Ad

ನಂದಿನಿ ಹಾಲಿಗೆ ಹೊಸ ದರ, ಹಳೆ ಪ್ಯಾಕೆಟ್‌: ಗ್ರಾಹಕರ ಆಕ್ರೋಶ

ಕೆಎಂಎಫ್ ನಂದಿನಿ ಹಾಲಿನ ದರ ಹೆಚ್ಚಳ ಮಾಡಿದ್ದು, ಇಂದಿನಿಂದಲೇ ಹೊಸ ದರ ಅನ್ವಯವಾಗುತ್ತಿದೆ. ಹಳೆಯ ದರದ ಪ್ಯಾಕೆಟ್‌ಗಳನ್ನು ಹೊಸ ದರದಲ್ಲಿ ಮಾರಾಟ ಮಾಡುತ್ತಿದ್ದು, ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಯಚೂರು: ಕೆಎಂಎಫ್ ನಂದಿನಿ ಹಾಲಿನ ದರ ಹೆಚ್ಚಳ ಮಾಡಿದ್ದು, ಇಂದಿನಿಂದಲೇ ಹೊಸ ದರ ಅನ್ವಯವಾಗುತ್ತಿದೆ. ಹಳೆಯ ದರದ ಪ್ಯಾಕೆಟ್‌ಗಳನ್ನು ಹೊಸ ದರದಲ್ಲಿ ಮಾರಾಟ ಮಾಡುತ್ತಿದ್ದು, ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ad
300x250 2

ಹೆಚ್ಚುವರಿ 50 M.L ಹಾಲು ಇಲ್ಲದಿದ್ದರೂ ಪ್ರತಿ ಅರ್ಧ ಲೀಟರ್ ಹಾಗೂ ಒಂದು ಲೀಟರ್ ಪ್ಯಾಕೆಟ್‌ಗೆ ಹೆಚ್ಚುವರಿ 2 ರೂ. ಪಡೆಯಲಾಗುತ್ತಿದೆ.

ಕೆಎಂಎಫ್ ಹೊರಡಿಸಿರುವ ಆದೇಶದಲ್ಲಿ ಜೂನ್ 26 ರಿಂದಲೇ ಹೊಸ ದರ ಅನ್ವಯವಾಗುತ್ತದೆ ಅಂತ ನಮೂದಿಸಿರುವುದರಿಂದ ಹೊಸ ದರದಲ್ಲಿ ಮಾರಾಟ ಮಾಡುತ್ತಿರುವುದಾಗಿ ವ್ಯಾಪಾರಿಗಳು ಹೇಳುತ್ತಿದ್ದಾರೆ.

ಕೆಎಂ‌ಎಫ್ ಅಧಿಕಾರಿಗಳು ಸೋಮವಾರ ರಾತ್ರಿ ಬಂದ ಹಾಲನ್ನು ಹಳೆ ದರಕ್ಕೆ ಮಾರಾಟ ಮಾಡಬೇಕು. ಇಂದು ಸಂಜೆ ಬರುವ ಹಾಲಿನ ಪ್ಯಾಕೆಟ್‌ ಅನ್ನ ಹೊಸ ದರಕ್ಕೆ ಮಾರಾಟ ಮಾಡಬೇಕು ಅಂತ ವ್ಯಾಪಾರಿಗಳಿಗೆ ಸೂಚಿಸಿರುವುದು ಇದೀಗ ವ್ಯಾಪಾರಿಗಳು ಹಾಗೂ ಗ್ರಾಹಕರು ಗೊಂದಲಕ್ಕೆ ಸಿಲುಕುವಂತಾಗಿದೆ. ಹಳೆ ಪ್ಯಾಕೆಟ್‌ಗಳಿಗೆ ಹೊಸ ದರ ಅನ್ವಯಿಸುತ್ತಿರುವುದಕ್ಕೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ad
Ad
Nk Channel Final 21 09 2023
Ad