Bengaluru 24°C
Ad

ತಾಂತ್ರಿಕ ದೋಷ: ಕೇದಾರನಾಥದಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಕೇದಾರನಾಥ ಹೆಲಿಪ್ಯಾಡ್‌ನಿಂದ ಸುಮಾರು 100 ಮೀಟರ್ ದೂರದಲ್ಲೇ ತಾಂತ್ರಿಕ ದೋಷದಿಂದಾಗಿ 7 ಮಂದಿಯನ್ನು ಹೊತ್ತ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ.

ಡೆಹ್ರಾಡೂನ್: ಕೇದಾರನಾಥ ಹೆಲಿಪ್ಯಾಡ್‌ನಿಂದ ಸುಮಾರು 100 ಮೀಟರ್ ದೂರದಲ್ಲೇ ತಾಂತ್ರಿಕ ದೋಷದಿಂದಾಗಿ 7 ಮಂದಿಯನ್ನು ಹೊತ್ತ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ.

ಹೆಲಿಕಾಪ್ಟರ್ ನಲ್ಲಿದ್ದ 6 ಪ್ರಯಾಣಿಕರು ಮತ್ತು ಪೈಲಟ್ ಸುರಕ್ಷಿತವಾಗಿದ್ದಾರೆ. ತುರ್ತು ಲ್ಯಾಂಡಿಂಗ್ ಮಾಡುವ ಮೊದಲು ಹೆಲಿಕಾಪ್ಟರ್ ಗಿರಗಿರನೆ ತಿರುಗಿತು. ಈ ವೇಳೆ ಹೆಲಿಪ್ಯಾಡ್‌ನಲ್ಲಿ ನಿಂತಿದ್ದ ಸಿಬ್ಬಂದಿ ಹೆದರಿ ಹಿಂದಕ್ಕೆ ಓಡುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.

ಸಿರ್ಸಿಯ ಹೆಲಿಪ್ಯಾಡ್‌ನಿಂದ ಪೈಲಟ್‌ ಸೇರಿ 7 ಮಂದಿಯನ್ನು ಹೊತ್ತು ಕೇದಾರನಾಥ ಧಾಮಕ್ಕೆ ಬರುತ್ತಿದ್ದ ಕೆಸ್ಟ್ರೆಲ್‌ ಏವಿಯೇಷನ್‌ ಕಂಪನಿಯ ಹೆಲಿಕಾಪ್ಟರ್‌ ತಾಂತ್ರಿಕ ಸಮಸ್ಯೆಯಿಂದಾಗಿ 7:05 ಗಂಟೆ ತುರ್ತು ಭೂಸ್ಪರ್ಶ ಮಾಡಿತು.

 

Ad
Ad
Nk Channel Final 21 09 2023
Ad