Bengaluru 24°C
Ad

ಮತ್ತೆ ಡೀಪ್ ಫೇಕ್ ಸುಳಿಯಲ್ಲಿ ಸಿಲುಕಿದ ನ್ಯಾಷನಲ್ ಕ್ರಶ್

Rashmika

ರಶ್ಮಿಕಾ ಮಂದಣ್ಣ ಮತ್ತೆ ಮತ್ತೆ ಡೀಪ್‍ ಫೇಕ್‍ಗೆ ಒಳಗಾಗುತ್ತಿದ್ದಾರೆ. ಈಗಾಗಲೇ ಡಿಪ್ ಫೇಕ್‍ ಗೆ ಸಂಬಂಧಿಸಿದಂತೆ ಕೆಲವರನ್ನು ಅರೆಸ್ಟ್ ಮಾಡಿದ್ದರೂ ಬುದ್ದಿ ಕಲಿಯದ ಕಿಡಿಗೇಡಿಗಳು ಮತ್ತೆ ಅದೇ ಕೆಲಸ ಮಾಡಿದ್ದಾರೆ. ಮಾಡೆಲ್ ಕಂ ಕಂಟೆಂಟ್ ಕ್ರಿಯೇಟರ್ ಡೇನಿಯಾಲ ವಿಲ್ಲಾರ್ರಿಯಲ್ ಅವರ ವಿಡಿಯೋಗೆ ರಶ್ಮಿಕಾರ ಮುಖವನ್ನು ಅಂಟಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡಲಾಗಿದೆ.

ರಶ್ಮಿಕಾ ಅವರ ಡೀಪ್ ಫೇಕ್ ವಿಡಿಯೋವನ್ನು ಮೂಲತಃ ವೀಡಿಯೊವನ್ನು ಏಪ್ರಿಲ್ 19, 2024 ರಂದು ತನ್ನ Instagram ಪ್ರೊಫೈಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಅದೇ ಬಿಕಿನಿಯಲ್ಲಿರುವ ವಿಲ್ಲಾರ್ರಿಯಲ್ ಅವರ ಇತರ ಚಿತ್ರಗಳು ಮತ್ತು ವೀಡಿಯೊಗಳ ಜೊತೆಗೆ ವಿಡಿಯೋದಲ್ಲಿರುವುದು ಮೂಲ ವ್ಯಕ್ತಿಯೇ ಹೊರತು ರಶ್ಮಿಕಾ ಮಂದಣ್ಣ ಅಲ್ಲ ಎನ್ನುವುದು ರಿವೀಲ್ ಆಗಿದೆ.

ವಿಡಿಯೋವನ್ನು ಫೇಸ್‌ಬುಕ್ , ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳಲಾಗಿದೆ . ಒಂದು ಪೋಸ್ಟ್ 45,000 ಕ್ಕೂ ಹೆಚ್ಚು ಇಷ್ಟಗಳನ್ನು ಮತ್ತು ಸುಮಾರು 300 ಶೇರ್‌ಗಳನ್ನು ಗಳಿಸಿದೆ.

ಡೀಪ್ ಫೇಕ್‍ ಅನ್ನು ಸೀರಿಯಸ್ ಆಗಿ ತೆಗೆದುಕೊಂಡಿದೆ ಕರ್ನಾಟಕ ಸರಕಾರ. ರಾಜ್ಯ ಸರ್ಕಾರದ 2024-25ನೇ ಸಾಲಿನ ಬಜೆಟ್ ಮಂಡನೆ ಆಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ, ತಮ್ಮ ಬಜೆಟ್ ನಲ್ಲಿ ಡೀಪ್ ಫೇಕ್ ವಿರುದ್ಧ ಸಮರ ಸಾರಿದ್ದಾರೆ. ಡೀಪ್ ಫೇಕ್ ನಂತ ಸೈಬರ್ ಅಪರಾಧಗಳ ವಿರುದ್ದ ಕ್ರಮಕ್ಕೆ 43 ಸಿಇಎನ್ ಪೊಲೀಸ್ ಠಾಣೆ ಉನ್ನತಿಕರಣಕ್ಕೆ ನಿರ್ಧಾರ ಮಾಡಲಾಗಿದೆ. ಈ ಮೂಲಕ ಕನ್ನಡತಿ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವರಿಗೆ ಕಾಡುತ್ತಿದ್ದ ಡೀಪ್ ಫೇಕ್ ಭೂತಕ್ಕೆ ಕಡಿವಾಣ ಹಾಕಲು ಮುಂದಾಗಿದೆ.

Ad
Ad
Nk Channel Final 21 09 2023
Ad