.ವರೆಗೆ ಸಂಭಾವನೆ ನೀಡಲಾಗುತ್ತದೆ. ಪಾಲಕ್ಕಾಡ್‌ನ ತಿರುನೆಲ್ಲಾಯಿಯ ಯುವಕ ಶಮೀರ್ ಆರು ತಿಂಗಳ ಹಿಂದೆ ಈ ರೀತಿ ಕಿಡ್ನಿ ದಾನ ಮಾಡಿದ್ದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿ ತಿಳಿಸಿದೆ. ಶಮೀರ್ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ಸಾಲ ತೀರಿಸಲು ಕಿಡ್ನಿ ದಾನ ಮಾಡಿರಬಹುದು ಎಂದು ಹೇಳಲಾಗಿದೆ.

ಎನ್‌ಐಎ ಸೇರಿದಂತೆ ಕೇಂದ್ರೀಯ ಏಜೆನ್ಸಿಗಳು ಕೂಡ ಪ್ರಕರಣದ ತನಿಖೆ ನಡೆಸುತ್ತಿದ್ದು, ಅವರು ಪ್ರಾಥಮಿಕ ತನಿಖೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿರುದ್ಧ ಐಪಿಸಿಯ ಸೆಕ್ಷನ್ 370 (ಮಾನವ ಕಳ್ಳಸಾಗಣೆ) ಮತ್ತು ಮಾನವ ಅಂಗಗಳ ಕಸಿ ಕಾಯಿದೆಯ ಸೆಕ್ಷನ್ 19 (ಮಾನವ ಅಂಗಗಳ ವ್ಯಾಪಾರ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

Ad
Ad
Nk Channel Final 21 09 2023
Ad