Ad

ಹಿಜಾಬ್ ಬ್ಯಾನ್ ಮಾಡಿದ ಕಾಲೇಜಿನ ನಿರ್ಧಾರ ಎತ್ತಿ ಹಿಡಿದ ಬಾಂಬೆ ಹೈಕೋರ್ಟ್‌

ಕ್ಯಾಂಪಸ್‌ನೊಳಗೆ ಹಿಜಾಬ್, ನಕಾಬ್, ಬುರ್ಖಾ, ಶಾಲು, ಟೋಪಿ ಇತ್ಯಾದಿಗಳನ್ನು ಧರಿಸುವುದನ್ನು ನಿಷೇಧಿಸಿದ್ದ ಮುಂಬೈ ಕಾಲೇಜಿನ ನಿರ್ಧಾರ ಪ್ರಶ್ನಿಸಿ ಒಂಬತ್ತು ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಬುಧವಾರ (ಜೂನ್ 26) ವಜಾಗೊಳಿಸಿದೆ.

ಮುಂಬೈ:  ಕ್ಯಾಂಪಸ್‌ನೊಳಗೆ ಹಿಜಾಬ್, ನಕಾಬ್, ಬುರ್ಖಾ, ಶಾಲು, ಟೋಪಿ ಇತ್ಯಾದಿಗಳನ್ನು ಧರಿಸುವುದನ್ನು ನಿಷೇಧಿಸಿದ್ದ ಮುಂಬೈ ಕಾಲೇಜಿನ ನಿರ್ಧಾರ ಪ್ರಶ್ನಿಸಿ ಒಂಬತ್ತು ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಬುಧವಾರ (ಜೂನ್ 26) ವಜಾಗೊಳಿಸಿದೆ.

Ad
300x250 2

ನ್ಯಾಯಮೂರ್ತಿ ಎ.ಎಸ್.ಚಂದೂರ್ಕರ್ ಮತ್ತು ನ್ಯಾಯಮೂರ್ತಿ ರಾಜೇಶ್ ಪಾಟೀಲ್ ಅವರ ವಿಭಾಗೀಯ ಪೀಠ,’ಕಾಲೇಜಿನ ಡ್ರೆಸ್‌ಕೋಡ್‌ ನಿರ್ಧಾರದಲ್ಲಿ ನಾವು ಮಧ್ಯ ಪ್ರವೇಶಿಸುವುದಿಲ್ಲ’ ಎಂದಿದೆ.

“ಅರ್ಜಿದಾರರು ಕಾಲೇಜಿಗೆ ಪ್ರವೇಶ ಪಡೆಯುವಾಗಲೇ ಡ್ರೆಸ್ ಕೋಡ್ ಬಗ್ಗೆ ತಿಳಿದಿದ್ದರು ಎಂದು ಅಂತೂರಕರ್ ಒತ್ತಿ ಹೇಳಿದ್ದರು. ಭವಿಷ್ಯದಲ್ಲಿ ಯಾರಾದರೂ ಇತರ ಧಾರ್ಮಿಕ ಚಿಹ್ನೆಗಳಾದ ಗದಾ (ಮಚ್ಚು) ಅಥವಾ ಭಗವಾ (ಕೇಸರಿ) ಬಟ್ಟೆಗಳನ್ನು ಧರಿಸಿದರೆ, ಅದನ್ನೂ ಕೂಡ ಕಾಲೇಜು ಆಕ್ಷೇಪಿಸುತ್ತದೆ” ಎಂದು ತಿಳಿಸಿದ್ದರು.

Ad
Ad
Nk Channel Final 21 09 2023
Ad