Ad

ಬಿಜೆಪಿಗೆ ಮತ ನೀಡಿದ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿರಾಯ

Taaq

ಮಧ್ಯಪ್ರದೇಶ: ಬಿಜೆಪಿಯನ್ನು ಬೆಂಬಲಿಸಿದಕ್ಕೆ ಪತಿ ತ್ರಿವಳಿ ತಲಾಖ್‌ ನೀಡಿದ್ದಾನೆ ಎಂದು ಆರೋಪಿಸಿ ಮಧ್ಯಪ್ರದೇಶದ ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆದರೆ ಇದನ್ನು ತಳ್ಳಿಹಾಕಿರುವ ಪತಿ ಆಕೆಗೆ ಅಕ್ರಮ ಸಂಬಂಧಗಳಿದ್ದವು ಎಂದಿದ್ದಾನೆ.8 ವರ್ಷಗಳ ಹಿಂದೆ ಅವರಿಬ್ಬರು ವಿವಾಹವಾಗಿದ್ದು ಮೊದಲ ಕೆಲ ಕಾಲ ಯಾವುದೇ ತೊಂದರೆಯಿರಲಿಲ್ಲ.

Ad
300x250 2

ನಂತರ ಆಕೆಯ ಅತ್ತೆ ನಾದಿನಿಯರು ಹಿಂಸಿಸತೊಡಗಿದ್ದು ಒಂದೂವರೆ ವರ್ಷಗಳ ಕಾಲ ಮನೆಯಿಂದ ಹೊರಹಾಕಿದ್ದರು ಎಂದು ಕೋತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಉಮೇಶ್ ಗೊಲ್ಹಾನಿ ಮಾಹಿತಿ ನೀಡಿದ್ದಾರೆ.

ದೂರಿನ ಪ್ರಕಾರ ಮಹಿಳೆ ಪಕ್ಷವೊಂದನ್ನು ಬೆಂಬಲಿಸಿ ಮತ ಹಾಕಿದ್ದು ಆಕೆಯ ಪತಿಗೆ ಇಷ್ಟವಾಗದೆ ವಿಚ್ಛೇದನ ಕೋರಿದ್ದಾನೆ. ಇದರ ಆಧಾರದಲ್ಲಿ ಸಂತ್ರಸ್ತೆಯ ಪತಿ, ಅತ್ತೆ ಹಾಗೂ 4 ನಾದಿನಿಯರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲೂ ಮಹಿಳೆ ಪಾಲ್ಗೊಂಡಿದ್ದರು ಅನ್ನೋ ಮಾಹಿತಿಯೂ ಬಹಿರಂಗವಾಗಿದೆ. ಇದು ಪತಿಯ ಆಕ್ರೋಶಕ್ಕೆ ಕಾರಣವಾಗಿತ್ತು.

3 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಆಕೆ ಅನ್ಯರೊಂದಿಗೆ ಸಂಬಂಧ ಹೊಂದಿದ್ದು ಮಕ್ಕಳಿ ಒಳಿತಿಗಾಗಿ ಸುಧಾರಿಸಿಕೊಳ್ಳಲು ಅವಕಾಶವನ್ನೂ ಕೊಟ್ಟಿದ್ದೆ. ನಂತರ ಮುಸ್ಮಿಂ ಕಾನೂನಿನ ಪ್ರಕಾರ 2022ರ ಮಾ.30ರಲ್ಲಿ ಮೊದಲ ಹಾಗೂ 2023ರ ಅಕ್ಟೋಬರ್ ಮತ್ತು ನವೆಂಬರ್‌ಗಳಲ್ಲಿ ಎರಡು ತಲಾಕ್ ನೀಡಿದ್ದೇನೆ ಎಂದು ಪತಿ ಹೇಳಿದ್ದಾನೆ.

Ad
Ad
Nk Channel Final 21 09 2023
Ad