Bengaluru 24°C
Ad

ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೇರಿದರೆ ಅಯೋಧ್ಯೆಯ ರಾಮ ಮಂದಿರಕ್ಕೆ ಬೀಗ: ಮೋದಿ

ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೇರಿದರೆ ಅಯೋಧ್ಯೆಯ ರಾಮ ಮಂದಿರಕ್ಕೆ ಬೀಗ ಜಡಿಯಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಶಿಮ್ಲಾ: ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೇರಿದರೆ ಅಯೋಧ್ಯೆಯ ರಾಮ ಮಂದಿರಕ್ಕೆ ಬೀಗ ಜಡಿಯಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಹಿಮಾಚಲ ಪ್ರದೇಶದ ಸಿರ್ಮೌರ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಂಡಿರುವ ಅವರು, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್‌ ಮಾಡಿರುವ ಷಡ್ಯಂತ್ರವನ್ನು ಆ ಪಕ್ಷದವರೇ ಬಹಿರಂಗಪಡಿಸಿದ್ದಾರೆ. ತಾವು ಅಧಿಕಾರಕ್ಕೆ ಬಂದರೆ, ರಾಮ ಮಂದಿರಕ್ಕೆ ಬೀಗ ಜಡಿದು, ಬಾಲರಾಮ ಟೆಂಟ್‌ನಲ್ಲಿ ಕೂರುವುದು ಅನಿವಾರ್ಯವಾಗುವಂತೆ ಮಾಡಲಿದ್ದಾರೆ.

ಪ್ರತಿ ಮತಗಟ್ಟೆಯಿಂದ ಇವರನ್ನು ಗುಡಿಸಿಹಾಕಬೇಕಿದೆ.ನನ್ನ ಸ್ವಚ್ಛ ಭಾರತ ಅಭಿಯಾನ ನೆನಪಿದೆಯಲ್ಲ, ಜೂನ್‌ 1ರಂದು ಅದಕ್ಕಾಗಿ ಮೀಸಲಿಡಿ’ ಎಂದು ಕರೆ ನೀಡಿದ್ದಾರೆ.

ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ಪಕ್ಷ, ಹಿಂದುಳಿದ ವರ್ಷದವರ ಮೀಸಲಾತಿಯನ್ನು ಕಸಿದು ಮುಸ್ಲಿಮರಿಗೆ ನೀಡಿದೆ ಎಂದು ಗಂಭೀರ ಆರೋಪ ಮಾಡಿರುವ ಅವರು, ‘ಕೋಮುವಾದ, ಜಾತೀಯತೆ, ಕುಟುಂಬ ರಾಜಕಾರಣ ಕಾಂಗ್ರೆಸ್‌ ಹಾಗೂ ಅದರ ಮಿತ್ರ ಪಕ್ಷಗಳಲ್ಲಿ ಸಾಮಾನ್ಯ ಎಂದೂ ದೂರಿದ್ದಾರೆ.

ಕಳೆದ ವಾರ ಜಾರ್ಖಂಡ್‌ನಲ್ಲಿ ವಿರೋಧ ಪಕ್ಷಗಳ ವಿರುದ್ಧ ಗುಡುಗಿದ್ದ ಮೋದಿ, ಬಾಲರಾಮನನ್ನು ಮತ್ತೆ ಟೆಂಟ್‌ಗೆ ಕಳುಹಿಸಲು ಕಾಂಗ್ರೆಸ್‌ ಪಿತೂರಿ ಮಾಡಿದೆ ಎಂದು ಆರೋಪಿಸಿದ್ದರು.

 

Ad
Ad
Nk Channel Final 21 09 2023
Ad