Ad

“ಅಮಾವಾಸ್ಯೆ ದಿನ ಸೂರಜ್‌ ರೇವಣ್ಣ ಬಳೆ ತೊಡ್ತಾನೆ, ಸೀರೆ ಉಡ್ತಾನೆ”

Sooraj

ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಈಗ ಪೊಲೀಸ್‌ ವಶದಲ್ಲಿರುವ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಬಗ್ಗೆ ಸಂತ್ರಸ್ತ ಯುವಕ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಸೂರಜ್‌ ರೇವಣ್ಣ ಅಮಾವಾಸ್ಯೆ ದಿನ ಬಳೆ ತೊಟ್ಟು, ಸೀರೆ ಉಡುತ್ತಾರೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

Ad
300x250 2

ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಹಿರಿಯ ಪುತ್ರ ಸೂರಜ್‌ ರೇವಣ್ಣನನ್ನು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ವಶದಲ್ಲಿಟ್ಟುಕೊಂಡಿದ್ದಾರೆ. ಸೂರಜ್ ರೇವಣ್ಣ ಅವರ ಕುರಿತು ಜೆಡಿಎಸ್ ಕಾರ್ಯಕರ್ತ ಹಾಗೂ ಸಂತ್ರಸ್ತ ಯುವಕ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಬೆಚ್ಚಿಬೀಳುವಂತಹ ಈ ಮಾಹಿತಿ ನೀಡಿದ್ದಾರೆ.

2019ರ ಚುನಾವಣೆ ಸಂದರ್ಭದಲ್ಲಿ ನಾನು ಅವರನ್ನು ಭೇಟಿ ಮಾಡಿದ್ದೆ. ಅರಕಲಗೂಡಿನಲ್ಲಿ ಜೆಡಿಎಸ್ ಕಾರ್ಯಕ್ರಮ ಚೆನ್ನಾಗಿ ಮಾಡಿದ್ದೆ. ಈ ವೇಳೆ ಕಾರ್ಯಕ್ರಮ ಚೆನ್ನಾಗಿ ಮಾಡಿದೀಯ ಅಂತ ನನ್ನನ್ನು ಹೊಗಳಿ ನನ್ನ ಫೋನ್‌ ನಂಬರ್ ಅನ್ನು ತೆಗೆದುಕೊಂಡರು. ನಂತರ ಅವರ ವಿಸಿಟಿಂಗ್ ಕಾರ್ಡ್ ಕೊಟ್ಟರು. ನಂತರ ಅವರು ನನ್ನ ಜೊತೆಗೆ ದೂರವಾಣಿಯಲ್ಲಿ ಮಾತನಾಡಿದರು ಎಂದಿದ್ದಾರೆ.

ಸೂರಜ್ ರೇವಣ್ಣ ಅವರು ಗುಡ್‌ ಇವಿನಿಂಗ್ ಮೆಸೇಜ್ ಜತೆ ಲವ್ ಸಿಂಬಲ್ ಕಳಿಸಿ ಮಾತು ಆರಂಭಿಸಿದರು. ಬಳಿಕ ಫಾರ್ಮ್‌ಹೌಸ್‌ಗೆ ಒಂಟಿಯಾಗಿ ಕರೆಸಿಕೊಂಡು ಬಲಾತ್ಕಾರದಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಸಂತ್ರಸ್ತ ಜೆಡಿಎಸ್ ಕಾರ್ಯಕರ್ತ ಹೇಳಿದ್ದಾರೆ.  ಸೂರಜ್ ರೇವಣ್ಣಗೆ ಎರಡು ವ್ಯಕ್ತಿತ್ವ ಇದೆ. ಅವರು ಸಾರ್ವಜನಿಕ ಜೀವನದಲ್ಲಿ ಇರುವುದಕ್ಕೆ ವಿರುದ್ಧವಾಗಿ ಒಳಗಡೆ ಇರುತ್ತಾರೆ. ಸೂರಜ್ ರೇವಣ್ಣ ಕಾಮುಕ, ಹೊರಗೆ ಒಂದು ಮುಖ, ಒಳಗೆ ಇನ್ನೊಂದು ಮುಖ. ಅಮಾವಾಸ್ಯೆ ದಿನ ಬಳೆ ತೊಡ್ತಾನೆ, ಸೀರೆ ಉಡ್ತಾನೆ.  ನನ್ನನ್ನು ಒಂದು ದಿನ ರೂಮ್ ಒಳಗೆ ಕರೆದುಕೊಂಡು ಹೋದ್ರು.

ನಂತರ ನನ್ನ ಕಾಲು ಒತ್ತುವಂತೆ ಹೇಳಿದರು. ನಾನು ಕಾಲು ಒತ್ತಿದೆ.. ಮುಂದೆ ಏನಾಯ್ತು ಅಂತ ನಾನು ಹೇಳಲು ಸಾಧ್ಯವಿಲ್ಲ ಎಂದು ಸಂತ್ರಸ್ತ ಯುವಕ ವಿವರಿಸಿದ್ದಾರೆ.

 

Ad
Ad
Nk Channel Final 21 09 2023
Ad