Bengaluru 28°C
Ad

ಇನ್ಮುಂದೆ ಪಬ್​, ಬಾರ್​ಗಳಲ್ಲಿ ಮದ್ಯಪಾನ ಮಾಡಲು ಗುರುತಿನ ಚೀಟಿ ಕಡ್ಡಾಯ

Bar

ದೆಹಲಿ: ಇನ್ನು ಮುಂದೆ ಪಬ್​ ಹಾಗೂ ಬಾರ್​ಗಳಲ್ಲಿ ಮದ್ಯಪಾನ ಮಾಡಲು ಸರ್ಕಾರಿ ಗುರುತಿನ ಚೀಟಿ ಇರಲೇಬೇಕೆಂದು ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ. ಮದ್ಯ ಪ್ರಿಯರಿಗಾಗಿ ಸರಕಾರ ಈಗ ನಿಯಮ ರೂಪಿಸಿದೆ. ಸರ್ಕಾರದಂತೆಯೇ ಪಬ್, ಬಾರ್ ಮಾಲೀಕರೂ ಕೂಡ ಮುತುವರ್ಜಿ ವಹಿಸಿದ್ದಾರೆ.

ಕೆಲವು ದಿನಗಳ ಹಿಂದೆ ಪುಣೆ ನಗರದಲ್ಲಿ ನಡೆದ ಪೋರ್ಷೆ ಕಾರು ಅಪಘಾತದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಪುಣೆಯಲ್ಲಿ ಅಪ್ರಾಪ್ತನೊಬ್ಬ ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿ ಅಪಘಾತ ಮಾಡಿ ಇಬ್ಬರ ಸಾವಿಗೆ ಕಾರಣನಾಗಿದ್ದ. ಈ ಪ್ರಕರಣದಲ್ಲಿ ಪೊಲೀಸರು ಮತ್ತು ಆಡಳಿತದ ವಿರುದ್ಧ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಪಬ್ ಮತ್ತು ಬಾರ್ ನಿರ್ವಾಹಕರು ಇದೀಗ ತಮ್ಮದೇ ಆದ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿವೆ.

ಇದರಿಂದಾಗಿ ಮುಂಬೈ ಮತ್ತು ಪುಣೆಯಲ್ಲಿ ಮದ್ಯಪಾನ ಮತ್ತು ವೈನ್ ಸೇವಿಸುವವರಿಗೆ ವಯಸ್ಸಿನ ಪ್ರಮಾಣ ಪತ್ರ ಅಗತ್ಯವಾಗಲಿದೆ. ಪುಣೆ, ಮುಂಬೈ, ನಾಗ್ಪುರದಂತಹ ದೊಡ್ಡ ನಗರಗಳಲ್ಲಿ ಅಪ್ರಾಪ್ತ ವಯಸ್ಕರು ಮದ್ಯಪಾನ ಮಾಡಿ ಅತಿವೇಗದಲ್ಲಿ ವಾಹನ ಚಲಾಯಿಸುವ ಅನೇಕ ಪ್ರಕರಣಗಳಿವೆ. ಹಾಗಾಗಿ ಈಗ ಮುಂಬೈ ಪುಣೆಯಲ್ಲಿ ಬಾರ್ ಮತ್ತು ಪಬ್ ಗಳಲ್ಲಿ ಮದ್ಯ ಸೇವಿಸುವ ಮುನ್ನ ವಯಸ್ಸಿನ ಪ್ರಮಾಣ ಪತ್ರವನ್ನು ಪರಿಶೀಲಿಸಲಾಗುವುದು ಎಂದಿದ್ದಾರೆ.

Ad
Ad
Nk Channel Final 21 09 2023
Ad