Ad

ಪವಿತ್ರಾ ಗೌಡ ಲಿಪ್ಸ್‌ಸ್ಟಿಕ್ ಹಚ್ಚಲು ಸಹಾಯ ಮಾಡಿದ್ದ ಪಿಎಸ್‌ಐ ಅಧಿಕಾರಿಗೆ ನೋಟಿಸ್‌

ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಪವಿತ್ರಾ ಗೌಡ ಮತ್ತು ದರ್ಶನ್‌ ಸೇರಿದಂತೆ 17 ಮಂದಿ ಜೈಲು ಪಾಲಾಗಿದ್ದಾರೆ.

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಪವಿತ್ರಾ ಗೌಡ ಮತ್ತು ದರ್ಶನ್‌ ಸೇರಿದಂತೆ 17 ಮಂದಿ ಜೈಲು ಪಾಲಾಗಿದ್ದಾರೆ. ಇದೀಗ ಮನೆ ಮಹಜರು ಮಾಡಲು ಆರ್​.ಆರ್​ ನಗರದ ಮನೆಗೆ ಕರೆದುಕೊಂಡು ಹೋಗಿದ್ದಾಗ ಆರೋಪಿ ಪವಿತ್ರಾ ಗೌಡ ಲಿಪ್ಸ್​​ಸ್ಟಿಕ್ ಹಚ್ಚಿಕೊಂಡು ಮೇಕಪ್ ಮಾಡಿಕೊಂಡು ಬಂದಿದ್ದಕ್ಕೆ ವಿಜಯನಗರದ ಮಹಿಳಾ ಪಿಎಸ್​ಐ ನೇತ್ರಾಗೆ ನೋಟಿಸ್ ನೀಡಲಾಗಿದೆ.

Ad
300x250 2

ಆರೋಪಿ ಪವಿತ್ರಾ ಗೌಡ ಜೂನ್ 15ರಂದು ಸ್ಥಳ ಮಹಜರು ಮಾಡಲೆಂದು ಆರ್​.ಆರ್​ ನಗರದಲ್ಲಿರುವ ಆಕೆಯ ಮನೆಗೆ ಬಂದಿದ್ದರು ಈ ವೇಳೆ ಪವಿತ್ರಾ ಗೌಡ ಲಿಪ್ಸ್​​ಸ್ಟಿಕ್ ಹಚ್ಚಿಕೊಂಡು, ಮುಖಕ್ಕೆ ಮೇಕಪ್ ಮಾಡಿಕೊಂಡು ಬಂದಿದ್ದರು. ಇದೀಗ ಪಿಎಸ್‌ಐ ಮಹಿಳಾ  ಅಧಿಕಾರಿಗೆ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ನಾಯ್ಕ್ ಅವರು ನೋಟಿಸ್ ನೀಡಿದ್ದಾರೆ.

Ad
Ad
Nk Channel Final 21 09 2023
Ad